ಯೋಗ್ಯ ಸರಕಾರ ಮತ್ತು ಜನಪ್ರತಿನಿಧಿಯ ಆಯ್ಕೆ ಮತದಾರರ ಕೈಯಲ್ಲಿದೇ

ಕೆಂಭಾವಿ:ಎ.14:ಪ್ರತಿ ಮತದಾರ ಮತದಾನದಲ್ಲಿ ಭಾಗಿಯಾಗಬೇಕು. ಚುನಾವಣಾ ಹಬ್ಬದಲ್ಲಿ ಎಲ್ಲ ಮತದಾರರು ಭಾಗವಹಿಸುವಂತೆ ಸುರಪುರ ತಾಪಂ ಇಓ ಹಾಗೂ ಸ್ವೀಪ್ ಸಮಿತಿ ಮುಖ್ಯಸ್ಥ ಚಂದ್ರಶೇಖರ ಪವಾರ ಕರೆ ನೀಡಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಪಂ ಯಾದಗಿರಿ ಹಾಗೂ ಸುರಪುರ, ಶಹಾಪುರ ತಾಲೂಕು ಸ್ವೀಪ್ ಸಮಿತಿ ಹಮ್ಮಿಕೊಂಡ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹದಿನೆಂಟು ವರ್ಷ ಮೇಲ್ಪಟ್ಟ ಜನರು ಕಡ್ಡಾಯವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಯಾರು ಕೂಡಾ ಮತದಾನದಿಂದ ವಂಚಿತರಾಗಬಾರದು. ಯೋಗ್ಯ ಸರಕಾರ ಹಾಗೂ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಜವಾಬ್ಧಾರಿ ಎಲ್ಲ ಮತದಾರರ ಮೇಲಿದೆ ಎಂದು ತಿಳಿಸಿದರು.
ಶಹಾಪುರ ತಾಪಂ ಇಓ ಹಾಗೂ ಸ್ವೀಪ್ ಸಮಿತಿ ಮುಖ್ಯಸ್ಥ ಸೋಮಶೇಖರ ಬಿರಾದಾರ ಮಾತನಾಡಿ, ಹೇಗೆ ರಕ್ತ ದೇಹ ನಿರ್ಮಿಸುತ್ತದೆ ಹಾಗೆಯೆ ಮತ ಸದೃಢ ದೇಶವನ್ನು ನಿರ್ಮಿಸುತ್ತದೆ. ಮತದಾನ ಸಂವಿಧಾನಾತ್ಮಕವಾಗಿ ಬಂದ ಹಕ್ಕು. ಅದನ್ನು ಮೇ.10 ರಂದು ನಡೆಯುವ ಚುನಾವಣಾ ಹಬ್ಬದಲ್ಲಿ ಚಲಾಯಿಸಲು ಎಲ್ಲರೂ ಭಾಗವಹಿಸಬೇಕು. ಆ ಮೂಲಕ ಪ್ರಜಾಪ್ರಭುತ್ವದ ಮೌಲ್ಯವನ್ನು ಸಾಕಾರಗೊಳಿಸಬೇಕು. ಮತದಾರರು ಹಣ, ಹೆಂಡ ಸೇರಿದಂತೆ ಯಾವದೇ ಆಮಿಷಗಳಿಗೆ ಬಲಿಯಾಗಬಾರದು. ನಿಷ್ಪಕ್ಷಪಾತದಿಂದ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಮೌನೇಶ ಕಂಬಾರ ಮತದಾನದ ಬಗ್ಗೆ ತಿಳಿಸಿ ಮತದಾನದ ಕುರಿತು ಸುಂದರವಾದ ಹಾಡನ್ನು ಹಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಪುರಸಭೆ ಮುಖ್ಯಾಧಿಕಾರಿ ಮಲ್ಲಿಕಾರ್ಜುನ ರಾಮಸಮುದ್ರ, ಕಂದಾಯ ನಿರೀಕ್ಷಕ ಹಣಮರೆಡ್ಡಿ ವೇದಿಕೆ ಮೇಲಿದ್ದರು. ಗ್ರಾಮ ಲೆಕ್ಕಿಗ ರಾಜೇಸಾಬ, ಪಿಡಿಓ ಜಯಾಚಾರ್ಯ ಪುರೋಹಿತ, ಶ್ರೀಶೈಲ ಹಳ್ಳಿ, ಸತೀಶ ಆಲಗೂರ, ಮೌನೇಶ ಸೇರಿದಂತೆ ಪುರಸಭೆ ಸಿಬ್ಬಂದಿ, ಸಾರ್ವಜನಿಕರಿದ್ದರು. ಪುರಸಭೆ ಸಿಬ್ಬಂದಿ ಸಾಯಬಣ್ಣ ನಿರೂಪಿಸಿದರು.
ಪುರಸಭೆ ಕಟ್ಟಡದ ಮೇಲೆ ಸಾಲಾಗಿ ಮೇಣದ ಬತ್ತಿಗಳನ್ನು ಹಚ್ಚುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದಕ್ಕೂ ಮೊದಲು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ಪೆÇ್ರಜೆಕ್ಟರ್ ಮೂಲಕ ಜನ ಜಾಗೃತಿ ಕಿರುಚಿತ್ರವನ್ನು ಜನರಿಗೆ ತೊರಿಸಲಾಯಿತು.