ಯೋಗ ವಿಶ್ವಕ್ಕೆ ಶಾಂತಿ,ಭಾತೃತ್ವ,ಆರೋಗ್ಯ ನೀಡಿದೆ

ಕಲಬುರಗಿ:ಜೂ.21:”ಯೋಗದ ಮೂಲಕ ಭಾರತವು ಇಡಿ ವಿಶ್ವÀಕ್ಕೆ ಶಾಂತಿ, ಭಾತೃತ್ವ ಮತ್ತು ಆರೋಗ್ಯವನ್ನು ನೀಡಿದೆ” ಎಂದು ಸಿಯುಕೆಯ ಕುಲಪತಿ ಪೆÇ್ರ.ಬಟ್ಟು ಸತ್ಯನಾರಾಯಣ ಹೇಳಿದರು.
ಅವರು ಇಂದು ಮುಂಜಾನೆ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಅವರು ಮುಂದುವರೆದು ಮಾತನಾಡಿ “ಇಂದು ಇಡಿ ವಿಶ್ವವೆ ಯೋಗದಿನವನ್ನು ಆಚರಿಸುತ್ತಿರುವುದರಿಂದ ಇದು ನಮ್ಮ ದೇಶದ ಸಂಸ್ಕøತಿಯ ಹೆಮ್ಮಯಾಗಿದೆ. ಯಾವುದೇ ವೆಚ್ಚವಿಲ್ಲದೆ ದಿನ ನಿತ್ಯ ಯೋಗ ಅಭ್ಯಾಸ ಮಾಡುವ ಮೂಲಕ ನಾವು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಇಂದಿನ ಒತ್ತಡ ಭರಿತ ಜೀವನದಲ್ಲಿ ಯೋಗವು ದೇಹಿಕ ಹಾಗೂ ಮಾನಸಿಕ ಆರೋಗ್ಯದ ರಕ್ಷಣೆಗೆ ಪರಿಣಾಮಕಾರಿ ಸಾದನವಾಗಿದೆ. ನಾವೆಲ್ಲರು ನಿತ್ಯ ಯೋಗ ಅಭ್ಯಾಸ ಮಾಡುವ ಮೂಲಕ ಅನಾರೋಗ್ಯ ಮತ್ತು ಔಷಧಿಗಳಿಂದ ಮುಕ್ತರಾಗಬಹುದಾಗಿದೆ. ವಿಶ್ವವಿದ್ಯಾಲಯದಲ್ಲಿ ಯೋಗ ವಿಭಾಗವಿದ್ದು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಅದರ ಸದುಪಯೊಗ ಪಡೆದುಕೊಳ್ಳಬೇಕು” ಎಂದು ಅವರು ಹೇಳಿದರ.

ಈ ಸಂದರ್ಭದಲ್ಲಿ ಯೋಗ ತರಬೇತಿದಾರರಾದ ಡಾ. ಸಂತೋಷ ಮತ್ತು ಕುಮಾರಿ ಜೋತ್ಸ್ನ ಅವರು ಆಯುಷ್ ಇಲಾಖೆಯ ನಿಯಮಾವಳಿಗಳ ಪ್ರಕಾರ ಯೋಗಾಸನಗಳನ್ನು ಮಾಡಿಸಿದರೂ. ನಂತರ ಶಿಕ್ಷರು, ವಿದ್ಯಾರ್ಥಿಗಳು ಮತ್ತು ಯೋಗ ತರಬೇತಿದಾರರಾದ ಡಾ. ಸಂತೋಷ ಮತ್ತು ಕುಮಾರಿ ಜೋತ್ಸ್ನ ಅವರು ವಿಶೇಷ ಹಾಗು ಕ್ಲಿಷ್ಟಕರ ಆಸನಗಳ ಪ್ರದರ್ಶನ ಮಾಡಿದರು. ಡಾ. ಜಯದೇವಿ ಜಂಗಮಶಟ್ಟಿ ಮತ್ತು ಡಾ. ಸ್ವಪ್ನಿಲ್ ಚಾಪೆಕರ್ ನಾಡಗೀತೆ ಮತ್ತು ರಾಷ್ಟ್ರಗೀತೆ ಹಾಡಿದರು. ಡಾ. ರಾಜೀವ ಜೋಶಿ ನೀರೂಪಿಸಿ ವಂದಿಸಿದರು

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಪೆÇ್ರ.ಬಸವರಾಜ ಡೋಣೂರ, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಪ್ರೊ. ರವಿಂದ್ರ ಹೆಗಡಿ, ಪ್ರೊ. ವಿಕ್ರಮ ವಿಸಾಜಿ, ಕಾರ್ಯಕ್ರಮದ ಸಂಯೋಜಕ ಡಾ. ಸಾಯಿ ಅಭಿನವ, ಅಧ್ಯಾಪಕರು ಮತ್ತು ವಿದ್ಯರ್ಥಿಗಳು ಭಾಗವಹಿಸಿದರು.