ಯೋಗ ತರಬೇತಿ

ಬಾದಾಮಿ,ಜೂ23: ವಿಶ್ವ ಯೋಗ ದಿನಾಚರಣೆ ನಿಮಿತ್ತ ತಾಲೂಕಿನ ನಂದಿಕೇಶ್ವರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರಿಫ್ ಎಚ್ ಬಿರಾದರ್ ಅವರು ಮಕ್ಕಳಿಗೆ ಯೋಗ ತರಬೇತಿಯನ್ನು ಪ್ರಾಯೋಗಿಕವಾಗಿ ನೀಡುವುದಲ್ಲದೆ ಅದರ ಪ್ರಯೋಜನವನ್ನು ಸಹ ತಿಳಿಸಿಕೊಟ್ಟರು ಈ ಕಾರ್ಯಕ್ರಮದಲ್ಲಿ ತಾಲೂಕ ದೈಹಿಕ ಶಿಕ್ಷಣಾಧಿಕಾರಿ ಬಿ.ಹೆಚ್ ಹಳಗೇರಿ ಹಾಗೂ ಸದರಿ ಶಾಲೆಯ ಮುಖ್ಯೋಪಾಧ್ಯಾಯ ಎಸ್ ಬಿ ಶಿರ್ಬೋ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕುಮಾರ್ ಮುಚ್ಕಂಡಿ ಇಲಾಖೆಯ ಮತ್ತೋರ್ವರಾದಂತ ಹನುಮಂತರಾಜು ಶಿಕ್ಷಣ ಸಂಯೋಜಕರು ಮತ್ತು ಸದರಿ ಶಾಲೆಯ ಸಿಬ್ಬಂದಿ ವರ್ಗ ಹಾಜರಿದ್ದರು.