ಯೋಗ ಪ್ರಚಾರ ಜಾಥ

ಚಿತ್ರದುರ್ಗ. ಮಾ.೨೬; ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿತ್ರದುರ್ಗ, ಹಾಗು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳಗಟ್ಟ ಇವರ ಸಂಯುಕ್ತಾಶ್ರಯದಲ್ಲಿ ಚಿತ್ರದುರ್ಗ ತಾಲ್ಲೂಕಿನ ಕಲ್ಲೇನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರಿಗಾಗಿ ಉಚಿತ ಯೋಗ ತರಬೇತಿ ಕೇಂದ್ರ ತೆರೆಯಲಾಯಿತು. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಮುಖ್ಯೋಪದ್ಯಾಯಿನಿ ಶ್ರೀಮತಿ ನಾಗೇಂದ್ರಮ್ಮ ಉದ್ಘಾಟಿಸಿದರು ನಂತರ ಗ್ರಾಮದ ಬೀದಿಗಳಲ್ಲಿ ಯೋಗ ಗುರು ರವಿ,ಕೆ.ಅಂಬೇಕರ್ ನೇತೃತ್ವದಲ್ಲಿ ಯೋಗ ಪ್ರಚಾರ ಜಾಥ ನಡೆಸಲಾಯಿತು. ಈ ಸಂಧರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಹೆಚ್.ಕೃಷ್ಣಪ್ಪ, . ಮಂಜುನಾಥ್, ಚನ್ನಕೇಶವ, ಆಶಾ ಕಾರ್ಯಕರ್ತೆ ಶ್ರೀಮತಿ ಪಿ.ಮಹಾದೇವಿ, ಆರೋಗ್ಯ ಪ್ರಶಿಕ್ಷಣಾರ್ಥಿಗಳಾದ ರೋಹಿಣಿ, ಸಹನಾ, ಕವಿತ, ಪಲ್ಲವಿ, ಸಹಾನಾ,ಆರ್., ಅಂಗನವಾಡಿ ಸಹಾಯಕಿ ಮಾರಮ್ಮ ಹಾಗೂ ಶಾಲಾ ಮಕ್ಕಳು ಗ್ರಾಮಸ್ಥರು ಭಾಗವಹಿಸಿದ್ದರು.