ಯೋಗ ಜಾಥಾಕ್ಕೆ ಚಾಲನೆ

ಕೋಲಾರ,ಜೂ,೨೦- ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಆಯುಷ್ ಇಲಾಖೆ ಇವರ ಸಂಯುಕ್ತಶ್ರಯದಲ್ಲಿ ೯ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ “ಯೋಗ ಫಾರ್ ವಸುದೈವ ಕುಟುಂಬಕಂ” ಹಾಗೂ “ಪರ್ ಆಂಗನ್ ಯೋಗ” ಎಂಬ ಘೋಷವಾಕ್ಯದೊಂದಿಗೆ ಸಾಮೂಹಿಕ ಯೋಗ ಜಾಥಾ ಕಾರ್ಯಕ್ರಮವನ್ನು ನಗರದ ಎಸ್.ಎನ್.ಆರ್ ವೃತ್ತದಲ್ಲಿ ಜಿಲ್ಲಾ ಆಯುಷ ಇಲಾಖೆಯ ಅಧಿಕಾರಿ ಡಾ.ರಮೇಶ್ ಚಾಲನೆ ನೀಡಿದರು.
ಜಾಥಾದಲ್ಲಿ ಯೋಗದ ಮಹತ್ವ, ಉಪಯೋಗದ ಬಗ್ಗೆ ಅರಿವು ಮೂಡಿಸುವ ಸಂದೇಶ ಫಲಕಗಳನ್ನು ಪ್ರದರ್ಶಿಸಲಾಯಿತು. ಇದೇ ಸಂದರ್ಭದಲ್ಲಿ ಡಾ|| ಉಮಾ, ಡಾ|| ಬಸವರಾಜು, ಡಾ|| ರಾಘವೇಂದ್ರ, ಡಾ|| ಶಿವರಾಮ್, ನಾಗಲಕ್ಷ್ಮೀ ಮತ್ತತರರು ಸೇರಿದಂತೆ ಉಪಸ್ಥಿತರಿದ್ದರು.