ಯೋಗ ಶಿಬಿರ

ಬಾದಾಮಿ,ಜೂ23: ತಾಲೂಕಿನ ಯಂಕಂಚಿ ಮಣಿನಾಗರ ಗ್ರಾಮದ ಕಸ್ತೂರಬಾ ಗಾಂಧಿ ಬಾಲಿಕಾ ವಸತಿ ವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಯೋಗ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಯೋಗ ಹಾಗೂ ಅದರ ಮಹತ್ವ ಕುರಿತು ಮಕ್ಕಳಿಗೆ ತರಬೇತಿ ನೀಡಲು ಪತಂಜಲಿ ಯೋಗದ ಸದಸ್ಯ ಅರವಿಂದ ಪಾಟೀಲ, ಸುನಿಲ್ ಸಂಗನಗೌಡ್ರ ಹಾಗೂ ಭರತ್ ಪ್ರಜಾಪತಿ ಆಗಮಿಸಿ ಮಕ್ಕಳಿಗೆ ಯೋಗಾಸನ ಪ್ರಾಣಾಯಾಮ ಧ್ಯಾನ ಮಾಡಿಸಿ, ಯೋಗವು ದೈಹಿಕ -ಮಾನಸಿಕ-ಆಧ್ಯಾತ್ಮಿಕ ಅಭ್ಯಾಸ ಆದ್ದರಿಂದ ಭಾವಿ ಭವಿಷ್ಯತ್ತಿನ ರೂವಾರಿಗಳಾದ ತಾವು ನಿತ್ಯ ಯೋಗಾಭ್ಯಾಸ ರೂಢಿಸಿಕೊಳ್ಳಿ ಅಂತಾ ಸುನಿಲ್ ಹಾಗೂ ಭರತ್ ವ್ಯಕ್ತಪಡಿಸಿದರಲ್ಲದೇ ಅರವಿಂದ ಪಾಟೀಲ ರವರು ಯೋಗದ ಬಗ್ಗೆ ತಿಳಿಸಿ ಸಂಬಂಧಿಸಿದ ಹಾಡುಗಳನ್ನು ರೂಢಿ ಮಾಡಿಸಿದರು,
ಶಾಲಾ ಸಿಬ್ಬಂದಿಯವರಾದ ಅನಿತಾ ಜಾಲಗೇರಿ,ಸಕ್ಕೂ, ಅಮೃತಾ, ಶಿವಲೀಲಾ, ಹೇಮಾ, ಲಲಿತಾ ಮುಂತಾದವರು ಉಪಸ್ಥಿತರಿದ್ದರು.