ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಜೂ.23: ಮನುಷ್ಯ ಆರೋಗ್ಯದಿಂದಿರಲು ಜೀವನದಲ್ಲಿ ಯೋಗ ಪ್ರಾಣಾಯಾಮಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ ಎಂದು ಪ್ರಿಯದರ್ಶಿನಿ ಸ್ವ.ಪ.ಪೂ ಕಾಲೇಜಿನ ಪ್ರಾಚಾರ್ಯ ಎಂ ಅಶೋಕ ಅಭಿಪ್ರಾಯಪಟ್ಟರು.
ಅವರು ವಿಶ್ವ ಯೋಗದಿನದ ಅಂಗವಾಗಿ ಮರಿಯಮ್ಮನಹಳ್ಳಿಯ ಪ್ರಿಯದರ್ಶಿನಿ ಸ್ವತಂತ್ರ ಪ.ಪೂ.ಕಾಲೇಜಿನ ಎನ್ಎಸ್ಎಸ್ ಘಟಕ ಹಾಗೂ ಹೊಸಪೇಟೆಯ ಪತಂಜಲಿ ಯೋಗ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.
ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯೋಗ ಮತ್ತು ಪ್ರಾಣಾಯಾಮಗಳಿಗೆ ವಿಶಿಷ್ಟವಾದ ಪ್ರಾಮುಖ್ಯತೆ ಇದ್ದು, ನಾವುಗಳು ಪಾಲನೆ ಮಾಡಿದಲ್ಲಿ ಉತ್ತಮ ಆರೋಗ್ಯ ಪಡೆಯಬಹುದಾಗಿದೆ. ಯೋಗದ ವೈಶಿಷ್ಟತೆ ಮೂಲಕ ಭಾರತ ವಿಶ್ವದಲ್ಲಿ ಮನ್ನಣೆ ಪಡೆದಿದೆ. ಅಲ್ಲದೇ ಇಂದು ಭಾರತದ ಜೊತೆ ಜೊತೆಗೆ ವಿಶ್ವದ ಇನ್ನಿತರೆ ದೇಶಗಳಲ್ಲಿ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ ಎಂದರು.
ಯೋಗ ಮತ್ತು ಪ್ರಾಣಾಯಾಮದಲ್ಲಿ ನೀವುಗಳು ಅಳವಡಿದಿಕೊಳ್ಳುವುದರ ಮೂಲಕ ಏಕಾಗ್ರತೆ ಹಾಗೂ ತಾಳ್ಮೆಯಂತಹ ಅದ್ಭುತ ಶಕ್ತಿಗಳನ್ನುಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.
ನಂತರ ಹೊಸಪೇಟೆಯ ಪತಂಜಲಿ ಯೋಗ ಶಿಕ್ಷಣ ಸಂಸ್ಥೆಯ ನೂರ್ ಜಹಾನ್ ಹಾಗೂ ರಾಜಭಕ್ಷಿಯವರು ಯೋಗ ಹಾಗೂ ಪ್ರಾಣಾಯಾಮಗಳ ವಿವಿಧ ಪಟ್ಟುಗಳನ್ನು ಅಭ್ಯಾಸ ಮಾಡಿಸಿ ಅದರ ಉಪಯೋಗಗಳ ಕುರಿತಾಗಿ ವಿದ್ಯಾರ್ಥಿನಿಯರಿಗೆ ತರಬೇತಿ ನೀಡಿದರು.
ಕಾರ್ಯಕ್ರಮದ ನಂತರ ನೂರ್‌ಜಹಾನ್ ಹಾಗೂ ರಾಜಭಕ್ಷಿಯವರನ್ನು ಕಾಲೇಜು ಶಿಕ್ಷಣ ಸಂಸ್ಥೆಯವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಿಯದರ್ಶಿನಿ ಪದವಿ ಕಾಲೇಜಿನ ಪ್ರಾಚಾರ್ಯ ಪಕ್ಕೀರಪ್ಪ, ಎನ್ ಎಸ್ ಎಸ್ ನ ಕಾರ್ಯಕ್ರಮಾಧಿಕಾರಿ ಪಿ. ರಾಮಚಂದ್ರ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉಪನ್ಯಾಸಕ ಸೋಮಪ್ಪ ನಿರ್ವಹಿಸಿದರು.