ಯೋಗ ಮಹೋತ್ಸವ ಜೂನ್ 17ಕ್ಕೆ

ಬೀದರ್:ಜೂ.10: ಇಲ್ಲಿಯ ಎನ್.ಕೆ. ಜಾಬಶೆಟ್ಟಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಜೂನ್ 17 ರಂದು ಯೋಗ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಎನ್.ಕೆ. ಜಾಬಶೆಟ್ಟಿ ಕಾಲೇಜಿನಲ್ಲಿ ನಡೆದ ಪೂರ್ವ ಭಾವಿ ಸಿದ್ಧತಾ ಸಭೆಯಲ್ಲಿ ಚಿದಂಬರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ. ಹಾವಗಿರಾವ್ ಮೈಲಾರೆ ಅವರು ಮಹೋತ್ಸವದ ಮಾಹಿತಿ ನೀಡಿದರು.

ಅಂದು ಬೆಳಿಗ್ಗೆ 6.30 ರಿಂದ 7.30 ರ ವರೆಗೆ ಯೋಗಾಭ್ಯಾಸ, ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರ ವರೆಗೆ ವಸುದೈವ ಕುಟುಂಬಕಂ ಮತ್ತು ಯೋಗ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ. ದೆಹಲಿ ಹಾಗೂ ಬೆಂಗಳೂರಿನ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.

ಯೋಗದ ಮಹತ್ವ ಮನವರಿಕೆ ಮಾಡಿಕೊಡಲು ಮಹೋತ್ಸವ ಏರ್ಪಡಿಸಲಾಗಿದೆ. https://forms.gle/DMSKYrq3Be7st8Em9 ಲಿಂಕ್ ಬಳಸಿ ಪೂರ್ವ ನೋಂದಣಿ ಮಾಡಿ ಮಹೋತ್ಸವದಲ್ಲಿ ಉಚಿತವಾಗಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

ಚಿದಂಬರ ಶಿಕ್ಷಣ ಸಂಸ್ಥೆಯ ನಿರ್ದೇಶಕ ಉದಯಭಾನು ಹಲವಾಯಿ ಅಧ್ಯಕ್ಷತೆ ವಹಿಸಿದ್ದರು. ನವದೆಹಲಿಯ ಐ.ಎನ್.ಒ. ರಾಷ್ಟ್ರೀಯ ಅಧ್ಯಕ್ಷ ಅನಂತ ಬಿರಾದಾರ, ನಗರಸಭೆ ಸದಸ್ಯ ಶಶಿಧರ ಹೊಸಳ್ಳಿ, ಪ್ರಮುಖರಾದ ಶ್ರೀಕಾಂತ ಮೋದಿ, ಗುರುನಾಥ ರಾಜಗೀರಾ, ಸಚ್ಚಿದಾನಂದ ಸ್ವಾಮೀಜಿ, ವಿಶ್ವನಾಥ ಉಪ್ಪೆ ಮೊದಲಾದವರು ಇದ್ದರು.