ಯೋಜನೆಗಳ ಫಲಾನುಭವಿಗಳಿಗೆ ತಲುಪಿಸಿ


ಚನ್ನಮ್ಮನ ಕಿತ್ತೂರು,ಜೂ.15: ಕೇಂದ್ರ ಹಾಗೂ ರಾಜ್ಯ ಸರ್ಕಾರ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಕೆನರಾ ಲೋಕಸಭಾ ಮತಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಸಮೀಪದ ಖಾನಾಪೂರ ತಾಲೂಕ ಪಟ್ಟಣದ ತಾಪಂ ಸಭಾಭವನದಲ್ಲಿ ಏರ್ಪಡಿಸಿದ ತಾಲೂಕಾ ಮಟ್ಟದ ಅಧಿಕಾರಿಗಳ ಪಿಡಿಓ ಮತ್ತು ಗ್ರಾಪಂ ಲೆಕ್ಕಿಗರ ಸಭೆ ಉದ್ದೇಶಿಸಿ ಮಾತನಾಡಿದವರು ಸಾರ್ವಜನಿಕರು ಕಛೇರಿಗೆ ಭೇಟಿ ನೀಡಿದಾಗ ಸೌಮ್ಯದಿಂದ ವರ್ತಿಸಿ ಮತ್ತು ಕಛೇರಿಗಳನ್ನು ಸ್ವಚ್ಛತೆ ಜೊತೆಗೆ ಅಂದವಾಗಿಟ್ಟಕೊಳ್ಳಬೇಕು ಎಂದು ಖಡಕ್ಕಾಗಿ ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಮಳೆಗಾಲದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ರಸ್ತೆ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸನ್ನದ್ಧರಾಗಬೇಕು.
ಗುತ್ತಿಗೆದಾರರ ನಿರ್ಲಕ್ಷದಿಂದ ರಸ್ತೆ ಅಪಘಾತಗಳು ನಡೆದಲ್ಲಿ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆಗಾರರು. ಮತ್ತು ಪ್ರವಾಹ ಎದುರಿಸಲು ಈಗಿನಿಂದಲೇ ಅಧಿಕಾರಿಗಳೆಲ್ಲರೂ ಬದ್ಧರಾಗಬೇಕು. ತಾಲೂಕಿನಲ್ಲಿ ಗಾಂಜಾ ಮಾರಾಟ ಮತ್ತು ಅವುಗಳ ಸೇವನೆಯಿಂದ ಸಮಾಜದ್ರೋಹಿ ಕೆಲಸ ನಡೆಯುತ್ತಿ ಅದಕ್ಕಾಗಿ ಕೂಡಲೇ ಅಧಿಕಾರಿಗಳು ಎಚ್ಚರ ವಹಿಸಬೇಕು ತಾಲೂಕನ್ನು ಗಾಂಜಾ ಮುಕ್ತವನ್ನಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕೈಜೋಡಿಸೋಣ. ಬೀಟ್ ಪೋಲಿಸರು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ಅಕ್ರಮಗಳ ಮೇಲೆ ನಿಗಾವಹಿಸಬೇಕು. ಕಾನೂನು ವ್ಯವಸ್ಥೆಗೆ ಕುಂದು ತರುವವರ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಜೆಜಿಎಂ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಪೈಪಲೈನ್ ಅಳವಡಿಸಲು ತೆರೆದಿದ್ದ ಗುಂಡಿಗಳನ್ನು ಮುಚ್ಚಬೇಕೆಂದರು.
ಅಧಿಕಾರಿಗಳ ಸಭೆಯ ನಂತರ ಶಿವಸ್ಮಾರಕ ಸಭಾಭವನದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ತಹಶೀಲ್ದಾರ, ತಾಪಂ ಇಓ ಸೇರಿದಂತೆ ತಾಲೂಕಿನ ವಿವಿಧ ಅಧಿಕಾರಿಗಳು ಸಿಬ್ಬಂದಿ, ಪಿಡಿಓ, ಗ್ರಾಮ ಲೆಕ್ಕಿಗರಿದ್ದರು. ಈ ವೇಳೆ ಶಾಸಕ ವಿಠ್ಠಲ ಹಲಗೇಕರ, ಬ್ಲಾಕ ಅಧ್ಯಕ್ಷ ಸಂಜಯ ಕೂಬಲ್, ಜಿಲ್ಲಾಉಪಾಧ್ಯಕ್ಷ ಪ್ರಮೋದ ಕೊಚೇರಿ, ಜೆಡಿಎಸ್ ಮುಖಂಡ ನಾಶೀರ ಬಾಗವಾನ, ಬಿಜೆಪಿ ಮಾಜಿ ಜಿಪಂ, ತಾಪಂ ಸದಸ್ಯರು, ಮುಖಂಡರು, ಕಾರ್ಯಕರ್ತರು, ಬಿಜೆಪಿ, ಜೆಡಿಎಸ್ ಕಾರ್ಯಕರ್ತರು , ಮಹಿಳೆಯರಿದ್ದರು. ಅಪ್ಪಯ್ಯಾ ಡೊಳ್ಳಿನ ಸ್ವಾಗತಿಸಿದರು. ಬಸವರಾಜ ಸಾಣಿಕೊಪ್ಪ ನಿರೂಪಿಸಿದರು, ಸದಾನಂದ ಪಾಟೀಲ ವಂದಿಸಿದರು.