ಯೋಗ ಅಭ್ಯಾಸದಿಂದ ಸರ್ವ ರೋಗಗಳು ನಿವಾರಣೆ : ರಾಜೇಶ್ವರಿ ಪಿ.ಎಸ್

ಜೇವರ್ಗಿ :ಜೂ.23: ಮನುಷ್ಯರಾದ ನಾವುಗಳು ನಮ್ಮ ಜೀವನದಲ್ಲಿ ಯೋಗವನ್ನು ಪ್ರತಿ ದಿನ ಮಾಡಬೇಕು, ಯೋಗ ಅಭ್ಯಾಸದಿಂದ ಸರ್ವ ರೋಗಗಳು ನಿವಾರಣೆಯಾಗುತ್ತವೆ. ಕೇವಲ ಯೋಗ ದಿನದಂದೇ ಯೋಗ ಮಾಡುವುದಷ್ಟೇ ಅಲ್ಲ ಪ್ರತಿನಿತ್ಯ ಯೋಗ ಅಭ್ಯಾಸ ಮಾಡಬೇಕು ಎಂದು ತಾಲೂಕ ದಂಡಾಧೀಕಾರಿ ರಾಜೇರ್ಶವರಿ ಪಿ. ಎಸ. ಅಭಿಮತಪಟ್ಟರು.

ತಾಲೂಕಿನ ಗುರುಕುಲ ಅಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಪತಂಜಲಿ ಯೋಗ ಸಮಿತಿ ಸಯುಕ್ತ ಆಶ್ರಯದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ತಾಲೂಕಿನ ದಂಡಾಧಿಕಾರಿಗಳಾದ ಶ್ರೀಮತಿ ರಾಜೇಶ್ವರಿ ಪಿ ಎಸ್ ಸಸಿಗೆ ನೀರುಣಿಸುವುದರ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು.

ಯೋಗ ಅಭ್ಯಾಸ ಮಾಡುವುದರಿಂದ ಮನುಷ್ಯನ ಸರ್ವ ರೋಗಗಳು ನಿವಾರಣೆ ಆಗುತ್ತವೆ. ಅದಕ್ಕಾಗಿ ನಮ್ಮ ಭಾರತದ ಋಷಿಗಳು ಗುಡ್ಡಗಾಡು ಹಿಮಾಲಯದಂತ ಪರ್ವತ ಪ್ರದೇಶದಲ್ಲಿ ಯೋಗಭ್ಯಾಸ ಮಾಡಿ ತಮ್ಮ ಆಯುಷ್ಯ ಹೆಚ್ಚು ಮಾಡಿಕೊಳ್ಳುತ್ತಿದ್ದರು. ಜೊತೆಗೆ ಜ್ಞಾನ ವೃದ್ಧಿಕೂಡ ಆಗುತ್ತದೆ. ಅದಕ್ಕಾಗಿ ಮಕ್ಕಳು ಬುದ್ಧಿ ಶಕ್ತಿ ಮತ್ತು ದೈಹಿಕ ಬೆಳವಣಿಗೆಗೆ ಯೋಗ ಬಾಳ ಮುಖ್ಯ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಯೋಗಭ್ಯವಾಸ ಅಳವಡಿಸಿಕೊಂಡರೆ ಜ್ಞಾನಹೆಚ್ಚಿಸುತ್ತದೆ ಸದೃಢರಾಗಿರುತ್ತೀರಿ. ಯೋಗ ದಿನದಂದೇ ಯೋಗ ಮಾಡುವುದಷ್ಟೇ ಅಲ್ಲ ಪ್ರತಿನಿತ್ಯ ಯೋಗ ಅಭ್ಯಾಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಪತಾಂಜಲಿ ಯೋಗ ಸಮಿತಿ ತಾಲೂಕ ಅಧ್ಯಕ್ಷರಾದ ಅನಿಲ್ ರಾಂಪುರ, ಡಾ. ಪಿ.ಎಂ ಮಠ, ಚೆನ್ನಮಲ್ಲಯ್ಯ ಹಿರೇಮಠ್, ಬಿ ಆರ್ ಸಿ ಎಸ್ ಟಿ ಬಿರಾದಾರ್, ಎಸ್ ಕೆ ಬಿರಾದರ್, ಮಹಾಂತಯ್ಯ ಹಿರೇಮಠ್, ವೀರಯ್ಯ ಹಿರೇಮಠ, ಬಸವರಾಜ್ ಹಡಪದ್, ವಿಜಯ್ ಕುಮಾರ ಪಾಟೀಲ್ ಸೇಡಂ, ಜಗದೀಶ್ ಉಕನಾಳ, ಜ್ಯೋತಿ ಸಾಲಿಮಠ, ಧರ್ಮಣ್ಣ ಬಡಿಗೇರ್, ವಿಜೇಂದ್ರ ಎಚ್ ಸಿ, ಮುದ್ದು ಮಕ್ಕಳು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು