ಯೋಗ ಶಿಕ್ಷಣದ ಬಗ್ಗೆ ಅರಿವು

ಚಿತ್ರದುರ್ಗ.ಮಾ.೨೪; ಪ್ರಾಥಮಿಕ ಆರೋಗ್ಯ ಕೇಂದ್ರ, ಬೆಳಗಟ್ಟ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಚಿತ್ರದುರ್ಗ, ಶಿಶು ಅಭಿವೃದ್ಧಿ ಯೋಜನೆ, ಭರಮಸಾಗರ ಇವರುಗಳ ಸಂಯುಕ್ತಾಶ್ರಯದಲ್ಲಿ  ಚಿತ್ರದುರ್ಗ ತಾಲ್ಲೂಕಿನ ಬಚ್ಚಬೋರಯ್ಯನಹಟ್ಟಿಯ ಹೊ.ಚಿ.ಬೋರಯ್ಯ ಪ್ರೌಢಶಾಲಾ ಮಕ್ಕಳಿಗಾಗಿ ಬಾಲ್ಯ ವಿವಾಹ ತಡೆ ಹಾಗು ಯೋಗ ಶಿಕ್ಷಣದ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಬೆಳಗಟ್ಟ ವೃತ್ತದ ಅಂಗನವಾಡಿ ಮಹಿಳಾ ಮೇಲ್ವಿಚಾರಕಿಯಾದ ಶ್ರೀಮತಿ ಯಶೋದಮ್ಮ ಮಾತನಾಡಿ ” ಬಾಲ್ಯ ವಿವಾಹವು ಜಾಮೀನು ರಹಿತ ಹಾಗೂ ವಿಚಾರಣಾರ್ಹ ಅಪರಾಧವಾಗಿದೆ, ಲಾಕ್ ಡೌನ್ ಸಮಯದಲ್ಲಿ ಬಚ್ಚಬೋರಯ್ಯನಹಟ್ಟಿ ಹಾಗೂ ಸುತ್ತಲ ಹಳ್ಳಿಗಳಲ್ಲಿ ಹೆಚ್ಚಿನದಾಗಿ ಬಾಲ್ಯ ವಿವಾಹಗಳು ನಡೆದಿವೆ ಆದರೂ ಯಾರೊಬ್ಬರೂ ಇದರ ಬಗ್ಗೆ ದೂರು ನೀಡಿಲ್ಲ ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಿಕ್ಕ ಒಂದೆರೆಡು ಪ್ರಕರಣಗಳನ್ನು ಸುಖಾಂತ್ಯ ಗೊಳಿಸಿದ್ದೇವೆ ಮಕ್ಕಳು ಪ್ರೌಢಶಾಲೆಯಲ್ಲಿ ಓದುವಾಗ ಮಕ್ಕಳು ಹೆತ್ತವರ ಒತ್ತಾಯಕ್ಕೆ ಮಣಿದು, ಅಥವಾ ತಾವೇ ಪ್ರೀತಿ ಪ್ರೇಮದ ಸುಳಿಗೆ ಸಿಲುಕಿ ಬಾಲ್ಯ ವಿವಾಹವಾಗಿ ತಮ್ಮ ಬಾಳನ್ನು ಹಾಳು ಮಾಡಿಕೊಳ್ಳುತ್ತಾರೆ ಇನ್ನು ಮುಂದಾದರು ಇಂತಹ ಪ್ರಕರಣಗಳು ಕಂಡು ಬಂದಾಗ ಮಕ್ಕಳು ಹೆದರದೆ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡುವಂತೆ ” ಮಕ್ಕಳಿಗೆ ಧೈರ್ಯ ತುಂಬಿದರು. ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕ ಡಿ.ಮಹೇಶ್, ಬೆಳಗಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದ ಯೋಗ ತರಬೇತುದಾರ ರವಿ,ಕೆ.ಅಂಬೇಕರ್, ಶಾಲಾ ಮುಖ್ಯ ಶಿಕ್ಷಕ ಜಯಣ್ಣ, ದೈಹಿಕ ಶಿಕ್ಷಕ ಎಸ್.ಚಂದ್ರಣ್ಣ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಬೋರಮ್ಮ, ಶಿವರುದ್ರಮ್ಮ, ಜಮುನಾ, ಉಮಾಕ್ಷಿ, ಹಾಗೂ ಅಂಗನವಾಡಿ ಶಿಕ್ಷಕಿಯರಾದ ಶ್ರೀಮತಿ ಗೌರಮ್ಮ, ರತ್ನಮ್ಮ ಮುಂತಾದವರು ಭಾಗವಹಿಸಿದ್ದರು.