ಯೋಜನೆಗಳ ಅನುಮತಿಗೆ ಮನವಿ

ಬಳ್ಳಾರಿ, ಅ.30: ಕರ್ನಾಟಕ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರನ್ನು ಭೇಟಿ ಮಾಡಿದ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅವರು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವಿವಿಧ ಯೋಜನೆಗಳಿಗೆ ಅನುಮತಿ ನೀಡುವಂತೆ ಕೋರಿದರು.
ಮಾಸ್ಟರ್ ಪ್ಲಾನ್ (ಶ್ರೀಧರಗಡ್ಡೆ, ಸಿರಿವಾರ, ಕಪ್ಪಗಲ್ಲು, ಬೈರದೇವನಹಳ್ಳಿ, ಚಾಗನೂರು, ಅಮರಾಪುರ, ಗೋಡೆಹಾಳ್, ತೆಗ್ಗಿನ ಬೂದಿಹಾಳ್, ಬೊಬ್ಬುಕುಂಟೆ, ಬುರನಾಯಕನಹಳ್ಳಿ, ಕೋಳೂರು, ಸೋಮಸಮುದ್ರ) ವಿಸ್ತರಿಸುವ ಕುರಿತು ಹಾಗೂ ಮರು ಟೆಂಡರ್ ಮಾಡುವ ಬಗ್ಗೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ರೈತರೊಂದಿಗೆ 50:50 ಅನುಪಾತದಲ್ಲಿ ಬಿ.ಗೋನಾಳ್ ಬಳಿ ಅಭಿವೃದ್ಧಿ ಪಡಿಸುತ್ತಿರುವ ನಿವೇಶನ ಯೋಜನೆಗೆ ರೈತರಿಂದ ಭೂಮಿಯನ್ನು ಪ್ರಾಧಿಕಾರಕ್ಕೆ ನೋಂದಣಿ ಮಾಡಿಕೊಳ್ಳಲು ಅನುಮತಿ ನೀಡಬೇಕೆಂದು‌ ಮನವಿ‌ ಮಾಡಿದ್ದಾರೆ.