ಯೋಗ ತರಗತಿಯ ಹೊರಗೆ ಕಾಣಿಸಿಕೊಂಡ ಮಲೈಕಾ ಅರೋರಾ. ಫಿಟ್‌ನೆಸ್ ಕ್ವೀನ್ ರನ್ನು ನೋಡಿ ಅಭಿಮಾನಿಗಳು ಹೇಳಿದರು ” ೪೯ ವರ್ಷದಂತೆ ಕಾಣುತ್ತಿಲ್ಲ”

೪೯ ವರ್ಷದ ಮಲೈಕಾ ಅರೋರಾ ಅವರು ತಮ್ಮ ಡ್ರೆಸ್ಸಿಂಗ್ ಸೆನ್ಸ್ ಮತ್ತು ಫಿಟ್‌ನೆಸ್‌ಗಾಗಿ ಆಗಾಗ್ಗೆ ಸುದ್ದಿಯ ಮುಖ್ಯಾಂಶಗಳಲ್ಲಿ ಕಾಣಿಸುತ್ತಾರೆ. ನಟಿ ಇದೀಗ ತನ್ನ ಯೋಗ ತರಗತಿಯ ಹೊರಗೆ ಕಾಣಿಸಿಕೊಂಡಿದ್ದು, ಅದರ ವೀಡಿಯೊವು ಹೊರಬಂದಿದೆ.
ಈ ವೀಡಿಯೊದಲ್ಲಿ, ಮಲೈಕಾ ಆಲಿವ್ ಹಸಿರು ಟಾಪ್ ಮತ್ತು ಕಡು ಹಸಿರು ಪ್ಯಾಂಟ್‌ನಲ್ಲಿ ತುಂಬಾ ಫ್ರೆಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ, ಅವರು ನಗುತ್ತಿರುವ ಫೋಟೋಗ್ರಾಫರ್ ಗಳಿಗೆ ಪೋಸ್ ನೀಡಿದರು. ವಿಡಿಯೋದಲ್ಲಿ ಅವರ ಫಿಟ್ನೆಸ್ ನೋಡಿ ಅಭಿಮಾನಿಗಳು ಸಾಕಷ್ಟು ಹೊಗಳುತ್ತಿದ್ದಾರೆ. ಒಬ್ಬರು ’ಫಿಟ್‌ನೆಸ್ ಕ್ವೀನ್’ ಎಂದು ಬರೆದರೆ, ಇನ್ನೊಬ್ಬರು ಬರೆದಿದ್ದಾರೆ-
“ನಿಮಗೆ ೪೯ ವರ್ಷ ವಯಸ್ಸಾಗಿರುವಂತೆ ಕಾಣುತ್ತಿಲ್ಲ.”
ಮಲೈಕಾ ಓಟಿಟಿ ಜಗತ್ತಿನಲ್ಲಿ ಪಾದಾರ್ಪಣೆ ಮಾಡಿದ್ದಾರೆ, ಅವರು ಈ ದಿನಗಳಲ್ಲಿ ಆ ಕುರಿತು ಚರ್ಚೆಯಲ್ಲಿದ್ದಾರೆ. ಇತ್ತೀಚೆಗೆ ಮಲೈಕಾ ಅವರ ಚಾಟ್ ಶೋ ’ಮೂವಿಂಗ್ ಇನ್ ವಿದ್ ಮಲೈಕಾ’ ಓಟಿಟಿ ನಲ್ಲಿ ಬಿಡುಗಡೆಯಾಗಿದೆ. ಈ ಕಾರ್ಯಕ್ರಮದಲ್ಲಿ ಮಲೈಕಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ.
ಅವರು ಇತ್ತೀಚೆಗೆ ತಾಲೀಮು ವೀಡಿಯೋವನ್ನು ಹಂಚಿಕೊಂಡಿದ್ದಾರೆ ಆ ವರ್ಕೌಟ್ ವಿಡಿಯೋದಲ್ಲಿ ಅವರು ಜಿಮ್ ವೇರ್ ನಲ್ಲಿ ಯೋಗ ಮಾಡುತ್ತಿರುವುದು ಕಂಡುಬಂದಿದೆ. ೪೯ರ ಹರೆಯದ ಮಲೈಕಾ ಅವರ ಈ ಫಿಟ್‌ನೆಸ್ ವಿಡಿಯೋ ನೋಡಿ ಅಭಿಮಾನಿಗಳು ಸಾಕಷ್ಟು ಹೊಗಳುತ್ತಿದ್ದಾರೆ. ಈ ವೀಡಿಯೊವನ್ನು ಹಂಚಿಕೊಂಡಿರುವ ಮಲೈಕಾ ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ- ’ಕ್ಯಾಲೊರಿಗಳನ್ನು ಸುಡುವಲ್ಲಿ ಯೋಗ ಸಹಾಯ ಮಾಡುವುದಿಲ್ಲ ಎಂದು ಯಾರಾದರೂ ನಿಮಗೆ ಹೇಳಿದರೆ, ಅದು ತಪ್ಪು. ನಾನು ಪ್ರತಿದಿನ ಹೆಚ್ಚಿನ ತೀವ್ರತೆಯ ಎಬಿಎಸ್ ಯೋಗವನ್ನು ಮಾಡುತ್ತೇನೆ ಮತ್ತು ಎಂದಿಗೂ ಅಭ್ಯಾಸ ಮಾಡುವುವನ್ನು ಕಳೆದುಕೊಳ್ಳುವುದಿಲ್ಲ. ಈ ಯೋಗವು ನನ್ನನ್ನು ಒತ್ತಡದಿಂದ ದೂರವಿರಿಸಿ ದೇಹದ ಸಮತೋಲನವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.

