ಯೋಗ ಮಾನವನ ಶರೀರಕ್ಕೆ ಸಂಬಂಧಿಸಿದೆ- ಬಿ.ನಾಗನಗೌಡ


ಸಂಜೆವಾಣಿ ವಾರ್ತೆ
ಸಂಡೂರು :ಜು: 22:  ಯೋಗ ಜಾತಿ, ವರ್ಗ, ವರ್ಣ, ಧರ್ಮವನ್ನು ಬಿಟ್ಟು ಮಾನವನ ಶರೀರಕ್ಕೆ ಸಂಬಂಧಿಸಿದ ಅಂಶವಾಗಿದೆ, ಅದ್ದರಿಂದ ಇಂದು ಜಗತ್ತಿನ ಎಲ್ಲಾ ದೇಶಗಳಲ್ಲಿ ಯೋಗಕ್ಕೆ ಮಾನ್ಯತೆ ಸಿಗುವಂತಾಗಿದ್ದು ಹೆಮ್ಮೆಯ ಸಂಗತಿ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಬಿಕೆಜಿ ಗಣಿಮಾಲೀಕರು ಅದ ಬಿ.ನಾಗನಗೌಡ ತಿಳಿಸಿದರು.
ಅವರು ಪಟ್ಟಣದ ಗುರುಭವನದ ಅವರಣದಲ್ಲಿ ಸ್ಕಂದಗಿರಿ ಯೋಗಕೇಂದ್ರದ ವತಿಯಿಂದ ತಾಲೂಕು ಮಟ್ಟದ 9ನೇ ಅಂತರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ ಇಂದು ಪ್ರಕೃತಿಯಲ್ಲಿಯ ಎಲ್ಲಾ ಜೀವಿಗಳು ಯೋಗದಂತೆ ಬದುಕುತ್ತಿವೆ, ನಿತ್ಯ ಬೆಳಿಗ್ಗೆ ಬೇಗ ಎದ್ದು ಆಹಾರ ಹುಡುಕುತ್ತವೆ, ರಾತ್ರಿ ಆಹಾರವನ್ನೇ ಸೇವಿಸುವುದಿಲ್ಲ, ಅದರೆ ಮನುಷ್ಯ ಪ್ರಾಣಿ ಪ್ರಕೃತಿಯು ಕೊಟ್ಟ ಕೊಡುಗೆಯನ್ನು ಬಿಟ್ಟು ಅತಿಯಾದ ಆಸೆಯಿಂದ ಬದುಕುತ್ತಿದ್ದು ಇದರಿಂದ ಆರೋಗ್ಯ ಕೆಡುವುದರ ಜೊತೆಗೆ ಪರಿಸರವೂ ಸಹ ಹದೆಗೆಡುತ್ತಿದೆ. ಕಾರಣ ನಮಗೆ ಬೇಕಾದಷ್ಟು ಆಹಾರ ಸೇವಿಸದೇ ಮಿತಿ ಮಿರಿದ ಸೇವನೆ, ಸಂಗ್ರಹದ ಗುಣಗಳು ನಮ್ಮನ್ನು ಕಾಡುತ್ತವೆ, ಅದ್ದರಿಂದ ಎಷ್ಟೇ ಮುಂದುವರೆದರೂ, ಬುದ್ದಿವಂತನಾದರೂ ಸಹ ಆರೋಗ್ಯ ರಕ್ಷಣೆ ಕಷ್ಟವಾಗುತ್ತಿದೆ, ಅಧುನಿಕತೆ ಬೆಳೆದಂತೆಲ್ಲಾ ಸೋಮಾರಿತನ ಹೆಚ್ಚಾಗಿ ದೇಹದ ಆರೋಗ್ಯ ಕೆಡುತ್ತಿದ್ದು 6000 ವರ್ಷ ಇತಿಹಾಸವಿರುವ ಯೋಗವನ್ನು ನರೇಂದ್ರ ಮೋದಿಯವರು 2015 ರಿಂದ ವಿಶ್ವದಾದ್ಯಂತ ಯೋಗ ದಿನಾಚರಣೆಯನ್ನು ಮಾಡುವಂತೆ ಮಾಡಿದ್ದಾರೆ, ಅದ್ದರಿಂದ ಪ್ರತಿಯೊಬ್ಬರೂ ಸಹ ಯೋಗ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದರು.
