ಯೋಗ ದೈನಂದಿನ ಜೀವನದ ಭಾಗವಾಗಬೇಕು : ಡಾ.ಶಿವಕುಮಾರ ಸ್ವಾಮಿಜಿ

ಬೀದರ್:ಜೂ.18: ಜನರಿಗೆ ಯೋಗ, ಆಯುರ್ವೇದ, ಪ್ರಾಕೃತಿಕ ಚಿಕಿತ್ಸಾ ಪದ್ದತಿಯ ಬಗ್ಗೆ ಅರಿವಿಲ್ಲದೆನೆ ತಮ್ಮ ಜೀವನ ಶೈಲಿಯನ್ನು ಶಿಸ್ತುಬದ್ದವಾಗಿ ಬದುಕದೆನೆ ಅನಾರೋಗ್ಯಕರ ಭಾವದಿಂದ ಬದುಕುತಿದ್ದಾರೆ ಅದರ ಬದಲಾಗಿ ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವನ್ನಾಗಿಸಿಕೊಂಡು ಬದುಕಬೇಕು ಎಂದು ಚಿದಂಬರಾಶ್ರಮದ ಡಾ.ಶಿವಕುಮಾರ ಮಹಾಸ್ವಾಮಿಜಿ ಹೇಳಿದರು.
ನಗರದ ಎನ್.ಕೆ ಜಾಬಶೇಟ್ಟಿ ಆಯುರ್ವೇದ ಕಾಲೇಜಿನ ಸಹಭಾಗಿತ್ವದಲ್ಲಿ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಆಯುಶ್ ಇಲಾಖೆ, ಸೂರ್ಯ ಫೌಂಡೇಶನ್, ಅಂತರಾಷ್ಟ್ರೀಯ ಪ್ರಾಕೃತಿಕ ಚಿಕಿತ್ಸಾ ಸಂಸ್ಥೆ, ಮೂರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಸಂಸ್ಥೆ ದೆಹಲಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡ ಯೋಗ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನು ಆರೋಗ್ಯಯುತ ಜೀವನ ನಡೆಸದೆ ತನ್ನ ಕಾರ್ಯದ ಒತ್ತಡದಲ್ಲಿ ದಿನೇ ದಿನೇ ತನ್ನಲ್ಲಿರುವ ರೋಗ – ನಿರೋಧಕ ಶಕ್ತಿಯನ್ನು ಕ್ಷಿಣಿಸಿಕೊಳ್ಳುತಿದ್ದಾನೆ ಇದರಿಂದಾಗಿ ಸಣ್ಣ – ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿ ಮೆಡಿಕಲ್ ಶಾಪ್ ಅಥವಾ ಆಸ್ಪತ್ರೆಯ ಬಾಗಿಲು ತಟ್ಟುತ್ತಿದ್ದು ಸ್ವತಃ ತನ್ನಿಂದಲೆ ಆರೋಗ್ಯವನ್ನು ಹಾಳು ಮಾಡಿಕೊಳ್ಳುತಿದ್ದಾನೆ, ಅದಕ್ಕಾಗಿ ಪ್ರತಿಯೊಬ್ಬರು ಯೋಗವನ್ನು ಮೈಗೂಡಿಸಿಕೊಳ್ಳಬೇಕು ಎಂದು ಸ್ವಾಮಿಜಿ ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ಆಯುಶ್ ಇಲಾಖೆಯ ಆಡಳಿತ ಮಂಡಳಿ ಸದಸ್ಯರಾದ ಅನಂತ ಬಿರಾದಾರ ಅವರು ಮಾತನಾಡಿ, 9ನೇ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ 100 ದಿನಗಳ ಕೌಂಟ್‍ಡೌನ್‍ನ ಆರಂಭವನ್ನು ಸೂಚಿಸುವ ಸಲುವಾಗಿ ಮತ್ತು ಯೋಗದ ಪ್ರಚಾರ ಮತ್ತು ಪ್ರಸಾರಕ್ಕಾಗಿ ದೇಶಾದ್ಯಂತ ನೂರು ಕಡೆ ಯೋಗ ಮಹೋತ್ಸವ ಆಚರಿಸಲಾಗುತ್ತಿದೆ ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ದೆಹಲಿಯ ಡಾ.ಎಮ್.ಕೆ ತನೆಜಾ ಅವರು ಮಾತನಾಡಿ ಭ್ರಮರಿ ಪ್ರಾಣಾಯಾಮವು ಮನಸ್ಸಿನ ಪ್ರಶಾಂತತೆಗೆ ಸಹಕಾರಿಯಾದದ್ದು, ಸರಿಯಾಗಿ ನಿದ್ರೆ ಬಾರದಿರುವುದು ಹಾಗೂ ನಿದ್ರತೆಯ ಸಮಸ್ಯೆಗಳಿಗೆ ಇದು ರಾಮಬಾಣವಾಗಿದೆ, ಮಾನಸಿಕ ಒತ್ತಡ, ಆತಂಕ ಇವುಗಳನ್ನು ಕೂಡ ದೂರವಿಡುತ್ತದೆ ಈ ನಿಟ್ಟಿನಲ್ಲಿ ಎಲ್ಲರು ಪ್ರಾಣಾಯಾಮ ಮತ್ತು ಭ್ರಮರಿಯನ್ನು ಕಡ್ಡಾಯವಾಗಿ ಮಾಡಬೇಕೆಂದು ತಿಳಿಸಿದರು.
