ಯೋಗ ಪ್ರಾಣ ವಿಧ್ಯೆಯ ಹೀಲರ್-ಆಶಾ ಆನೂರು

ಕೋಲಾರ,ಜೂ,೨೮-ರೋಗಿಯನ್ನು ಮುಟ್ಟದೇ, ಯಾವುದೇ ಔಷಧಿಯನ್ನೂ ಕೊಡದೇ ರೋಗ ನಿವಾರಣೆ ಮಾಡಲು ಸಾಧ್ಯವೇ? ಎಂಬ ಸಾರ್ವತ್ರಿಕ ಪ್ರಶ್ನೆಗೆ, ಸಾಧ್ಯ ಎನ್ನುತ್ತಾರೆ ಆಶಾ ಆನೂರು. ಈಕೆ ಯೋಗ ಪ್ರಾಣ ವಿಧ್ಯೆಯ ಹೀಲರ್ ಹಾಗೂ ತರಬೇತುದಾರರು.
ಜೀವಂತವಾಗಿರುವ ವ್ಯಕ್ತಿಗೂ, ಶವಕ್ಕೂ ಇರುವ ವ್ಯತ್ಯಾಸವೆಂದರೆ ಪ್ರಾಣ. ಈ ಪ್ರಾಣವು ನಮ್ಮ ಶರೀರದಲ್ಲಿ ಸರಾಗವಾಗಿ ಹರಿಯುತ್ತಾ ಸಮತೋಲನಾ ಸ್ಥಿತಿಯನ್ನು ಕಾಯ್ದುಕೊಂಡಿದ್ದರೆ, ಅದೇ ಆರೋಗ್ಯ. ವಿವಿಧ ಕಾರಣಗಳಿಂದ ಈ ಪ್ರಾಣದ ಹರಿಯುವಿಕೆಯಲ್ಲಿ ತೊಡಕುಗಳು ಉಂಟಾದರೆ, ಅದೇ ಅನಾರೋಗ್ಯ. ಈ ತೊಡಕುಗಳನ್ನು ನಿವಾರಿಸಿ ಪ್ರಾಣಶಕ್ತಿಯ ವರ್ಗಾವಣೆಯ ಮೂಲಕ ಆರೋಗ್ಯವನ್ನು ಹೆಚ್ಚಿಸುವ ವಿಧಾನವೇ ಯೋಗ ಪ್ರಾಣ ವಿಧ್ಯೆಯಾಗಿದೆ ಎನ್ನುತ್ತಾರೆ ಆಶಾ ಆನೂರು.
ಇದು ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ಬಳಕೆಯಲ್ಲಿದ್ದ ಪುರಾತನ ವಿಜ್ಞಾನ ಮತ್ತು ಕಲೆ. ಯೋಗ ಪ್ರಾಣ ವಿಧ್ಯೆಯು ಮೂಲರ್ತ ಔಷಧ ರಹಿತ ಸ್ಪರ್ಶರಹಿತ ಮತ್ತು ಇತರೇ ವಿಧ್ಯಕೀಯ ವಿಧಾನಗಳ ಜೊತೆಜೊತೆಗೂ ನೀಡಬಹುದಾದ ಚಿಕಿತ್ಸಾ ವಿಧಾನವಾಗಿದೆ ಎಂದು ಅವರು ಹೇಳುತ್ತಾರೆ.
ಪ್ರಾಣವು ಶರೀರವನ್ನು ಜೀವಂತವಾಗಿರಿಸುವ ಇಂಧನ. ಭೂಮಿ, ನೀರು, ಆಹಾರ, ಗಾಳಿ ಮತ್ತು ಸೂರ್ಯನಿಂದ ನಿರಂತರವಾತಿದನ್ನು ಪಡೆಯುತ್ತಿರುತ್ತೇವೆ. ಯೋಗ ಪ್ರಾಣ ವಿಧ್ಯೆ ಶರೀರದ ಆಂತರಿಕ ಚಿಕಿತ್ಸಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ನಮ್ಮ ಭೌತಿಕ ಶರೀರದ ಸುತ್ತಲೂ ಶಕ್ತಿ ಶರೀರವಿದೆ. ಇದಕ್ಕೆ ಚಕ್ರಗಳು ಪ್ರಾಣಶಕ್ತಿಯನ್ನು ಪೂರೈಸುತ್ತವೆ. ಯೋಗ ಪ್ರಾಣ ವಿಧ್ಯೆಯಲ್ಲಿ ಈ ಶಕ್ತಿ ಶರೀರ ಮತ್ತು ಚಕ್ರಗಳಲ್ಲಿನ ನಕಾರಾತ್ಮಕ ಶಕ್ತಿಯನ್ನು ತೆಗೆದು ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ. ಇದರಿಂದ ದೇಹದ ಆರೋಗ್ಯ ಸುಧಾರಿಸುತ್ತದೆ ಎಂದು ಅವರು ವಿವರಿಸುತ್ತಾರೆ.
ಈ ಮೂಲಕ ಧೈಹಿಕ ಸಮಸ್ಯೆಗಳಾದ ಶೀತ, ಅಲರ್ಜಿ, ಆಸ್ತಮಾ, ಮೈಕೈ ನೋವು ಮತ್ತು ಕೀಲು ನೋವು, ಅಸಿಡಿಟಿ, ಗ್ಯಾಸ್ ಟ್ರಬಲ್, ಬೇಧಿ, ಮಲಬದ್ಧತೆ, ಅನಿಯಮಿತ ಮತ್ತು ನೋವಿನ ಮುಟ್ಟು, ಪಿಸಿಡಿಒ ಮೊದಲಾದವುಗಳನ್ನು, ಮಾನಸಿಕ ಸಮಸ್ಯೆಗಳಾದ ಮೈಗ್ರೇನ್, ತಲೆನೋವು, ಒತ್ತಡ, ಆತಂಕ, ಖಿನ್ನತೆ, ಏಕಾಗ್ರತೆಯ ಕೊರತೆ, ವ್ಯಸನ, ಭಯ, ಸಂಬಂಧಗಳಲ್ಲಿ ತೊಡಕು ಮೊದಲಾದವುಗಳನ್ನು ನಿವಾರಿಸುತ್ತದೆ ಎನ್ನುತ್ತಾರೆ.