ಯೋಗ ನಿಮ್ಮ ಬದುಕಿನ ಭಾಗವಾಗಲಿ: ಹರಿ ಶಂಕರ ಅಗರ್ ವಾಲ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.21: ಯೋಗ  ಕೇವಲ ಆಸನಗಳಿಗೆ ಮಾತ್ರ ಸೀಮಿತವಾಗಿಲ್ಲ ಅದರಲ್ಲಿ ಹಲವಾರು ಆಯಾಮಗಳು ಬರುತ್ತವೆ ಮತ್ತು ಒತ್ತಡದ ಬದುಕಿನ ಇಂದಿನ ದಿನಮಾದಲ್ಲಿ ಯೋಗವನ್ನು ಅಳವಡಿಸಿಕೊಳ್ಳುವದು ಅತ್ಯಂತ ಸೂಕ್ತವಾಗಿದೆ ಎಂದು ಕನಾ೯ಟಕ ಯೋಗ ಮತ್ತು ಕ್ರೀಡಾ ಸಂಸ್ಥೆ ಬಳ್ಳಾರಿ ಸಂಯೋಜಕ  ಹರಿ ಶಂಕರ್ ಆಗರ್ ವಾಲ್ ತಿಳಿಸಿದರು
ಅವರು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಾಲ್ಲಿ  ಬಯಲು ರಂಗ ಮಂದಿರದಲ್ಲಿ ಬುಧವಾರ ಜರುಗಿದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ವಸುದೈವ ಕುಟುಂಬಕಂ ಎನ್ನುವ ತತ್ವದ  ಅಡಿ ನಾವೆಲ್ಲ ಒಂದೇ ಕುಟುಂಬದವರಂತೆ ಬಾಳಿ ಬದುಕಬೇಕಾದ ಅವಶ್ಯಕತೆ ಇದೆ  ನಿಟ್ಟಿನಲ್ಲಿ ಯೋಗದ ಮಹತ್ವವನ್ನು ಅರಿತ ವಿಶ್ವಸಂಸ್ಥೆ ಇಂದಿನ ದಿನವನ್ನು ಯೋಗ ದಿನವನ್ನಾಗಿ ಘೋಷಿಸಿದೆ ಎಂದು ನುಡಿದರು.
ದೈಹಿಕ ಶಿಕ್ಷಣ ವಿಭಾಗದ ವಿದ್ಯಾಥಿಗಳು ಪ್ರಾಥ೯ನೆ ಗೀತೆಯನ್ನು ಹಾಡಿದರು  ನಂತರ ವೇದಿಕೆಯ ಮೇಲಿರುವ ಗಣ್ಯರು ಪತಂಜಲಿ ಮಹಶಿ೯ಯವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿದರು.
ವಿಶ್ವವಿದ್ಯಾಲಯದ ಕುಲ ಸಚಿವರಾದ ಎಸ್. ಎ. ಪಾಟೀಲ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಯೋಗವು ಬಾರತೀಯರು ಜಗತ್ತಿಗೆ ನಿಡಿರುವಂಥಹ ಹಲವಾರು ಕೊಡುಗೆಗಳಲ್ಲಿ ಅತ್ಯಂತ ಪ್ರಮುಖವಾದದ್ದಾಗಿದೆ
ನಡಿಗೆ , ವ್ಯಾಯಾಮ ,ದೈಹಿಕ ಕಸರತ್ತುಗಳು  ಮನುಷ್ಯನನ್ನು ಗಟ್ಟಿಮುಟ್ಟಾಗಿಸಿದರೆ ಯೋಗ ವು ಮಾನಸಿಕ ನೆಮ್ಮದಿ ಮತ್ತು ಆರೋಗ್ಯವಂತರನ್ನಾಗಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಲ್ಲರೂ ಪ್ರತಿನಿತ್ಯ ಯೋಗಾಸನದಲ್ಲಿ ಭಾಗವಹಿಸುವುದು ಒಳಿತು ಎಂದರು.
ವಿದ್ಯಾಥಿ೯ ಜೀವನದಲ್ಲಿ ಮನಸ್ಸನ್ನು ನಿಯಂತ್ರಿಸಲು ಯೋಗವು ಇಂದು ಶಕ್ತಿಯಾಗಿದೆ. ವಿವಿಧ ವಿಭಾಗಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಯೋಗ  ಡಿಪ್ಲೋಮಾ ಕೋರ್ಸ್ ಆರಂಭಿಸಲಾಗಿದೆ ಎಂದರು.
ಪ್ರಾದ್ಯಾಪಕರಿಗೆ, ವಿದ್ಯಾರ್ಥಿಗಳಿಗೆ, ಬೋಧಕೇತರ ಸಿಬ್ಬಂದಿಯವರಿಗೆ ಯೋಗ ಅಧ್ಯಯನ ವಿಭಾಗದ ಅತಿಥಿ ಉಪನ್ಯಾಸಕರಾದ ಮಹೇಶ ಬಾಬು ರವರು ನಡೆಸಿಕೊಟ್ಟರು.
ಡಾ. ಶಶಿಧರ ಕೆಲ್ಲೂರ, ಕಾಯ೯ಕ್ರಮವನ್ನು ನಡೆಸಿಕೊಟ್ಟರು, ಡಾ ಸಂಪತ ಕುಮಾರ, ಸ್ವಾಗತ ಮತ್ತು ಪ್ರಾಸ್ಥಾವಿಕ ನುಡಿಗಳನ್ನಾಡಿದರು, ವಂದನಾಪ೯ಣೆಯನ್ನು ಅತಿಥಿ ಉಪನ್ಯಾಸಕರಾದ ಮಹೇಶ ಬಾಬು ರವರು ನಡೆಸಿಕೊಟ್ಟರು, ವಿಭಾಗದ ಶಿವರಾಮ ರಾಗಿ ಹಾಗೂ ಪಾಪಯ್ಯ  ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಂಶೋಧನಾ & ಸ್ನಾತಕೋತ್ತರ ವಿದ್ಯಾಥಿ೯ಗಳು ಬೋಧಕೇತರ ಸಿಬ್ಬಂದಿ ವಗ೯ದವರಿದ್ದರು.

One attachment • Scanned by Gmail