ಯೋಚಿಸಿ ಮತ ಚಲಾಯಿಸಿ- ಎಂ.ವೆಂಕಟಸ್ವಾಮಿ

ಕೋಲಾರ,ಮಾ.೧೮ ಕರ್ನಾಟಕ ಮೂಲವಾಸಿ ಮಹಾಸಭಾ ಕೋಲಾರ ಜಿಲ್ಲಾ ಘಟಕದ ವತಿಯಿಂದ ಜನಜಾಗೃತಿ ಕಾರ್ಯಕ್ರಮವನ್ನು ನಗರದ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಇದಕ್ಕೂ ಮುನ್ನಾ ಬಂಗಾರಪೇಟೆ ವೃತ್ತದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಜೆಡಿಎಸ್ ಅಭ್ಯರ್ಥಿಯಾಗಿರುವ ಸಿ.ಎಂ.ಆರ್.ಶ್ರೀನಾಥ್ ಹಾಗೂ ಚಳುವಳಿ ರಾಜಣ್ಣ ಮಾಲಾರ್ಪಣೆ ಮಾಡಿ ಕಾಲ್ನಡಿಗೆ ಜಾಥಕ್ಕೆ ಚಾಲನೆ ನೀಡಿದರು ಹಾಗೂ ವಾಲ್ಮೀಕಿ ವೃತ್ತದಲ್ಲಿ ವಾಲ್ಮೀಕಿ ರವರಿಗೆ ಮಾಲಾರ್ಪಣೆ ಮಾಡಿ ರಂಗಮಂದಿರದಲ್ಲಿ ನಡೆದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾದರು.
ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮತಾ ಸೈನಿಕದಳ ರಾಜ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ, ಮೂಲ ನಿವಾಸಿಗಳು ಎಲ್ಲರೂ ಒಗ್ಗಟ್ಟಾಗಿ ಇರಬೇಕು ಯೋಚಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು. ಬಾಬಾ ಸಾಹೇಬರ ಸಿದ್ಧಾಂತಗಳ ಬಗ್ಗೆ ತಿಳಿಸಿಕೊಟ್ಟರು.
ಕರ್ನಾಟಕ ಮೂಲವಾಸಿ ಮಹಾಸಭಾ ರಾಜ್ಯಾಧ್ಯಕ್ಷ ಚಳುವಳಿ ರಾಜಣ್ಣ ಮಾತನಾಡಿ, ಮತದ ಮಹತ್ವವನ್ನು ಜನರಿಗೆ ತಿಳಿಸಿಕೊಟ್ಟರು ಹಾಗೂ ಮೂಲ ನಿವಾಸಿಗಳು ಯಾವ ರೀತಿ ಇರಬೇಕು ಸಂವಿಧಾನದಲ್ಲಿ ಇರುವಂತಹ ಹಕ್ಕುಗಳನ್ನು ಹೇಗೆ ಪಡೆಯಬೇಕು. ವಿದ್ಯಾಭ್ಯಾಸದ ಮಹತ್ವವನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ ಮುಳುಬಾಗಿಲು ಅಂಜು ಬಾಸ್, ರಾಜ್ಯ ಉಪಾಧ್ಯಕ್ಷೆ ಮೇರಿ ರಾಜನ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷೆ ವರಲಕ್ಷ್ಮಿ, ಜಿಲ್ಲಾಧ್ಯಕ್ಷ ನರಸಾಪುರ ನಾಗರಾಜ್, ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ವೇದಿಕೆ ಸಂಸ್ಥಾಪಕರಾದ ಅವನಿಕ ನಾಗರತ್ನ, ಇತಿಹಾಸ ಸಂಶೋಧಕ ಕೆ.ನಾಗೇಶ್, ಶ್ರೀವಾಲ್ಮೀಕಿ ಯುವಕರ ಸಂಘದ ರಾಜ್ಯಾಧ್ಯಕ್ಷ ಎಸ್.ಪ್ರಸಾದ್, ವಾಲ್ಮೀಕಿ ಕ್ರಾಂತಿಸೇನೆ ರಾಜ್ಯಾಧ್ಯಕ್ಷ ಶ್ರೀಧರ್ ನಾಯಕ, ಎಸ್.ಸಿ/ಎಸ್.ಟಿ ಆಯೋಗದ ದಿವಾಕರ್, ನಾರಾಯಣಸ್ವಾಮಿ,ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ನಾಯಕ, ಜಿಲ್ಲಾ ಸಂಚಾಲಕ ಧಮ್ಮು ಮಿತ್ರ ವಿಜಯಕುಮಾರ್, ಜಿಲ್ಲಾಧ್ಯಕ್ಷೆ ಕಾಂತಮ್ಮ, ಕೋಲಾರ ತಾಲೂಕು ಅಧ್ಯಕ್ಷ ನಾಗರಾಜು ಕಿತ್ತಂಡೂರು, ಜಿಲ್ಲಾ ಕಾರ್ಯದರ್ಶಿ ಆನಂದ್ ನಾಯಕ್, ಜಿಲ್ಲಾ ಸಹ ಸಂಚಾಲಕ ಗುಮ್ಮರೆಡ್ಡಿಪುರ ರವಿ, ಮಾಲೂರು ತಾಲೂಕು ಅಧ್ಯಕ್ಷ ಅಶೋಕ್, ಮಾಲೂರು ತಾಲೂಕು ಅಧ್ಯಕ್ಷೆ ನಾರಾಯಣಮ್ಮ, ಮುಳಬಾಗಿಲು ತಾಲೂಕು ಅಧ್ಯಕ್ಷೆ ಮಹಿಳಾ ಘಟಕ ವಿಜಯಶಾಂತಿ, ಹಿರಿಯ ಮುಖಂಡ ಕೆಂಚಪ್ಪ, ಕೆಜಿಎಫ್ ತಾಲೂಕ ಅಧ್ಯಕ್ಷ ಸತೀಶ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಗಂಗಾಧರ್, ಮುಳಬಾಗಿಲು ತಾಲೂಕು ಯುವ ಘಟಕದ ಅಧ್ಯಕ್ಷ ಪವನ್, ಶ್ರೀನಿವಾಸಪುರ ತಾಲೂಕು ಅಧ್ಯಕ್ಷೆ ರಾಧಮ್ಮ, ಕೋಲಾರ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕುರುಗಲ್ ನಾಗರಾಜು, ಜಿಲ್ಲಾ ಘಟಕದ ಕುಮಾರ್, ಯುವ ಘಟಕದ ಸಂಚಾಲಕ ಸಿದ್ಧರಾಜು, ಹಿರಿಯ ಮುಖಂಡರಾದ ಐತರಾಸನಹಳ್ಳಿ ನರಸಿಂಹಪ್ಪ, ಕಲ್ಕೆರೆ ನಾಗರಾಜ್ ಉಪಸ್ಥಿತರಿದ್ದರು.