ಟ್ವಿಂಕಲ್ ಖನ್ನಾ ತಮ್ಮ ಮಗಳ ಜೊತೆ ವಿಹಾರಕ್ಕೆ ಹೋಗಿದ್ದರು:

ಮಗಳು ನಿತಾರಾಳ ಎತ್ತರವನ್ನು ನೋಡಿ, ಅಭಿಮಾನಿಗಳು ಅಕ್ಷಯ್ ಕುಮಾರ್ ರ ಎತ್ತರಕ್ಕೆ ಹೋಲಿಸಿದರು

ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಪತ್ನಿ ಮತ್ತು ನಟಿ ಟ್ವಿಂಕಲ್ ಇತ್ತೀಚೆಗೆ ತಮ್ಮ ಮಗಳು ನಿತಾರಾ ಜೊತೆ ಕಾಣಿಸಿಕೊಂಡಿದ್ದರು. ಅದರ ವೀಡಿಯೋ ಹೊರಬಿದ್ದಿದೆ. ಅವರು ನಂತರ ರಿಕ್ಷಾದಲ್ಲಿ ಪಯಣಿಸಿದರು.


ಈ ವೀಡಿಯೋದಲ್ಲಿ ಟ್ವಿಂಕಲ್ ಮಗಳ ಕೈ ಹಿಡಿದಿರುವುದನ್ನು ಕಾಣಬಹುದು. ಈ ಸಮಯದಲ್ಲಿ, ನಿತಾರಾ ಬಣ್ಣದ ಉಡುಪಿನಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಳು. ೧೦ ವರ್ಷದ ನಿತಾರಾ ತುಂಬಾ ಎತ್ತರವಾಗಿ ಕಾಣುತ್ತಿದ್ದಾಳೆ. ಈ ವೀಡಿಯೊ ಮುಂಚೂಣಿಗೆ ಬಂದ ತಕ್ಷಣ, ಅಭಿಮಾನಿಗಳು ಇದನ್ನು ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಇಷ್ಟಪಡುತ್ತಿದ್ದಾರೆ ಮತ್ತು ನಿತಾರಾಳ ಕ್ಯೂಟ್‌ನೆಸ್ ನ್ನು ಶ್ಲಾಘಿಸುತ್ತಿದ್ದಾರೆ.
ಒಬ್ಬ ನೆಟ್ಟಿಗ ’ಸೋ ಕ್ಯೂಟ್’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ’ಯೇ ತೊ ಪಾಪಾ ಅಕ್ಷಯ್ ಕುಮಾರ್ ಜಿತ್ನಿ ಬಡಿ ಹೋ ಗಯಿ ಹೈ’ ( ಅಕ್ಷಯ್ ಕುಮಾರ್ ನಷ್ಟು ಎತ್ತರಕ್ಕೆ ಬೆಳೆದಿದ್ದಾಳೆ) ಎಂದು ಬರೆದಿದ್ದಾರೆ.


ಬರ್ಸಾತ್, ಮೇಲಾ, ಬಾದ್‌ಶಾ ಮುಂತಾದ ಅತ್ಯುತ್ತಮ ಫಿಲ್ಮ್ ಗಳಲ್ಲಿ ಕಾಣಿಸಿಕೊಂಡಿರುವ ಟ್ವಿಂಕಲ್ ಖನ್ನಾ ಮದುವೆಯ ನಂತರ ಚಲನಚಿತ್ರಗಳಿಂದ ದೂರ ಸರಿಯುವ ಮೂಲಕ ವ್ಯಾಪಾರ ಮತ್ತು ಪುಸ್ತಕಗಳಿಂದ ದೊಡ್ಡ ಹಣವನ್ನು ಗಳಿಸುತ್ತಿದ್ದಾರೆ . ಟ್ವಿಂಕಲ್ ೨೦೦೧ ರಲ್ಲಿ ಬಾಲಿವುಡ್ ಖಿಲಾಡಿ ಕುಮಾರ್ ಅಕ್ಷಯ್ ಅವರನ್ನು ವಿವಾಹವಾದರು, ಅವರಿಗೆ ಒಬ್ಬ ಮಗ ಆರವ್ ಮತ್ತು ಮಗಳು ನಿತಾರಾ ಇದ್ದಾರೆ.