ಯೋಜನೆಗಳು ಸಕಾಲಕ್ಕೆ ಜನರಿಗೆ ತಲುಪಬೇಕು ಶಾಸಕ ಪಾಟೀಲ


ಚನ್ನಮ್ಮನ ಕಿತ್ತೂರ,ಮೇ.27: ತಾಲೂಕಿನ ಎಲ್ಲ ಇಲಾಖೆಗಳು ಕೇಂದ್ರ ಸ್ಥಾನದಲ್ಲಿದ್ದು ಜನರಿಗೆ ಸ್ಪಂದಿಸಬೇಕೆಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ನೂತನ ಶಾಸಕರ ಪ್ರಥಮ ಪ್ರಗತಿ ಪರಿಶೀ¯ನಾ ಸಭೆ(ಕೆಡಿಪಿ) ಜರುಗಿತು. ತಾ.ಪಂ. ಸಿಬ್ಬಂದಿಯವರಿಂದ ಶಾಸಕರು ಸತ್ಕಾರ ಸ್ವೀಕರಿಸಿ ಸಭೆಯ ಅಧ್ಯಕ್ಷತೆ ವಹಿಸಿ. ಮಾತನಾಡಿದವರು. ಜನರಿಗೆ ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ತಲುಪಿಸುವುದರ ಮೂಲಕ ಅತ್ಯಂತ ವೇಗವಾಗಿ ಅಭಿವೃದ್ಧಿ ಸಾಧಿಸಲು ಅಧಿಕಾರಿ ವೃಂದ ಪ್ರಾಮಾಣಿಕ ಸಹಕಾರ ನೀಡಬೇಕೆಂದರು.
ನಾನು ಕಿತ್ತೂರು ತಾಲೂಕಿಗೆ ಹೊಸ ಮೆರಗು ತರುವುದರಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ. ನನ್ನ ಜೊತೆಯಲ್ಲಿ ತಾಲೂಕಿನ ಎಲ್ಲ ಅಧಿಕಾರಿಗಳು ಸಹಕರಿಸಬೇಕು. ಪ್ರತಿಯೊಬ್ಬ ಅಧಿಕಾರಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅವರ ಸಮಸ್ಯೆಗಳನ್ನು ಆಲಿಸಿ ಆದಷ್ಟು ಬೇಗನೆ ಕೆಲಸ ಮಾಡಿಕೊಡಬೇಕೆಂದು ತಿಳಿಸಿದರು.
ಅಧಿಕಾರಿಗಳಿಗೆ ನನ್ನ ಅವಧಿಯಲ್ಲಿ ಯಾವುದೇ ತರಹದ ತೊಂದರೆ ಕೊಡುವುದಿಲ್ಲ. ಆದರೆ ಜನರ ಕೆಲಸಗಳನ್ನು ನಿಲ್ಲಿಸಬಾರದು ಕಾನೂನಿನ ಚೌಕಟ್ಟಿನಡಿಯಲ್ಲಿಯೇ ನೀವು ಸೇವೆ ಮಾಡಿ. ತಾಲೂಕು ಸಮಗ್ರ ಅಭಿವೃದ್ದಿಯಾಗಬೇಕಾದರೆ ಗುಣಮಟ್ಟದ ಶಿಕ್ಷಣ, ಕುಡಿಯುವ ನೀರು, ರಸ್ತೆ, ಸಾರಿಗೆ-ಸಂಪರ್ಕ, ಕೃಷಿ ಕಾರ್ಯಕ್ಕೆ ಬೀಜ ವಿತರಣೆ ಸೇರಿದಂತೆ ಎಲ್ಲ ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ತಾಲೂಕಾ ಎಲ್ಲ ಅಧಿಕಾರಿಗಳು ಕೈಜೋಡಿಸಿ ಎಲ್ಲರೂ ಜೊತೆಗೂಡಿ ಶ್ರಮಿಸೋಣ ಎಂದರು.
ತಹಶೀಲ್ದಾರ ರವೀಂದ್ರ ಹಾದಿಮನಿ ಮಾತನಾಡಿ ಪ್ರತಿಯೊಂದು ಇಲಾಖೆಯಲ್ಲಿ ಅಧಿಕಾರಿಗಳು ದಕ್ಷ ಪ್ರಾಮಾಣಿಕತೆ ಕಾಪಾಡಿಕೊಂಡು ಕೆಲಸ ಮಾಡಲಾಗುವುದು. ಉತ್ತಮ ತಾಲೂಕು ಕಟ್ಟಲು ಪ್ರಾಮಾಣಿಕವಾಗಿ ಶ್ರಮವಹಿಸಿ ಕಾರ್ಯನಿರ್ವಹಿಸುತ್ತವೆಂದರು.
ಈ ವೇಳೆ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಆರ್.ಪಿ. ಖಾನಾಪುರೆ, ಶಿಕ್ಷಣಾಧಿಕಾರಿ ಆರ್.ಟಿ.ಬಳಿಗಾರ, ಕೃಷಿ ಇಲಾಖೆ ಮಂಜುನಾಥ ಕೆಂಚರಾವುತ, ತಾ.ಪಂ. ಸಹಾಯಕರುಗಳಾದ ಸುರೇಶ ನಾಗೋಜಿ, ನಿಂಗರಾಜ ಹಲಕರ್ಣಿಮಠ, ಈರಣ್ಣಾ ಕಂಬಾರ, ನಾಗೇಶ ಪೂಜಾರ, ಅಕ್ಷರ ದಾಸೋಹ ಪ್ರಕಾಶ ಮೆಳವಂಕಿ, ಕಾರ್ಯದರ್ಶಿ ರವಿ ಉಡಕೇರಿ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.