ಯೋಗ- ಅಧ್ಯಾತ್ಮ ಬದುಕಿನ ಭಾಗವಾಗಬೇಕು: ಸಂಗಯ್ಯ ಶ್ರೀಗಳು

ವಿಜಯಪುರ, ಮಾ.31-ಮನುಷ್ಯನಿಗೆ ಯೋಗದಿಂದ ಆಗುವ ಪ್ರಯೋಜನ ಒಂದೆರಡಲ್ಲ ಯೋಗ ಮತ್ತು ಅಧ್ಯಾತ್ಮ ಬದುಕಿನ ಭಾಗವಾಗಬೇಕು ಎಂದು ನಂದಿಹಾಳ ಪಿ.ಯು. ಕೊಡೆಕಲ್ಲ ಮಠದ ವೇ. ಸಂಗಯ್ಯ ಶ್ರೀಗಳು ಹೇಳಿದರು.
ಅವರು ಬಸವನಬಾಗೇವಾಡಿ ತಾಲೂಕಿನ ನಂದಿಹಾಳ ಪಿ. ಯು. ಗ್ರಾಮದ ಶ್ರೀ ಕೊಡೆಕಲ್ ಬಸವೇಶ್ವರ ಜಾತ್ರೆಯ ಅಂಗವಾಗಿ ಗ್ರಾಮದ ಗೆಳೆಯರ ಬಳಗ ಮತ್ತು ತಾಲೂಕು ಪತಂಜಲಿ ಯೋಗ ಸಮಿತಿ,ಬಸವನಬಾಗೇವಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಬರುವ ಏಪ್ರಿಲ್ 1 ರಿಂದ 8 ರ ವರೆಗೆ ಬೆಳಿಗ್ಗೆ 5.15 ರಿಂದ 6. 30ರ ವರೆಗೆ ಗ್ರಾಮದ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳುವ ಯೋಗ ಶಿಬಿರದ ಪೂರ್ವಭಾವಿ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಯೋಗ ಗುರು ಶ್ರೀ ಕಾಶೀನಾಥ ಅವಟಿಯವರು ಮಾತನಾಡಿ, ಗಂಡು ಹೆಣ್ಣು ಎನ್ನದೆ ಎಲ್ಲರಿಗೂ ಆರೋಗ್ಯ ಮತ್ತು ದೈಹಿಕ ಸದೃಢತೆ ಆಧಾರದ ಮೇಲೆ ಪ್ರತ್ಯೇಕ ಆಸನಗಳನ್ನು ಹೇಳಿ ಕೊಡಲಾಗುವುದು ಶಿಬಿರದ ಪ್ರಯೋಜನ ಗ್ರಾಮಸ್ಥರು ಪಡೆಯಬೇಕೆಂದರು. ಯೋಗ ಸಮಿತಿಯ ಕಾರ್ಯದರ್ಶಿ ಪ್ರಭಾಕರ ಖೇಡದ ಮಾತನಾಡುತ್ತಾ ಸಮಿತಿಯಿಂದ ಇದುವರೆಗೆ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡ ಶಿಬಿರಗಳಲ್ಲಿ ಹಲವಾರು ಶಿಬಿರಾರ್ಥಿಗಳು ಪ್ರಯೋಜನಗಳನ್ನು ಪಡೆದಿದ್ದಾರೆ ಎಂದರು.
ಇನ್ನೊರ್ವ ಅತಿಥಿ ಡಾ. ಶ್ರೀಶೈಲ ಕೂಡಗಿಯವರು ಹೋಮಿಯೋಪತಿ ಮತ್ತು ಯೋಗ ಮಾನವನಿಗೆ ಅತೀ ಅವಶ್ಯಕವಾಗಿದೆ.ಕೊರೊನಾ ಕಾಲಘಟ್ಟದಲ್ಲಿ ಪ್ರತಿಯೊಬ್ಬರು ಯೋಗ ಜೀವನ ರೂಢಿಸಿಕೊಳ್ಳಲುಸಲಹೆ ನೀಡಿದರು.
ವೇದಿಕೆಯ ಮೇಲೆ ಶರಣಪ್ಪ ಕುಮಶಿ, ಗೋಲಪ್ಪ ಬೆಂಕಿ, ಶರಣಪ್ಪ ಕಾಟಕರ, ಶೇಖಪ್ಪಮುತ್ಯಾ ಬೆಂಕಿ, ಅಪ್ಪು ಹಾದಿಮನಿ ಬಾಪೂರಾಯ ಔರಸಂಗ, ದಿಗಪ್ಪ ಔರಸಂಗ, ಶ್ರೀಶೈಲ ಹಡಪದ, ಮಲ್ಲಿಕಾರ್ಜುನ ಮನಗೂಳಿ, ಇದ್ದರು. ಮಲ್ಲು ಹಡಪದ ಪ್ರಾರಂಭದಲ್ಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.