ಇನ್ನೋರ್ವ ವಿಶೇಷ ಉಪನ್ಯಾಸಕರಾದ
ಹೈದರಾಬಾದನ ಡಾ.ವಿಜಯಲಕ್ಷ್ಮಿ ರೆಡ್ಡಿ ಅವರು ಮಾತನಾಡಿ ಆರೋಗ್ಯಕರ ಜೀವನಶೈಲಿಯು ಪ್ರತಿಯೊಬ್ಬ ವ್ಯಕ್ತಿಗೆ ಪ್ರಮುಖವಾಗಿದೆ, ಅದರಲ್ಲೂ ವಿಶೇಷವಾಗಿ ಮಹಿಳೆಯರು ಅನೇಕ ಜವಾಬ್ದಾರಿಗಳನ್ನು ಮನೆಯೊಳಗಡೆಯು ಮತ್ತು ಹೊರಗಡೆಯು ಹೊಂದಿರುತ್ತಾರೆ
ಅದಕ್ಕಾಗಿ ತಮ್ಮ ಕಾಳಜಿಯನ್ನು ತಾವೆ ತೆಗೆದುಕೊಳ್ಳದಿದ್ದರೆ ತಮ್ಮ ಜೀವನಶೈಲಿಯಲ್ಲಿ ರೋಗಗಳು ನಿಧಾನವಾಗಿ ಹರಿದಾಡುತ್ತವೆ ಮತ್ತು ಇದ್ದಕ್ಕಿದ್ದಂತೆ ಜೀವನದ ಮೇಲೆ ಬಹಳಷ್ಟು ಅಡ್ಡಪರಿಣಾಮವನ್ನುಂಟು ಮಾಡುತ್ತದೆ, ಹೀಗಾಗಿ ಇದೆಲ್ಲವನ್ನೂ ನಿಯಂತ್ರಿಸುಲು ಈ ಯೋಗವು ಬಹಳಷ್ಟು ಸಹಕಾರಿಯಾಗುತ್ತದೆ ಅದಕ್ಕಾಗಿ ಯೋಗವನ್ನು ಎಲ್ಲರೂ ದಿನನಿತ್ಯದ ಭಾಗವಾಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಪತಂಜಲಿ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಮಾತನಾಡಿ ಯೋಗಾಭ್ಯಾಸ ಪದ್ಧತಿಗೆ ಹಲವಾರು ವರ್ಷಗಳ ಇತಿಹಾಸವಿದೆ ನಮ್ಮ ಪೂರ್ವಜರು ದೀರ್ಘಾಯುಷಿಗಳಾಗಿ ಯಾವುದೇ ಕಾಯಿಲೆಗಳು ಇಲ್ಲದೆ ಅತ್ಯಂತ ಆರೋಗ್ಯಕರವಾಗಿ ಇತರರಿಗೆ ಮಾದರಿಯಾಗಿ ಬಾಳಿ ಬದುಕಿದ ದಿನಗಳಿಗೆ ಈ ಯೋಗಾಭ್ಯಾಸ ಕೂಡ ಒಂದು ಮಹತ್ವದ ಸಾಕ್ಷಿಯಾಗಿದೆ ಎಂದರು.

ಸೂರ್ಯ ಫೌಂಡೇಶನ್ ಜಿಲ್ಲಾ ಸಂಯೋಜಕ ಹಾಗೂ ಯೋಗ ಮಹೋತ್ಸವದ ಸಂಚಾಲಕರಾದ ಗುರುನಾಥ ರಾಜಗೀರಾ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಚಿದಂಬರ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಉದಯಭಾನು ಹಲವಾಯಿ, ಬಿ.ಜಿ ಶೆಟಕಾರ, ಶಿವಶರಣಪ್ಪಾ ಸಾವಳಗಿ, ಮಡಿವಾಳಪ್ಪಾ ಗಂಗಶೆಟ್ಟಿ, ಪ್ರಾಚಾರ್ಯರಾದ ಡಾ.ಚಂದ್ರಕಾಂತ ಹಳ್ಳಿ, ಸ್ವಾಗತ ಸಮಿತಿ ಅಧ್ಯಕ್ಷ ಡಾ.ಅಶೋಕ ನಾಗೂರೆ, ಕಾರ್ಯದರ್ಶಿಗಳು ಹಾಗೂ ನಗರಸಭೆ ಸದಸ್ಯರಾದ ಶಶಿಧರ ಹೊಸಳ್ಳಿ, ಆಡಳಿತಾಧಿಕಾರಿ ಡಾ.ಹಾವಗಿರಾವ ಮೈಲಾರೆ, ಡಿನ್ ಡಾ.ವಿಜಯಕುಮಾರ ಬಿರಾದಾರ, ಪ್ರಮುಖರಾದ ಬಾಬುರಾವ ಕಾರಬಾರಿ, ಅನಿಲ ಬಿರಾದಾರ, ಸತ್ಯಪ್ರಕಾಶ, ಯೋಗೆಂದ್ರ ಎದಲಾಪುರೆ, ಸಚ್ಚಿದಾನಂದ ಚಿದ್ರೆ, ಗುರುನಾಥ ಮೂಲಗೆ, ಸುಜಿತ್ ಪಂಡರಾಪುರ, ದೊಂಡಿರಾಮ ಚಾಂದಿವಾಲೆ, ಶ್ರೀಕಾಂತ ಮೋದಿ, ಕಾಮಶೆಟ್ಟಿ ಚಿಕಬಸ್ಸೆ, ವಿಶ್ವನಾಥ ಉಪ್ಪೆ, ಲೋಕೆಶ ಗೊರಟಾ, ವಿನೋದ ಪಾಟೀಲ, ಶಶಾಂಕ ಹೊಸಮನಿ ಸೇರಿದಂತೆ ಇತರರಿದ್ದರು.