ಯೋಗ ಸಾಧಕರಾದ ಕೆ.ಜೈಮುನಿಗೆ ಸನ್ಮಾನ

ದಾವಣಗೆರೆ.ಜೂ.೨೩; ಹರಿಹರದ ಹರಿಹರೇಶ್ವರ ದೇವಾಲಯದಲ್ಲಿ 8ನೇ  ಅಂತಾರಾಷ್ಟ್ರೀಯ ಯೋಗಾಸನ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಯೋಗಾಸನದ ಸಾಧನೆ ಮಾಡಿದವರಿಗೆ ಸನ್ಮಾನಿಸಲಾಯಿತು.ಯೋಗ ಸಾಧಕರಾದ ಡಾ. ಕೆ ಜೈಮುನಿ ಅವರಿಗೆ ಹರಿಹರ  ಶಾಸಕರಾದ ಎಸ್ ರಾಮಪ್ಪ ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ಆಯುಷ್ ಇಲಾಖೆಯ ನೋಡಲ್ ಅಧಿಕಾರಿ ಡಾ. ಡಿ.ಎಂ ರತ್ನ,  ಪೌರಾಯುಕ್ತರಾದ ಬಸವರಾಜ್, ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಬಿ .ಸಿ  ಸಿದ್ದಪ್ಪ , ತಪೋವನ ಚೇರ್ ಮೆನ್  ಡಾ .ಶಶಿ ಕುಮಾರ್ ಮೆಹರ್ವಾಡೆ, ತಾಲ್ಲೂಕು ಪಂಚಾಯ್ತಿ ಇಒ ಜೆ .ಡಿ ಗಂಗಾಧರನ್, ಮಾಜಿ ಶಾಸಕ ಬಿ ಪಿ ಹರೀಶ್,  ಡಾ. ಸುಚಿತ್ರ,  ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ವೀರೇಶ ಹನಗವಾಡಿ,  ನಗರಸಭೆ ಉಪಾಧ್ಯಕ್ಷರಾದ ವಾಮನ ಮೂರ್ತಿ, ರೇವಣಸಿದ್ದಪ್ಪ ಅಂಗಡಿ, ನಿರಂಜನ್ ಅಜಿತ್, ಸಾವಂತ್  ಎನ್ ಮುಂತಾದವರು ಉಪಸ್ಥಿತರಿದ್ದರು.

Attachments area