ಯೋಗ ಎಲ್ಲರಿಗೂ ಬೇಕಾದ ಸರಳ ವಿಧ್ಯೆ 

ಚಿತ್ರದುರ್ಗ.ಜು.೨೮; ಯೋಗ ಪ್ರಾಣಾಯಾಮ ಧ್ಯಾನ ಇವು ಕೇವಲ ಸನ್ಯಾಸಿಗಳು, ಋಷಿಮುನಿಗಳಿಗೆ ಮೀಸಲಾದ ವಿಧ್ಯೆಯಲ್ಲ, ಅದು ಆರೋಗ್ಯ ಬಯಸುವ ಪ್ರತಿಯೊಬ್ಬರೂ ಕಲಿಯಬೇಕಾದ ಕಲೆ. ಪ್ರತಿದಿನ ಯೋಗಾಭ್ಯಾಸ ಮಾಡಿ ಎಂದರೆ ಸಮಯ ಇಲ್ಲ ಎಂದು ಹೇಳುವವರು ಆರೋಗ್ಯ ಕೆಟ್ಟಾಗ ವೈದ್ಯರ ಭೇಟಿಗಾಗಿ ದಿನವೆಲ್ಲ ವ್ಯರ್ಥ ಮಾಡುವುದರೊಂದಿಗೆ ಮನೆಯ ಇತರ ಸದಸ್ಯರ ಸಮಯದ ಜೊತೆಗೆ ಹಣ, ನೆಮ್ಮದಿ ಹಾಳು ಮಾಡುತ್ತಾರೆ ಆಲಸ್ಯ ಜೀವನ ಬಿಟ್ಟು ಪ್ರತಿದಿನ ಯೋಗಕ್ಕಾಗಿ ಒಂದು ಗಂಟೆ ಮೀಸಲಿಟ್ಟು ಆರೋಗ್ಯಯುತ ನೆಮ್ಮದಿಯ ಜೀವನ ನಡೆಸಿ ಎಂದು ಭಾರತೀಯ ಯೋಗ ಶಿಕ್ಷಣ ಸಂಸ್ಥೆಯ ಸಂಸ್ಥಾಪ ಅಧ್ಯಕ್ಷ ಹಾಗೂ ಯೋಗ ಪ್ರಚಾರಕ ರವಿ ಕೆ.ಅಂಬೇಕರ್ ಹೇಳಿದರು. ನಗರದ ದೇವರಾಜ ಅರಸ್ ಎಜುಕೇಷನ್ ಸೊಸೈಟಿಯ 40ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಸಂಸ್ಥೆಯ ಸಭಾ ಭವನದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಬಹುಮಾನ ವಿತರಣಾ ಸಮಾರಂಭದಲ್ಲಿ ಸನ್ಮಾನ ಸೀಕರಿಸಿ ಅವರು ಮಾತನಾಡಿದರು.ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ಇಂಡಿಯನ್ ಇಂಟರ್ ನ್ಯಾಷನಲ್ ವಿಧ್ಯಾ ಸಂಸ್ಥೆ ಪ್ರಾಂಶುಪಾಲರಾದ ಕೆ.ಟಿ.ಕೊಟ್ರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ದೇವರಾಜ್ ಅರಸ್ ವಿಧ್ಯಾ ಸಂಸ್ಥೆಯು ಕಳೆದ ನಲವತ್ತು ವರ್ಷಗಳಿಂದ ಜಿಲ್ಲೆಯ ಶಿಕ್ಷಣ ವಲಯದಲ್ಲಿ ಸಾಕಷ್ಟು ಸೇವೆಸಲ್ಲಿಸುತ್ತಾ ಬಂದಿದ್ದು ಇಲ್ಲಿನ ಜಿಲ್ಲೆಯ ವಿಧ್ಯಾರ್ಥಿಗಳ ದಾಹ ನೀಗಿಸುತ್ತ ಬಂದಿದೆ ಇಲ್ಲಿ ಶಿಕ್ಷಣ ಪಡೆದ ಹಲವಾರು ವಿಧ್ಯಾರ್ಥಿಗಳು ಅನೇಕ ಉನ್ನತ ಸ್ಥಾನಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದು ದೇವರಾಜ್ ಅರಸ್ ವಿಧ್ಯಾ ಸಂಸ್ಥೆಯ ಹೆಮ್ಮೆಯಾಗಿದೆ. ಈ 40ನೇ ವರ್ಷದ ವಾರ್ಷಿಕೋತ್ಸವ ಸಂಧರ್ಭದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ತಮ್ಮದೇ ಆದ ಛಾಪು ಮೂಡಿಸಿರುವ 100 ಸಾಧಕರನ್ನು ಆಯ್ಕೆ ಮಾಡಿ ಸನ್ಮಾನಿಸುತ್ತಿರುವುದು ಸಂಸ್ಥೆಯ ಇನ್ನೊಂದು ಹೆಗ್ಗಳಿಕೆಯಾಗಿದೆ” ಎಂದು ಹೇಳಿದರು.