ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಃ ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಆಯ್ಕೆ

ವಿಜಯಪುರ, ಡಿ.31-ಕರ್ನಾಟಕ ಸರಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವಸಬಲೀಕರಣ, ಮತ್ತು ಕ್ರೀಡಾ ಇಲಾಖೆ ನೆಹರು ಯುವ ಕೇಂದ್ರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ ಇವರ ಸಹಯೋಗದಲ್ಲಿ ವಿಜಯಪುರ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮವು ಜರುಗಿತು.
ಯೋಗ ಸ್ಪರ್ಧೆಯಲ್ಲಿ ವಿಪಸ್ಸನ ಯೋಗ ಸೇವಾ ಸಂಸ್ಥೆ (ರಿ) ಪಡಗಾನೂರ ತಾ.ದೇವರ ಹಿಪ್ಪರಗಿ ಜಿ.ವಿಜಯಪುರ ಈ ಸಂಸ್ಥೆಯ ಯೋಗಪಟುಗಳಾದ ಕು.ಸಂಜನಾ ರಜಪೂತ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟದ ಯುವಜನೋತ್ಸವದ ಯೋಗ ಸ್ಪರ್ಧೆಗೆ ಆಯ್ಕೆಗೊಂಡಿರುತ್ತಾಳೆ. ಮತ್ತು ರಾಜು ಮಾನೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡರೆ ತೃತೀಯ ಸ್ಥಾನವನ್ನು ವಿರೇಶ ಸೋನಾರ ಈತನು ತೃತೀಯ ಸ್ಥಾನ ಪಡೆದುಕೊಂಡಿದ್ದಾನೆ.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಯುವಸಬಲೀಕರಣ ಮತ್ತು ಕ್ರಿಡಾ ಇಲಾಖೆ ಸಹಾಯಕ ನಿರ್ದೇಶಕರಾದ ಎಸ್.ಜಿ.ಲೋಣಿ, ನೆಹರು ಯುವ ಕೇಂದ್ರದ ಯುವ ಅಧಿಕಾರಿಗಳಾದ ರಾಹುಲ ಡೊಂಗ್ರೆ, ಯೋಗ ನಿರ್ಣಾಯಕರಾದ ಬಸವರಜ ಆಲೂರ, ಅಕ್ಕಮಹಾದೇವಿ ವಿಶ್ವವಿದ್ಯಾಲಯ ಯೋಗ ವಿಭಾಗದ ಉಪನ್ಯಾಸಕರಾದ ಶ್ರೀಕಾಂತ ಚವ್ಹಾಣ, ಆನಂದ ಬಂಗಿನವರ ಉಪಸ್ಥಿತರಿದ್ದರು ಎಂದು ವಿಪಸ್ಸನ ಯೋಗಗುರು ಮಡಿವಾಳಪ್ಪ ತಿಳಿಸಿದ್ದಾರೆ.