ಬೀದರ:ಜು.17:ಊರ ಹೊರಗಿರುವ ದೇವಸ್ಥಾನಗಳು ಹಾಗೂ ಕೃಷಿ ತೋಟದಂತಹ ಸ್ಥಳಗಳಲ್ಲಿ ಸಾಂಸ್ಕೃತಿಕ, ಮನರಂಜನೆ ಹಾಗೂ ಸ್ನೇಹ ಮಿಲನಗಳಂತಹ ಕಾರ್ಯ ಕ್ರಮಗಳನ್ನು ಏರ್ಪಡಿಸು ವುದರಿಂದ ಜನತೆಯಲ್ಲಿ ಪರಸ್ಪರ ಪ್ರೀತಿ ವಿಶ್ವಾಸ ಹೆಚ್ಚುತ್ತದೆ ಎಂದು ಅಖಿಲ ಭಾರತ ವಿಶ್ವವಿದ್ಯಾಲಯ ಗಳ ನೌಕರರ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾದ ವೀರಭದ್ರಪ್ಪ ಉಪ್ಪಿನ್ ರವರು ಅಭಿ ಪ್ರಾಯ ಪಟ್ಟರು.ಅವರು ಇಂದು ಬರೀದ ಶಾಹಿ ಉದ್ಯಾನದಲ್ಲಿರುವ ಯೋಗ ತಂಡ ಹಾಗೂ ಅಖಿಲ ಭಾರತ ವಿಶ್ವವಿದ್ಯಾಲಯ ಗಳ ನೌಕರರ ಒಕ್ಕೂಟದ ವತಿಯಿಂದ ಸಂಯುಕ್ತ ವಾಗಿ, ಅಣದೂರ ಸಮೀಪ ದ ಸಂಗಮೇಶ್ವರ ಕೊಳದಲ್ಲಿ ಹಮ್ಮಿಕೊಂಡ ಪರಿಸರ ಜಾಗೃತಿ, ವನ ಭೋಜನ ಹಾಗೂ ಸಾಂಸ್ಕೃ ತಿಕ ಕಾರ್ಯಕ್ರಮದಲ್ಲಿ ಮಾತ ನಾಡುತ್ತಿದ್ದರು. ಜನರಲ್ಲಿ ರಾಜಕೀಯ ಭಿನ್ನಾಭಿಪ್ರಾಯ, ಪರಸ್ಪರ ಅಪನಂಬಿಕೆ, ಪ್ರೀತಿ ವಿಶ್ವಾಸಗಳ ಕೊರತೆ ಹಾಗೂ ಅಹಂ ತುಂಬಿರುವ ಈ ದಿನ ಗಳಲ್ಲಿ ಗುಂಪು- ಗುಂಪಾಗಿ ಸ್ನೇಹ ಮಿಲನ, ವನಭೋಜನ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳoಥ ಕಾರ್ಯಕ್ರಮಗಳನ್ನು ಮೇಲಿಂದ ಮೇಲೆ ಹಮ್ಮಿಕೊಳ್ಳುವುದರಿಂದ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿ, ಭ್ರಾತೃತ್ವದಿಂದ ಬದುಕುವುದು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಯೋಗ ಮೇಲ್ವಿಚಾರಕರಾದ ಗಂಗಪ್ಪ ಸಾವಳೆಯವರು ಅಧ್ಯಕ್ಷತೆ ವಹಿಸಿ, ಯೋಗದ ಮಹತ್ವವನ್ನು ತಿಳಿಸಿದರು. ಶ್ರೀಮತಿ ಸರೋಜಿನಿ ಪಾಟೀಲರವರು ಸ್ವಾಗತ ಗೀತೆ ಹಾಡಿದರು. ನಿಜಲಿಂಗಪ್ಪ ತಗಾರೆಯವರು ನಿರೂಪಿಸಿದರು.ಕೊನೆಯಲ್ಲಿಸಂಜು ಶೀಲವಂತ ರವರು ವಂದಿಸಿದರು. ಸಸಿಗೆ ನೀರೆರೆರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಲ್ಲಿ ಕಾರ್ಜುನ ಪಾಟಿಲ್, ಸುಲೋಚನಾ, ಪಿಂಕು, ವೀರಶೆಟ್ಟಿ, ಈಶ್ವರ್ ಕನೇರಿ, ರಮೇಶ್ ಕಪಲಾಪುರ್, ಸಂಜು ಪಾಟೀಲ್, ಗುರುಸ್ವಾಮಿ, ಚಂದ್ರಶೇಖರ್ ದೆವಣಿ, ಪುಷ್ಪ, ಸರೋಜಿನಿ, ಸವಿತಾ, ಸುನೀತಾ, ಗೋದಾವರಿ, ಭುವನೇಶ್ವರಿ, ಪಾರ್ವತಿ ಪಾಟೀಲ್, ಈಶ್ವರ್ ಕನೆರಿ, ಕೃಷ್ಣ, ವೀಣಾ, ಮೀನಾಕ್ಸಿ, ವಿಜಯಲಕ್ಷ್ಮಿ, ಗಂಗಾಧರ್, ಬಸವರಾಜ್,ಮುಂತಾದವರು ಹಾಜರಿದ್ದರು.