ಯೋಗ ದಿನಾಚರಣೆ

ಕೋಲಾರ,ಜೂ ೨೩- ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಗಲ್‌ಪೇಟೆ ಸಿದ್ದ ಸಮಾಧಿ ಯೋಗ ವತಿಯಿಂದ ಆಚಾರ್ಯ ಡಾಕ್ಟರ್ ಪೋಸ್ಟ್ ನಾರಾಯಣಸ್ವಾಮಿ ಯವರ ಧ್ಯಾನ ಮಂದಿರದಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಯೋಗಾಸನ ಪ್ರಾಣಾಯಾಮ ಇತರೆ ತರಬೇತಿಯನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ಸೌಭಾಮ್ಮ, ಜಯಲಕ್ಷ್ಮಮ್ಮ, ಸರೋಜಮ್ಮ, ಧನಲಕ್ಷ್ಮಿ, ಸುದಮ್ಮ, ರತ್ನಮ್ಮ, ಶಾಂತಮ್ಮ, ಜಯಮ್ಮ, ಸರಸ್ವತಮ್ಮ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದ ನೇತೃತ್ವವನ್ನು ಸಿದ್ದ ಸಮಾಧಿ ಯೋಗ ಆಚಾರ್ಯರಾದ ಡಾ. ಪೋಸ್ಟ್ ನಾರಾಯಣಸ್ವಾಮಿ ವಹಿಸಿದ್ದರು. ಚಟ್ನಳ್ಳಿ ನಾರಾಯಣಸ್ವಾಮಿ ಕಿಲಾರಿಪೇಟೆ ಬಿಸಪ್ಪ, ಎಸ್.ಪಿ. ಕಛೇರಿಯ ರವಿಕುಮಾರ್, ಬಿಜೆಪಿ ರಥಮ್ಮ ಇತರರು ಭಾಗವಹಿಸಿದ್ದರು.