ಯೋಗ ಧ್ಯಾನ ಪ್ರಾಣಾಮಯಗಳು ಅತ್ಯಮೂಲ್ಯವಾದ ಉಡುಗರೆ ನೀಡಿವೆ – ಮಂಜುನಾಥ

ಸಂಡೂರು ನ:17 ಯೋಗ ಧ್ಯಾನ ಪ್ರಾಣಾಮಯಗಳು ಪುರಾತನ ಹಿಂದುಗಳಿಂದ ಬಂದ ಅತ್ಯಮೂಲ್ಯವಾದ ಉಡುಗೊರೆ ಇದು ಒಂದು ಅಗೋರಿ ವಿಧ್ಯೇಯಾಗಿದ್ದು ಭಾರತ ದೇಶವನ್ನ ಸಾಂಕ್ರಾಮಿಕ ರೋಗಗಳಿಂದ ಮುಕ್ತಗೊಳೀಸಲು ಕಾಲಕಾಲಕ್ಕೆ ದಿವ್ಯ ಔಷಧಿಯಾಗಿ ತನ್ನದೇ ಆದ ಛಾಪು ಮೂಡಿಸುತ್ತಾ ಬಂದಿದ್ದು, 2020ರಲ್ಲಿ ಪ್ರಪಂಚವನ್ನೆ ಕಾಡಿದ ಮಹಾಮಾರಿ ಕರೋನದ ವಿರುದ್ದ ಹೋರಾಟದಲ್ಲಿ ಯೋಗ, ಪ್ರಣಾಮಗಳು ಮಹತ್ವದ ಪಾತ್ರವಹಿಸಿ ಈಡೀ ಪ್ರಪಂಚವನ್ನೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದೆ. ಇಂದಿನ ಯುವ ಜನತೆ ಯೋಗ, ಪ್ರಾಣಾಮಾದಂಥಹ ವಿದ್ಯೇಗಳನ್ನು ಕರಗತ ಮಾಡಿಕೊಂಡು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನಿಡುವ ಅನಿವಾರ್ಯತೆ ಇದೆ ಎಂದು ಆನಂದ ಯೋಗ ಪ್ರಾಣಾಮಾಯನ ಟ್ರಸ್ಟ್ ಯೋಗಗುರು ಮಂಜುನಾಥ ಗುರೂಜಿ ಅಭಿಪ್ರಾಯ ಪಟ್ಟರು.

ಅವರು ತಾಲೂಕಿನ ಯಶವಂತನಗರ ಗ್ರಾಮದಲ್ಲಿ ಆನಂದ ಯೋಗ ಪ್ರಾಣಾಯಮ ಟ್ರಸ್ಟ್ ವತಿಯಿಂದ ಶಿಭಿರಾರ್ಥಿಗಳಿಗೆ ಬ್ರಹ್ಮೋಪದೇಶ ರ್ಕಾಕ್ರಮವನ್ನ ಆಯೋಜಿಸಲಗಿತ್ತು. ಈ ಸಂದರ್ಭದಲ್ಲಿ ಗುರೂಜಿಯವರು ಮಾತನಾಡಿದರು. ನಿವೃತ್ತೆ ಲೆಕ್ಕಾಧಿಕಾರಿ ಜಿ.ಕೆ. ನಾಗರಾಜ ಮಾತನಾಡಿ ನಾನು ಸುಮಾರು 20 ವರ್ಷಗಳಿಂದ ಯೋಗಭ್ಯಾಸ ಮಾಡುತ್ತಿದ್ದು, ಕಳೆದ ಕರೋನ ಕಾಲದಲ್ಲಿ ನಾನೂ ಕೂಡಾ ಪಾಜಿಟಿವ್ ಆಗಿದ್ದೆ. ಯೋಗ ಪ್ರಾಣಾಮಯಗಳ ನಿರಂತರ ಅಭ್ಯಾಸದಿಂದ ಕರೋನ ರೋಗ ನನ್ನನ್ನು ಹೆಚ್ಚು ಬಾದಿಸಿದೆ. ಇದಕ್ಕೆ ನಾನೇ ಸಾಕ್ಷಿ. ಯುವ ಜನತೆ ಯೋಗ ಪ್ರಣಾಮಯಗಳನ್ನು ಹೆಚ್ಚು ಹೆಚ್ಚು ಅಭ್ಯಾಸ ಮಾಡಬೇಕು ಎಂದು ತಮ್ಮ ಅನುಭವದ ಅನಿಸಿಕೆಯನ್ನ ಹಂಚಿಕೊಂಡರು.

ಗ್ರಾಮ ಪಂಚಾಯತಿ ಸದಸ್ಯ ಮೇಟಿ ನಿಂಗಪ್ಪ, ಕವಿತಾ, ಬಸವರಾಜ, ಪತ್ರಕರ್ತರಾದ ಎಸ್.ಎಂ. ಶರಣಯ್ಯ ಬಸವರಾಜ ಗುಂಡಿ ಪ್ರಶಾಂತ ಹಿರೇಮಠ, ಪ್ರತಾಪ ಮೆಟಿ ಹೆಚ್.ಜಿ. ಯರ್ರಿಸ್ವಾಮಿ ಬಸವೇಶ್ವರ ಯೋಗ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ಯಶವಂತನಗರ ಭುಜಂಗನಗರ ನೂರಾರು ಯೋಗಪಟುಗಳು ಸೇರಿದಂತೆ ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ ಯೋಗಪಟುಗಲು ಉಪಸ್ಥಿತರಿದ್ದು, ತಮ್ಮ ಅನುಭವಗಳನ್ನು ಹಂಚಿಕೊಂಡರು.