ಯೋಗ ಶಿಬಿರ ಸಮಾರೋಪ ಸಮಾರಂಭ

ಹುಬ್ಬಳ್ಳಿ,ಏ20: ನಗರದ ಮೂರುಸಾವಿರಮಠ ಆವರಣದಲ್ಲಿ ಬಸವಾನಂದ ಗುರೂಜಿ ಅವರಿಂದ ಛಾಯಾಗ್ರಾಹಕರಿಗೆ 2 ನೆ ಬ್ಯಾಚ್ ದ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭ ಜರುಗಿತು.
ಈ ವೇಳೆ ಸುಮಾರು ನೂರಕ್ಕೂ ಹೆಚ್ಚು ಛಾಯಾಗ್ರಾಹಕರು ಮತ್ತು ಅವರ ಕುಟುಂಬದ ವರ್ಗದವರು, ಸಾರ್ವಜನಿಕರು ಭಾಗವಹಿಸಿ ಯೋಗ ಅಂದರೇನು ಪ್ರಾಣಾಯಾಮ ಧ್ಯಾನ ಸೂರ್ಯ ನಮಸ್ಕಾರ ಸಮಗ್ರವಾಗಿ ಈಗಾಗಲೇ ಕಲಿತಿದ್ದಾರೆ ಕರೋನ ಎಂಬ ಮಹಾಮಾರಿಯನ್ನು ಹೊಡೆದೋಡಿಸಲು ಮತ್ತು ಛಾಯಾಗ್ರಾಹಕರು ತಮ್ಮ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಈ ಯೋಗ ಶಿಬಿರ ಹಮ್ಮಿಕೊಳ್ಳಲಾಯಿತು.
ಹುಬ್ಬಳ್ಳಿ ಫೆÇೀಟೋ ಮತ್ತು ವಿಡಿಯೋಗ್ರಾಫರ್ ಸಂಘ ಮತ್ತು ವಿಶ್ವಚೇತನ ಯೋಗ ಸಂಶೋಧನ ಕೇಂದ್ರ ಹುಬ್ಬಳ್ಳಿ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ವೈದ್ಯ ಡಾ. ಪ್ರಭು ಏನ್ ಬಿರಾದಾರ ಅವರು ಯೋಗ ಶಿಬಿರಾರ್ಥಿಗಳ ಕೂಡ ಅವರು ಒಂದು ಘಂಟೆಗಳ ಕಾಲ ಯೋಗವನ್ನು ಮಾಡಿ ನಂತರ ಅವರಿಂದ ಬಸವಾನಂದ ಗುರೂಜಿ ಅವರಿಗೆ ಫಲಪುಷ್ಪ ನೀಡಿ ಗೌರವ ಸನ್ಮಾನ ಮಾಡಲಾಯಿತು.
ಈ ವೇಳೆ ಸಂಘದ ಅಧ್ಯಕ್ಷ ಕಿರಣ್ ಬಾಕಳೆ ಮತ್ತು ಉಪಾಧ್ಯಕ್ಷ ದಿನೇಶ್ ದಾಬಡೆ ಅತಿಥಿಗಳಿಗೆ ಫಲಪುಷ್ಪ ನೀಡಿ ಗೌರವ ಅರ್ಪಿಸಲಾಯಿತು.
ನಂತರ ಮಾತನಾಡಿದ ಡಾ. ಪ್ರಭು ಬಿರಾದಾರ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಇಂದು ಯೋಗ ಬಹಳ ಮಹತ್ವದ್ದು ಮತ್ತು ರಾಜ್ಯ ಸರ್ಕಾರ ಕೂಡ ಜಿಲ್ಲಾ ಆಸ್ಪತ್ರೆ ಮತ್ತು ಪ್ರಾಥಮಿಕ ಕೇಂದ್ರಗಳಲ್ಲಿಯು ಕೂಡ heಚಿಟಣhತಿeಟಟಟಿess ಸೆಂಟರ್ ಯೋಜನೆ ಅಡಿಯಲ್ಲಿ ಯೋಗದ ಒಂದು ಕಟ್ಟಡ ಕೂಡ ಮಾಡಿ ಎಲ್ಲ ಆಸ್ಪತ್ರೆಯಲ್ಲಿ ದಿನಂಪ್ರತಿ ಯೋಗ ಮಾಡುವದನ್ನು ಕೂಡ ಅಳವಡಿಸಲಾಗಿದೆ. ಅಲ್ಲಿ ಯೋಗದ ಮಹತ್ವವನ್ನು ಕೂಡ ಹೇಳುತ್ತಾರೆ ಮತ್ತು ಮಾಡಿಸುತ್ತಾರೆ ಎಂದು ಬಿರಾದಾರ್ ಹೇಳಿದರು.
ಸ್ವಾಗತವನ್ನು ಉಪಾಧ್ಯಕ್ಷ ದಿನೇಶ್ ದಾಬಡೆ ಮಾಡಿದರು. ಅತಿಥಿಗಳ ಪರಿಚಯ ಮತ್ತು hಠಿvಚಿ ಸಂಘದ ಉದ್ದೇಶ ಮತ್ತು ಚಟುವಟಿಕೆಗಳ ಮಾಹಿತಿ ಯೋಗದ ಬಗ್ಗೆ ಅಧ್ಯಕ್ಷ ಕಿರಣ ಬಾಕಳೆ ಮಾತನಾಡಿದರು.
ಬಸವಾನಂದ ಗುರೂಜಿ ಮಾತನಾಡಿ ಈ ಯೋಗದಿಂದ ನಿಮಗೆ ನೀವೇ ಕೋವಿಡ ಮಹಾಮಾರಿ ಎದುರಿಸಲು ‘ಸ್ವಯಂ ಕವಚ’ ಹಾಕಿಕೊಂಡಿದ್ದೀರಿ ದಿನಂಪ್ರತಿ ಯೋಗಾ ಮಾಡಿದರೆ ನಿಮ್ಮ ಸನಿಹ ಕೊರೊನಾ ಬರುವುದಿಲ್ಲಾ ನೆನಪಿಡಿ ಎಂದರು. ಕಾರ್ಯಕ್ರಮವನ್ನು ಉಮಾ ಹಿರೇಮಠ ಮಾಡಿದರು ವಂದನಾರ್ಪಣೆಯನ್ನು ಆನಂದ ರಾಜೂಳ್ಳಿ ಮಾಡಿದರು. ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿ ಸದಸ್ಯರಾದ ಸರವೀಂದ್ರ ಕಾಟಿಗರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.