ಯೋಗ ಪ್ರವಚನ ಮನುಷ್ಯನನ್ನು ಮುಕ್ತಿ ಮಾರ್ಗದೆಡೆಗೆ ಕೊಂಡ್ಯೊಯುತ್ತದೆ

ರಾಯಚೂರು,ಜ ೧೭ – ಯೋಗ ಪ್ರವಚನ ಮನುಷ್ಯನನ್ನು ಮುಕ್ತಿ ಮಾರ್ಗದೆಡೆಗೆ ಕೊಂಡ್ಯೊಯುತ್ತದೆ ಪರಲೋಕದಲ್ಲಿ ಸುಖ ಬಯಸಿ ಇಹಲೋಕದಲ್ಲಿ ದುಃಖವನ್ನು ಅನುಭವಿಸುವುದು ಜಾಣತನವಲ್ಲ ಇಲ್ಲೇ ವರ್ತಮಾನ ಕಾಲದಲ್ಲೇ ಸುಖವಾಗಿರಬೇಕು ಯಾವ ಧರ್ಮವು ಇದಕ್ಕೆ ಅನುಕೂಲವೋ ಅದೇ ಮಾನವ ಕುಲಕ್ಕೆ ನಿಜವಾದ ಧರ್ಮವಾಗಬಲ್ಲದು ಎಂದು ಶ್ರೀ ಶ್ರೀ ಶ್ರೀ ನಿರಂಜನ ಸ್ವಾಮೀಜಿ ಹೇಳಿದರು.
ಅವರು ತಾಲೂಕಿನ ದೇವಸೂಗುರು ಗ್ರಾಮದ ಬಸ್ ನಿಲ್ದಾಣ ಹತ್ತಿರದ ಶ್ರೀ ಗಣೇಶ ಶಿವ ಪಾರ್ವತಿ ಪರಮೇಶ್ವರ ದೇವಸ್ಥಾನದ ಆವರಣದಲ್ಲಿ ಬಸವ ಸಮಿತಿ ವತಿಯಿಂದ ಹಮ್ಮಿಕೊಂಡ ೧೫ ದಿನಗಳ ಯೋಗ ಪ್ರವಚನ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಯೋಗದಿಂದ ಕೇವಲ ಶಾರೀರಿಕ ಆರೋಗ್ಯ ವೃದ್ಧಿಸುವುದಲ್ಲದೇ ಮಾನಸಿಕ ಆರೋಗ್ಯವು ವೃದ್ಧಿಯಾಗುತ್ತದೆ. ಆದ್ದರಿಂದ ಯೋಗವು ಮನುಷ್ಯನ ಜೀವನದಲ್ಲಿ ಅತ್ಯಂತ ಮುಖ್ಯವಾಗಿದ್ದು, ಯೋಗವು ಕೇವಲ ಇಂದಿಗೆ ಮಾತ್ರ ಸೀಮಿತವಾಗದೇ ಪ್ರತಿಯೊಬ್ಬರು ದಿನನಿತ್ಯವೂ ಯೋಗ ಮಾಡುವ ಮೂಲಕ ಆರೋಗ್ಯವಂತರಾಗಬೇಕು
ಧ್ಯಾನಮಾರ್ಗ, ಭಕ್ತಿ ಮಾರ್ಗ, ಜ್ಞಾನಮಾರ್ಗ, ಕರ್ಮ ಮಾರ್ಗ ಎಲ್ಲವೂ ಒಂದೆಡೆಗೆ ಸೇರುವ ಪ್ರತಿಕವಾಗಿವೆ ಧ್ಯಾನವಿಲ್ಲದ ಜ್ಞಾನ, ಜ್ಞಾನವಿಲ್ಲದ ಧ್ಯಾನ ಅಪಾಯಕಾರಿ ಮನುಷ್ಯ ಮನಸ್ಸನ್ನು ಭವಿಷ್ಯತ್ತಿನ ಕಾಲದಲ್ಲಿ ಇಡಬಾರದು ಮನಸ್ಸು ನಿಶ್ಚಲ ಸ್ಥಿತಿಯಲ್ಲಿರಬೇಕು ಧ್ಯಾನ, ಭಕ್ತಿ, ಜ್ಞಾನ ಮಾರ್ಗಗಳಿಂದ ಮನಸ್ಸಿಗೆ ಆನಂದವಾಗುವುದು ಇದರಿಂದ ಪ್ರಾಪ್ತಿ ದೊರೆಯಲಿದೆ ದೇಶದ ಸಂಸ್ಕೃತಿಯ ಬೀಜ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಬಿತ್ತಬೇಕು ಭಾರತ ಜಗದ್ಗುರು ಆಗುವಲ್ಲಿ ಸಂಸ್ಕಾರವಂತ ಸಮಾಜ ನಿರ್ಮಿಸುವ ಅವಶ್ಯಕತೆ ಇದೆ ಎಂದರು.
ಈ ವೇಳೆ ಪ್ರತಿನಿತ್ಯ ಬೆಳಿಗ್ಗೆ ೫ ಗಂಟೆಗೆ ಯೋಗಾಭ್ಯಾಸ
ಸಂಜೆ ೬ ಗಂಟೆಗೆ ಪ್ರವಚನ ಉಪನ್ಯಾಸ ಕಾರ್ಯಕ್ರಮ ನಡೆಯುತ್ತಿದ್ದು ಬಸವ ಸಮಿತಿಯ ಸಭಕ್ತರಿಂದ ಪ್ರವಚನಿಗೆ ಆಗಮಿಸಿದ ಭಕ್ತಿಗಳಿಗೆ ಅನ್ನ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದ್ದು ಇಂದು ಕೊನೆ ದಿನ ಪ್ರವಚನ ಮುಕ್ತಾಯಗೊಳ್ಳಲಿದ್ದು ಎಲ್ಲ ಸಹಸ್ರಾರುರು ಭಕ್ತಾದಿಗಳು ಪ್ರವಚನಕ್ಕೆ ಆಗಮಿಸಿ ಗುರುವಿನ ಕೃಪೆಗೆ ಪಾತ್ರರಾಗಬೇಕು ಎಂದರು.