ಯೋಗ ಸ್ಪರ್ಧೆಯಲ್ಲಿ ಹರಿಹರದ ಕೆ.ವೈ ಸೃಷ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೧೦೧ : ಬೆಂಗಳೂರಿನಲ್ಲಿ  ನಡೆದ ರಾಜ್ಯಮಟ್ಟದ ಒಲಂಪಿಯಡ್ ಯೋಗ ಸ್ಪರ್ಧೆಯಲ್ಲಿ ಹರಿಹರದ ಅಂತರಾಷ್ಟ್ರೀಯ ಯೋಗ ಪಟು ಕೆ.ವೈ.ಸೃಷ್ಟಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಮೈಸೂರಿನಲ್ಲಿ ಜೂ. 17. 18. 19. 20  ರಂದು ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಸೃಷ್ಟಿ ಈಗಾಗಲೇ  4ನೇ ತರಗತಿಯಿಂದಲೂ  ಸತತ 12 ಗಂಟೆಗಳ ಯೋಗ ಸೂರ್ಯಾಸನ ಮಾಡಿ ಗ್ಲೋಬಲ್ ವಾರ್ಡ್ ರೆಕಾರ್ಡ್ ಮಾಡಿದ್ದೂ, ನೇಪಾಳ, ವಿಯಟ್ನಾಮ್ ದೇಶಗಳಲ್ಲಿ ಸ್ಪರ್ಧೆ ಮಾಡಿ  ಹಲವು ಚಿನ್ನದ ಪದಗಳನ್ನು ಗಳಿಸಿ ರಾಷ್ಟ್ರಕ್ಕೆ, ಹರಿಹರ ನಗರಕ್ಕೆ ಕೀರ್ತಿ ತಂದಿದ್ದಾಳೆ.ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಗ್ರಾಮೀಣ ಪ್ರತಿಭೆ ಈ ಬಾರಿಯೂ ಕೂಡ ರಾಷ್ಟ್ರಮಟ್ಟದಲ್ಲಿ  ಕರ್ನಾಟಕ ರಾಜ್ಯಕ್ಕೆ ಕೀರ್ತಿ ತರಲೆಂದು ನೀಲಕಂಠೇಶ್ವರ ಶಾಲಾ ಮುಖ್ಯಸ್ಥರು ಹಾಗೂ ಸಿಬ್ಬಂದಿ , ಇನ್ಸೈಟ್ ಐಎಎಸ್  ಸಂಸ್ಥಾಪಕ ಜಿಬಿ ವಿನಯ್ ಕುಮಾರ್  ಸ್ವಾಭಿಮಾನಿ ಬಳಗದ ಹಿರಿಯ ಪತ್ರಕರ್ತ ಪುರಂದರ ಲೋಕಿ ಕೆರೆ,  ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ ಏಕಾಂತಪ್ಪ, ಓ ಎನ್.ಸಿದ್ದಯ್ಯ ಒಡೆಯರ್ , ಗಂಗಾಧರ್ ಕಮಲಾಪುರ ಸೇರಿದಂತೆ  ಹಲವಾರು ಸಂಘ ಸಂಸ್ಥೆಗಳು ಶುಭ ಹಾರೈಸಿದ್ದಾರೆ.