ಯೋಗ ಹೇಳಿಕೊಟ್ಟ ಶಾಸಕ ರೇಣುಕಾಚಾರ್ಯ

ಹೊನ್ನಾಳಿ.ಜೂ.೨ : ಯೋಗಬಲ್ಲವಿಗೆ ರೋಗವಿಲ್ಲಾ ಎಂಬ ಮಾತಿನಂತೆ ಕೊರೊನಾ ಸೋಂಕಿತರು ಪ್ರತಿನಿತ್ಯ ಯೋಗ ಮಾಡುವ ಮೂಲಕ ಕೊರೊನಾದಿಂದ ಮುಕ್ತರಾಗುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.ತಾಲೂಕಿನ ಎಚ್.ಕಡದಕಟ್ಟೆ ಗ್ರಾಮದಲ್ಲಿರುವ ಕಿತ್ತೂರು ರಾಣಿಚೆನ್ನಮ್ಮ ವಸತಿ ಶಾಲೆಯಲ್ಲಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿರುವ ಕೊರೊನಾ ಸೋಂಕಿತರಿಗೆ ಯೋಗಾಸನ ಹೇಳಿಕೊಟ್ಟು ಸುದ್ದಿಗಾರರೊಂದಿಗೆ ಮಾತನಾಡಿದರು.ಯೋಗಾಸನ ಮಾಡುವುದರಿಂದ ಮನುಷ್ಯನ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆಗಾಗೀ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯೋಗ, ಪ್ರಾಣಾಯಾಮಗಳನ್ನು ಮೈಗೂಡಿಸಿಕೊಳ್ಳುವಂತೆ ಶಾಸಕರು ಕರೆ ನೀಡಿದರು. ನಾನು ಕೂಡ ಪ್ರತಿನಿತ್ಯ ಬೆಳಗ್ಗೆ ಎರಡು ಘಂಟೆಗಳ ಕಾಲ ಯೋಗಾಸನ ಪ್ರಾಣಾಯಾಮ ಮಾಡುತ್ತೇನೆ, ಆಗಾಗೀ ನಾನು ಆರೋಗ್ಯದಿಂದ ಇದ್ದೇನೆ ಎಂದ ಶಾಸಕರು ಪ್ರತಿಯೊಬ್ಬರೂ ಕೂಡ ಪ್ರತಿದಿನ ಯೋಗಾಸನ ಮಾಡುವಂತೆ ಕರೆ ನೀಡಿದರು.ಕೊರೊನಾವನ್ನು ನಾವು ಯಾರೂ ಕೂಡ ಬಯಸಿದ್ದಲ್ಲಾ, ಆದರೇ ಕೆಟ್ಟ ಕಾಯಿಲೆ ಅದಾಗಿಯೇ ಬಂದಿದ್ದು, ಕೊರೊನಾ ಬಂತೆAದು ಯಾರೂ ಕೂಡ ಬಯ ಪಡ ಬೇಡಿ ಅದನ್ನು ಸಮರ್ಥವಾಗಿ ಎದುರಿಸಿ ಆಗಾ ಮಾತ್ರ ನಾವು ಕೊರೊನಾವನ್ನು ಗೆಲ್ಲ ಬಹುದು ಎಂದರು. ಕೊರೊನಾದ ಜೊತೆಗೆ ಕೆಟ್ಟಕೆಟ್ಟ ಕಾಯಿಲೆಗಳು ಬರುತ್ತಿದ್ದು ಜನರು ಎಚ್ಚರಿಕೆಯಿಂದ ಇರುವಂತೆ ಕಿವಿ ಮಾತು ಹೇಳಿದರು.ಕೊರೊನಾದಿಂದ ಗುಣಮುಖರಾಗಿ ಹೋದವರು ಗ್ರಾಮದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡ ಬೇಕು, ಶಾರೀರಿಕ ಅಂತರ ಸೇರಿದಂತೆ ಪ್ರತಿಯೊಬ್ಬರು ಮಾಸ್ಕ್ ಹಾಕಿಕೊಳ್ಳುವಂತೆ ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆ ನೀವುಗಳೇ ಕೊರೊನಾ ವಾರಿಯರ್ಸಗಳ ರೀತಿ ಕೆಲಸ ಮಾಡುವಂತೆ ಶಾಸಕರು ಕರೆ ನೀಡಿದರು.ಕೊರೊನಾ ಸೋಂಕಿತರಿಗೆ ವಿವಿಧ ಯೋಗಾಸನದ ಬಂಗಿ ಮಾಡಿಸಿ ಶಾಸಕರು : ಕಿತ್ತೂರು ರಾಣಿಚೆನ್ನಮ್ಮ ಕೋವಿಡ್ ಕೇರ್ ಸೆಂಟರ್‌ಗೆ ಬೆಳ್ಳಂಬೆಳಿಗ್ಗೆ ಭೇಟಿ ನೀಡಿದ ರೇಣುಕಾಚಾರ್ಯ ಕೊರೊನಾ ಸೋಂಕಿತರಿಗೆ ಸೂರ್ಯನಮಸ್ಕಾರ, ಉಸ್ಟಾçಸನ, ಸರ್ವಾಂಗಾಸನ, ತ್ರಿಕೋನಾಸಾನ,ಚಕ್ರಸನ ಸೇರಿದಂತೆ ವಿವಿಧ ಯೋಗಾಸನದ ಬಂಗಿಗಳನ್ನು ಹೇಳಿಕೊಟ್ಟರು. ಪ್ರತಿನಿತ್ಯ ಕೊರೊನಾ ಸೋಂಕಿತರ ಯೋಗಾಸನ ಮಾಡುವ ಮೂಲಕ ಕೊರೊನಾದಿಂದ ದೂರ ಉಳಿಯುವಂತೆ ತಿಳಿಸಿದ ಶಾಸಕರು ಯೋಗಾಸನ ಮಾಡುವುದರಿಂದ ರೋಗ ನಿರೋದಕ ಶಕ್ತಿ ಹೆಚ್ಚಾಗಲಿದ್ದು ಪ್ರತಿನಿತ್ಯ ಯೋಗಾಸನವನ್ನು ಮೈಗೂಡಿಸಿಕೊಳ್ಳುವಂತೆ ಕಿವಿ ಮಾತಿ ಹೇಳಿದರು.