ಯೋಗ ಗುರು ರವಿ ಕೆ.ಅಂಬೇಕರ್ ಗೆ‌ ” ಪ್ರಶಸ್ತಿ

ಚಿತ್ರದುರ್ಗ. ಮಾ.೩೦: ಕರ್ನಾಟಕ ಸಾಧಕರ ನಾಡು ಸನ್ಮಾನಕ್ಕಾಗಿ ಸಾಧಕರನ್ನು ಗುರುತಿಸುವಾಗ ಸರಿಯಾದ ನ್ಯಾಯ ಒದಗಿಸುವುದು ತುಂಬಾ ಕಷ್ಟದ ಕೆಲಸ ಅದು ನಮ್ಮ ನಾಡಿನ ಹೆಮ್ಮೆಯೂ ಕೂಡ ಆಗಿದೆ” ಎಂದು ಬೆಂಗಳೂರು ಕನ್ನಡ ನಗರ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಾಯಣ್ಣ ಹೇಳಿದರು.ಅವರು ಬೆಂಗಳೂರು ನಗರಜಿಲ್ಲಾ ಸಾಹಿತ್ಯ ಪರಿಷತ್ತು ಹಾಗೂ ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಚಿತ್ರದುರ್ಗ ಇವರ ಸಹಯೋಗದೊಂದಿಗೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ” ಕನ್ನಡ ಸೇವಾರತ್ನ ” ಪುರಸ್ಕಾರ ಸಮಾರಂಭದಲ್ಲಿ ಯೋಗ ಗುರು ರವಿ ಕೆ.,ಅಂಬೇಕರ್ ಅವರನ್ನು ಅವರ ವಿವಿಧ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ  ಸನ್ಮಾನಿಸಿ ಮಾತನಾಡಿದರು. ಸರಳ ಹಾಗು ಸುಂದರವಾಗಿ ಆಯೋಜಿಸಿದ್ದ ಸಮಾರಂಭದ ಉದ್ಘಾಟನೆ ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷ ರಹಮತ್ ಉಲ್ಲಾ ನೆರವೇರಿಸಿದರು. ಎಸ್.ಜೆ.ಎಂ.ಆಂಗ್ಲ ಮಾದ್ಯಮ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪುಷ್ಪವಲ್ಲಿ ಅಧ್ಯಕ್ಷತೆ ವಹಿಸಿ, ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷೆ ಶ್ರೀಮತಿ ದಯಾವತಿ ಪುತ್ತೂರ್ಕರ್, ಚಿಕ್ಕೇನಹಳ್ಳಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕಿ ಶ್ರೀಮತಿಚಾಂದಿನಿ ಖಾಲಿದ್, ಹೊನ್ನಗೊಂಡನಹಳ್ಳಿ ಸರ್ಕಾರಿ ಶಾಲಾ ಸಹ ಶಿಕ್ಷಕಿ ಕೆ.ಅಕ್ಷತ, ಸಾಹಿತಿ ಪಂಡ್ರಹಳ್ಳಿ ಶಿವರುದ್ರಪ್ಪ ಮುಂತಾದವರು ಭಾಗವಹಿಸಿದ್ದರು.