ಯೋಗೇಶ್ವರ್ ವಜಾಕ್ಕೆ ಒತ್ತಾಯಿಸಿ ಕೈ ಪ್ರತಿಭಟನೆ

ಬೆಂಗಳೂರು, ಮೇ ೨೮- ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ಸ್ವಪಕ್ಷದ ಬಿಜೆಪಿಯವರೇ ಮಾಡುತ್ತಿರುವ ಆರೋಪದ ಹಿನ್ನೆಲೆ ಯೋಗೇಶ್ವರ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಹಾಗೂ ಅತ್ಯಾಚಾರದ ಆರೋಪಿ ಶಾಸಕ ರಮೇಶ್ ಜಾರಕಿಹೊಳಿಯನ್ನು ರಕ್ಷಿಸುತ್ತಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡಲೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಹಾಗೂ ರಮೇಶ್ ಜಾರಕಿಹೊಳಿಯನ್ನು ಬಂಧಿಸಬೇಕೆಂದು ಆಗ್ರಹಿಸಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖಂಡ ಎಸ್. ಮನೋಹರ್ ನೇತೃತ್ವದಲ್ಲಿ ಇಂದು ನಗರದ ಕಾಂಗ್ರೆಸ್ ಭವನದ ಮುಂಭಾಗ ಪ್ರತಿಭಟನೆ ನಡೆಸಿದರು.
ಯೋಗೇಶ್ವರ್ ವಿರುದ್ಧ ಸ್ವಪಕ್ಷದ ಬಿಜೆಪಿಯವರೇ ಆರೋಪ ಮಾಡುತ್ತಿದ್ದಾರೆ ಹಾಗೂ ಸಚಿವ ಸಂಪುಟದಿಂದ ಯೋಗೇಶ್ವರ್ ರನ್ನು ಉಚ್ಚಾಟಿಸಬೇಕೆಂದು ಆಗ್ರಹಿಸುತ್ತಿ
ದ್ದಾರೆ.
ಆದರೆ ದುರಂತವೆಂದರೆ, ಯೋಗೇಶ್ವರ್ ಇನ್ನೂ ಈ ರೀತಿಯ ಆರೋಪವನ್ನು ಹೊತ್ತು ಸಚಿವ ಸ್ಥಾನದಲ್ಲಿ ಮುಂದುವರಿಯುತ್ತಿರುವುದನ್ನು ಗಮನಿಸಿದರೆ ಯೋಗೇಶ್ವರ್‌ಗೆ ಸ್ವಾಭಿಮಾನವಿಲ್ಲ, ಅಧಿಕಾರ ಮಾತ್ರ ಸೀಮಿತ ಎಂಬುದು ಈಗ ಜಗಜ್ಜಾಹೀರಾಗಿದೆ.
ಸಿ ಪಿ ಯೋಗೇಶ್ವರ್ ಮೆಗಾಸಿಟಿ ಹಗರಣದ ರೂವಾರಿ ಎಂದು ಶಾಸಕ ರೇಣುಕಾಚಾರ್ಯ ನೇರ ಆರೋಪ ಮಾಡಿದ್ದಾರೆ ಹಾಗಾದರೆ ಮುಖ್ಯಮಂತ್ರಿಗಳು ತನ್ನ ಸಚಿವ ಸಂಪುಟದಲ್ಲಿ ಅವರಿಗೆ ಯಾವ ಆಧಾರದ ಮೇಲೆ ಸಚಿವ ಸ್ಥಾನವನ್ನು ನೀಡಿದರು ಎಂಬುದನ್ನು ಜನತೆಗೆ ತಿಳಿಸಬೇಕು. ಈ ಕೂಡಲೇ ಯೋಗೇಶ್ವರ್ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಒತ್ತಾಯಿದರು.
ಈ ಪ್ರತಿಭಟನೆಯಲ್ಲಿ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖಂಡರಾದ ಜಿ.ಜನಾರ್ದನ್, ಎ. ಆನಂದ್, ಎಂ.ಎ.ಸಲೀಂ,ಮಹೇಶ್,ವೈ.ಪುಟ್ಟರಾಜು,ಚಂದ್ರಶೇಖರ ಮತ್ತಿತರರು ಭಾಗವಹಿಸಿದ್ದರು.