
ಕೆಜಿಎಫ್, ಏ. ೨೭:ಪಾರಂಡಹಳ್ಳಿ ಗ್ರಾಪಂ, ವ್ಯಾಪ್ತಿಯ ಮತದಾರರು ಪ್ರಶ್ನೆ ಮಾಡುವಂತಹ ಯೋಗ್ಯ ಅಭ್ಯರ್ಥಿ ಆಯ್ಕೆ ಮಾಡಿ ಗ್ರಾಮಗಳ ಅಭಿವೃದ್ದಿಗೆ ಪೂರಕವಾಗಿ ಸಹಕರಿಸಬೇಕೆಂದು ವಕೀಲ ಹರಿನಾಥ್ ತಿಳಿಸಿದರು.ವಕೀಲರ ಗೃಹ ಕಚೇರಿಯಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ, ಪಾರಂಡಹಳ್ಳಿ ಗ್ರಾಪಂಗೆ ಕೋಟ್ಯಾಂತರ ರೂ.ಗಳ ಅನುದಾನ ಬಿಡುಗಡೆಯಾಗಿ ಬಂದಿದ್ದು, ಬಹುತೇಕ ಎಲ್ಲ ಕಾಮಗಾರಿಗಳು ಕಳಪೆಯಿಂದ ಕೂಡಿವೆ, ಇನ್ನೂ ಕೊಳವೆ ಬಾವಿಗಳ ಕೊರೆಸುವಿಕೆಯಿಂದ ಕೊಳವೆ ಬಾವಿಗಳಿಗೆ ಅಳವಡಿಸಿರುವ ಪಂಪು ಮೋಟಾರ್‌ಗಳು ಸಹ ಕಳಪೆಯಾಗಿದೆ, ಕೊಳವೆ ಬಾವಿಗಳ ರಿಪೇರಿಗೆ ಲಕ್ಷಾಂತರ ರೂ.ಗಳ ಬಿಲ್ಲನ್ನು ಕಚೇರಿಯಿಂದ ನೀಡಲಾಗಿದೆ, ಇಷ್ಟಲ್ಲಾ ಅವ್ಯವಹಾರಗಳ ನಡೆದಿರುವ ಬಗ್ಗೆ ನಮ್ಮ ಬಳಿ ಸೂಕ್ತ ದಾಖಲೆಗಳ ಸಮೇತ ಹಿರಿಯ ಅಧಿಕಾರಿಗಳಿಗೆ ದೂರನ್ನು ನೀಡಲಾಗಿದೆಗ್ರಾಪಂ ಸದಸ್ಯರು ಇಷ್ಟೆಲ್ಲಾ ಅವ್ಯವಹಾರಗಳು ಕಂಡರೂ ಕಾಣದಂತೆ ಜಾಣಕುರುಡರಾಗಿದ್ದಾರೆ, ಬೇಲೆಯೇ ಎದ್ದು ಹೊಲ ಮೇಯಿತ್ತಿದ್ದರೂ ಸದಸ್ಯರು ಸಹ ಭ್ರಷ್ಟಚಾರದಲ್ಲಿ ಭಾಗಿಯಾಗಿದ್ದಾರೆ, ಚುನಾವಣೆ ಸಂದರ್ಭದಲ್ಲಿ ಸೂಕ್ತ ಅಭ್ಯರ್ಥಿಗೆ ಮತ ನೀಡಿ ಆಯ್ಕೆ ಮಾಡಿದರೆ ಭ್ರಷ್ಟಾಚಾರವನ್ನು ಪ್ರಶ್ನೆ ಮಾಡಲು ಸಹಕಾರಿಯಾಗಲಿದೆ ಎಂದು ಹರಿನಾಥ್ ತಮ್ಮ ಅಭಿಪ್ರಾಯ ಹಂಚಿಕೊಂಡು ಎರಡು ಬಾರಿ ಮಾಜಿ ಶಾಸಕರಾಗಿರುವ ಎಸ್.ರಾಜೇಂದ್ರನ್‌ರಿಗೆ ಬೆಂಬಲ ನೀಡುವಂತೆ ಕೋರಿದರು.ಮುಖಂಡ ಕೃಷ್ಣಾರೆಡ್ಡಿ ಮಾತನಾಡಿ, ೪ ಸಾವಿರ ಜನಸಂಖ್ಯೆ ಇರುವ ಪಾರಂಡಹಳ್ಳಿ ಗ್ರಾಮದಲ್ಲಿ ಸ್ಮಶಾಣಕ್ಕೆ ಇಲ್ಲದೆ ಸತ್ತ ಹೆಣಗಳನ್ನು ಕೆರೆಗಳಲ್ಲಿ ಹೂಳುತ್ತಿದ್ದರು, ಇದನ್ನು ಮನಗೊಂಡು ಜಿಲ್ಲಾಧಿಕಾರಿ ಗಮನಕ್ಕೆ ತಂದ ನಂತರ ಕೂಡಲೇ ಎರಡು ಎಕರೆ ಸರಕಾರಿ ಭೂಮಿ ಸ್ಮಶಾನಕ್ಕೆ ಮಂಜೂರು ಮಾಡಿದ್ದರು, ಮಂಜೂರು ಮಾಡಿರುವ ಎರಡು ಎಕರೆ ಭೂಮಿ ಪ್ರಭಾವಿಗಳು ಬೇಸಾಯಕ್ಕೆ ಬಳಸಿಕೊಂಡಿರುವುದು ಖೇಧಕರ ವಾಗಿದೆ, ಇಂತಹ ಸಮಸ್ಯೆಗಳು ಪಾರಂಡಹಳ್ಳಿ ಗ್ರಾಪಂನಲ್ಲಿ ಸಾಕಷ್ಟು ಇದ್ದು ಎಲ್ಲವನ್ನು ಪ್ರಶ್ನೆ ಮಾಡುವಂತಹ ಒಬ್ಬ ಜನಪ್ರತಿನಿಧಿಯ ಅವಶ್ಯಕತೆಯಿದ್ದು, ನಿಮ್ಮ ಮತವನ್ನು ಯೋಗ್ಯ ಅಭ್ಯರ್ಥಿಗೆ ನೀಡಿ ಅಯ್ಕೆ ಮಾಡಬೇಕೆಂದು ತಿಳಿಸಿದರು.
ಮಾಜಿ ಶಾಸಕ .ಎಸ್.ರಾಜೇಂದ್ರನ್ ಬೊಮ್ಮಿ, ಮಂಜುನಾಥ್, ಮನೋಹರ್, ಮಂಜು, ಕೃಷ್ಣಾರೆಡ್ಡಿ, ಬಾಬುರೆಡ್ಡಿ ಇದ್ದರು.