ಯೋಗ, ಚದುರಂಗದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ


ಸಂಜೆವಾಣಿ ವಾರ್ತೆ
ಕುಕನೂರ. ಸೆ.20-: ಈಚೆಗೆ ಕೊಪ್ಪಳದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರೌಢಶಾಲಾ ಕ್ರೀಡಾಕೂಟಗಳಲ್ಲಿ ಇಟಗಿ ಆದರ್ಶ ವಿದ್ಯಾಲಯದ ವಿದ್ಯಾಶ್ರೀ, ಗಂಗಮ್ಮ, ಸಮೀಕ್ಷಾ ಹಾಗೂ ಚೇತನ್ ಕುಮಾರ ಚದುರಂಗದಲ್ಲಿ ಹಾಗೂ ಯೋಗ ಸ್ಪರ್ಧೆಗಳಲ್ಲಿ ಕೀರ್ತಿ ತೊಂಡಿಹಾಳ, ಜ್ಯೋತಿ ತೊಂಡಿಹಾಳ ಹಾಗೂ ಸಾಗರ ಹೊಸಮನಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕುಕನೂರಿನ ಮೊರಾರ್ಜಿ ವಸತಿ ಶಾಲೆಯ ಆವರಣದಲ್ಲಿ ನಡೆದ ಕುಕನೂರ ಹಾಗೂ ಯಲಬುರ್ಗಾ ತಾಲೂಕ ಮಟ್ಟದ ಕ್ರೀಡಾಕೂಟಗಳಲ್ಲಿ ಆದರ್ಶ ವಿದ್ಯಾಲಯದ ಕಬಡ್ಡಿ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ. ಮಕ್ಕಳ ಈ ಯಶಸ್ವಿಗೆ ಆದರ್ಶ ವಿದ್ಯಾಲಯದ ಮುಖ್ಯೋಪಾಧ್ಯಾಯ ರಾಮರಡ್ದೆಪ್ಪ, ದೈಹಿಕ ಶಿಕ್ಷಣ ಶಿಕ್ಷಕಿ ಕೃಷ್ಣವೇಣಿ ಎನ್, ಶಾಲಾ ಶಿಕ್ಷಕ ಬಳಗ ಹಾಗೂ ವಿದ್ಯಾರ್ಥಿ ಬಳಗ ಅಭಿನಂದಿಸಿದೆ.