ಚನ್ನಮ್ಮನ ಕಿತ್ತೂರು,ಜೂ22: ಯೋಗ ಮನುಷ್ಯನ್ನು ಸದೃಢ ದೇಹ, ಮನಸ್ಸು ಮತ್ತು, ದೈಹಿಕ, ಮಾನಸಿಕವಾಗಿ ಆರೋಗ್ಯವಂತ, ಬುದ್ಧಿವಂತನನ್ನಾಗಿ ಪರಿವರ್ತಿಸುತ್ತದೆ ಎಂದು ಪ್ರಧಾನ ಗುರುಗಳಾದ ಸದಾಶಿವ.ಲ.ಪೋಳ ಹೇಳಿದರು.
ತಾಲೂಕಿನ ದೇವಗಾಂವ ಸರಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ 9ನೇ ಅಂತರರಾಷ್ಟ್ರೀಯ ಯೋಗ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿ, 21ನೇ ಶತಮಾನದಲ್ಲಿ ಇಡಿ ವಿಶ್ವಕ್ಕೆ ಇದರ ಅಗತ್ಯವಿದೆ ಎಂದರು.
ಯೋಗಶಾಸ್ತ್ರದ ಅನುಷ್ಠಾನದಿಂದ ಮಕ್ಕಳಲ್ಲಿ ಉತ್ಸಾಹ, ಸಾಹಸ, ಧೈರ್ಯ, ಬುದ್ಧಿಶಕ್ತಿ. ಪರಾಕ್ರಮ ವರ್ಧಿಸಿ ಮಾನವಿಯತೆಯನ್ನು ಉತ್ತೇಜಿಸುತ್ತದೆ. ಆಧ್ಯಾತ್ಮಿಕ, ಮಾನಸಿಕ, ದೈಹಿಕ, ಶಾಂತಿ ಸಂಯಮಗಳನ್ನು ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನಶಿಕ್ಷಣವೇ ಯೋಗವಾಗಿಯೆಂದರು.
ಎಸ್‍ಡಿಎಮ್‍ಸಿ ಅಧ್ಯಕ್ಷ ಮಂಜುನಾಥ ಮುಪ್ಪಿನಮಠ ಮಾತನಾಡಿ. ಮಾನವ ಜೀನವವನ್ನು ಹೇಗೆ ನಡೆಸಬೇಕು ಎಂಬುವುದನ್ನು ಯೋಗದ ಮೂಲಕ ಭಾರತ ಇಡಿ ವಿಶ್ವಕ್ಕೆ ತೋರಿಸಿಕೊಟ್ಟಿದೆ. ಯೋಗದಿಂದ ಸಮಗ್ರ ವ್ಯಕ್ತಿತ್ವದ ಅಭಿವೃದ್ದಿ ಸಾಧ್ಯ. ಇದು ಭಾವನೆಗಳನ್ನು ಸಮತೋಲನಗೊಳಿಸುವ. ಮನಸ್ಸು ದೇಹಗಳನಡುವೆ ಸಾಮರಸ್ಯವನ್ನು ಸ್ಥಾಪಿಸುವ ಪರಿಪೂರ್ಣ ಮಾಗವಾಗಿದೆ ಎಂದು ಹೇಳಿದರು.
ಶಾಸಕ ಬಾಬಾಹೇಬ ಪಾಟೀಲ ದೂರವಾಣಿ ಮುಖಾಂತರ ಮಾತನಾಡಿ ಕ್ಷೇತ್ರದ ದೇವಗಾಂವ ಶಾಲೆಯನ್ನು ಒಳಗೊಂಡಂತೆ ಎಲ್ಲ ಶಾಲೆಗಳಲ್ಲು ಯೋಗಾ ದಿನವನ್ನು ಆಚರಣೆ ಮಾಡಿದ್ದು ಎಲ್ಲರಲ್ಲಿ ಸಂತಸ ಮನೆಮಾಡಿದೆ. ಯೋಗ ಮಾಡುವುದರಿಂದ ಯಾವು ರೋಗವು ಸುಳಿಯುವದಿಲ್ಲ. ಇದನ್ನು ಎಲ್ಲರೂ ಜೀವನದಲ್ಲಿ ಅಳವಡಿಕೊಳ್ಳಿ ಎಂದು ಕರೆ ನೀಡಿದರು.
ವಿದ್ಯಾರ್ಥಿ ನರಸಿಂಗ ಕೇದಾರಿಯವರಿದ ಮಾರ್ಗದರ್ಶನದಲ್ಲಿ ವಿದ್ಯಾಥಿಗಳಿಗೆ ಯೋಗಾಭ್ಯಾಸ ಮಾಡಿಸಲಾಯಿತು ಮಂಜುಳಾ ದೇಗಲೊಳ್ಳಿ, ಲಕ್ಷ್ಮೀ ಲಿಂಗದಳ್ಳಿ ಮತ್ತು ಚೈತ್ರಾ ಮೇಟ್ಯಾಲ ಪಾಲ್ಗೊಂಡಿದ್ದರು.
ಈ ವೇಳೆ ಸಹ ಶಿಕ್ಷಕರಾದ ಎಸ್ ಎ ಬುಡವಿ, ಎಸ್ ಎಸ್ ಕುಂದರನಾಡ, ಎಸ್ ಎಸ್ ಹಾಲಗೇರಿ, ಎಸ್,ಎಸ್, ಚಿಕ್ಕಮಠ, ವ್ಹಿ.ಎಂ. ಮಾನ್ಯದಮಠ, ಎ.ಸಿ. ಚೌಹ್ವಾನ, ಎಸ್‍ಡಿಎಂಸಿ ಸದಸ್ಯರು, ಗ್ರಾ.ಪಂ. ಸದಸ್ಯರು, ಗ್ರಾಮಸ್ಥರು, ಅಡುಗೆ ಸಿಬ್ಬಂದಿ ಮಕ್ಕಳು ಸೇರಿದಂತೆ ಇನ್ನಿತರಿದ್ದರು.