ಯೋಗ ಬದುಕಿನ ಅವಿಭಾಜ್ಯ ಅಂಗವಾಗಬೇಕು

ಬ್ಯಾಡಗಿ,ಜೂ23 : ಆರೋಗ್ಯವೇ ಭಾಗ್ಯ' ಎಂಬ ಮಾತು ಸರ್ವಕಾಲಕ್ಕೂ ವಿದಿತ, ದೈಹಿಕ ಮತ್ತು ಮಾನಸಿಕ ಆರೋಗ್ಯ ಕೂಡ ಪಡೆದುಕೊಳ್ಳಲು ಯೋಗ ಬದುಕಿನ ಅವಿಭಾಜ್ಯ ಅಂಗವಾಗಬೇಕು ಇದರಿಂದ ಮಾತ್ರ ಸದೃಢ ಸಮಾಜ ನಿರ್ಮಾಣ ಆದರ್ಶ ಸೆಂಟ್ರಲ್ ಸ್ಕೂಲ್ ಪ್ರಾಚಾರ್ಯ ಅವಿನಾಶ್ ಮೋಹಿತೆ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಆದರ್ಶ ಸೆಂಟ್ರಲ್ ಶಾಲೆಯಲ್ಲಿ ಯೋಗ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಧ್ಯಾನ ಮತ್ತು ದೇಹದಂಡನೆ ಮೂಲಕ ಆರೋಗ್ಯ ಪ್ರಜ್ಞೆಯ ಉನ್ನತ ಹಂತಗಳನ್ನು ತಲು ಪುವುದೇಯೋಗ’ ಈ ಕುರಿತು ವೇದ ಮತ್ತು ಉಪನಿ?Àತ್ತುಗಳಲ್ಲಿ ಇದನ್ನು ಸಂಪ್ರದಾಯವೆಂಬಂತೆ ಅರ್ಥೈಸಲಾಗಿದ್ದು ಯೋಗಾಭ್ಯಾಸ ಎಂಬುದು ಆಧ್ಯಾತ್ಮಿಕ ಆಚರಣೆ ಭಾಗ'ವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಯೋಗ’ ದಿಂದ ಪಂಚೇಂದ್ರಿಯ ನಿಯಂತ್ರಣಗೊಳಿಸಿ ಮಾನಸಿಕ ಚಟುವಟಿಕೆಗಳ ಮೇಲೆ ಹಿಡಿತದಲ್ಲಿಟ್ಟುಕೊಳ್ಳುವ ಪ್ರಕ್ರಿಯೆಯಾಗಿದೆ, ಯೋಗ ಎಂಬುದು ಧ್ಯಾನದ ಮುಂದುವರಿದ ಭಾಗವಾಗಿದ್ದು ಋಷಿಮುನಿಗಳು ನಡೆಸುತ್ತಿದ್ದ ಧ್ಯಾನದ ಆಚರಣೆಯೇ ಯೋಗದ ಆಸನಗಳಲ್ಲಿ ಒಂದಾಗಿದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ಜಯದೇವ ಶಿರೂರ ಮಾತನಾಡಿ, ಯೋಗ ಅಭ್ಯಾಸ ಎಂಬುದು ಆಧ್ಯಾತ್ಮಿಕ ಆಚರಣೆ `ಭಾಗ’ ಎನ್ನುವುದರಲ್ಲಿ ಎರಡು ಮಾತಿಲ್ಲ, ಹಿಂದೂ ತತ್ವಶಾಸ್ತ್ರದಲ್ಲಿ ರಾಜಯೋಗ, ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ ಮತ್ತು ಹಠಯೋಗ ಇವುಗಳು ಪ್ರಸ್ತಾಪವಾಗುವ ಪ್ರಮುಖ ಶಾಖೆಗಳಾಗಿವೆ ಪರಿಪೂರ್ಣ ಚಿಂತನೆಯೊಂದಿಗೆ ಭಗವಂತ ನೆಡೆಗೆ ಸಾಗಲು ಮಾರ್ಗೋಪಾಯವೂ ಕೂಡ ಇದಾಗಿದ್ದು, ಆದ್ದರಿಂದ ಯೋಗಾಭ್ಯಾಸವನ್ನು ಮಾನವಕುಲದ ಸ್ವತ್ತು ಎಂದೇ ಪರಿಗಣಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ವಿರೇಶ ಶಿರೂರ, ನಿರ್ದೇಶಕಿ ಸ್ನೇಹಾ ಶಿರೂರ, ಆದರ್ಶ ಪಿಯು ಕಾಲೇಜು ಪ್ರಾಚಾರ್ಯ ಎನ್.ಡಿ.ಮಾಚೇನಹಳ್ಳಿ, ಎಮ್.ಎನ್.ನಿಂಗನಗೌಡ್ರ, ಶಿವಾಜಿ, ಸಿದ್ಧಲಿಂಗ ಬಾರ್ಕಿ ಸೇರಿದಂತೆ ಎಲ್ಲ ಭೋದಕ ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.