ಶಾಸಕ ಈ.ತುಕರಾಂ ಅವರು ಮಾತನಾಡಿ ಇಂದಿನ ಯುವಕರು ಬಹಳಷ್ಟು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ, ಅದ್ದರಿಂದ ಇಂತಹ ಕಾರ್ಯಕ್ರಮಗಳ ಮೂಲಕ ಜಾಗೃತಿಯನ್ನು ಉಂಟುಮಾಡೋಣ, ಪ್ರತಿಯೊಬ್ಬರೂ ಭಾಗಿಯಾದಲ್ಲಿ ತಾಲೂಕಿನ ಶಾಲಾ ಕಾಲೇಜುಗಳಿಗೆ ಸಾಗಿ ಜಾಗೃತಿಯನ್ನು ಉಂಟುಮಾಡೋಣ, ಸಂಡೂರಿನ ಪ್ರತಿಯೊಬ್ಬರೂ ಸಹಕಾರಿಯಾಗಿ ಅಭಿವೃದ್ದಿ ಪಡಿಸೋಣ, ಯೋಗ ಕೇಂದ್ರ, ನೂತನವಾಗಿ ಮಲ್ಟಿಸ್ಪೆಷಾಲಿಟಿ ಅಸ್ಪತ್ರೆ, ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗುವುದು, ಅಭಿವೃದ್ದಿ ನಿರಂತರವಾಗಿದ್ದು, ಸದ್ಭಳಕೆಯಾಗಿ ಇಂತಹ ಯೋಗ ಕಾರ್ಯಕ್ರಮಗಳು ನಡೆಯಲಿ ಎಂದರು.
ಸಮಾರಂಭದ ಸಾನಿಧ್ಯವಹಿಸಿದ್ದ ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮಿ ಮಾತನಾಡಿ ಜಗತ್ತಿಗೆ ಭಾರತ ಕೊಟ್ಟ ಬಹುದೊಡ್ಡ ಕೊಡುಗೆ ಎಂದರೆ ಯೋಗ ಮತ್ತು ಅರ್ಯವೇದ, ಇಂದು ನಾವು ಈ ಎರಡನ್ನು ಮರೆತಿದ್ದೇವು, ಅದರೆ ಅವು ಮತ್ತೆ ನಮಗೆ ಅಮೂಲ್ಯ ಎಂಬುದನ್ನು ಕಂಡುಕೊಳ್ಳಬೇಕು, ಮೋದಿಯವರು ಇಡೀ ಜಗತ್ತಿಗೆ ಯೋಗವನ್ನು ತಿಳಿಸುವ ಮೂಲಕ ವಿಶ್ವ ಯೋಗ ದಿನಾಚರಣೆ ಮಾಡುವಂತಾಗಿದೆ, ಯುವಕರು, ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಸಹ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಯೋಗ ಶಿಕ್ಷಕ ಶ್ರೀನಿವಾಸ ಪ್ರಸ್ತಾವಿಕವಾಗಿ ಮಾತನಾಡಿ ತಾಲೂಕಿನಾದ್ಯಂತ ಯೋಗ ಪ್ರಸಾರ ಮಾಡುವಂತಹ, ತರಬೇತಿ ಕೊಡುವಂತಹ ಕೆಲಸ ಮಾಡುತ್ತಿದ್ದು ಅದಕ್ಕೆ ವೆಸ್ಕೋ ಗಣಿ ಕಂಪನಿ, ಬಿಕೆಜಿ ಗಣಿ ಕಂಪನಿ, ಶಾಸಕರು ಪೂರ್ಣಪ್ರಮಾಣದಲ್ಲಿ ಬೆಂಬಲಿಸಿ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದಾರೆ, ಅದ್ದರಿಂದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ  ಯೋಗ ಬಹು ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ವೆಸ್ಕೋ ಕಂಪನಿಯ ವ್ಯವಸ್ಥಾಪಕರಾದ ಶಶಿಧರ್.ಎಂ., ಎಸ್.ಪಿ.ಎಸ್. ಬ್ಯಾಂಕಿನ ಸಿ.ಇ.ಓ. ರೇಣುಕಾ, ಪಟ್ಟಣದ ಮಹಿಳೆಯರು, ಯುವಕರು, ಹಲವಾರು ಗಣ್ಯರು ಯೋಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.