ಯೋಗಿ ಸರ್ಕಾರದಲ್ಲಿ ೧೦ ಸಾವಿರ ಮಂದಿ ಹತ್ಯೆ

ಲಕ್ನೋ, ಮಾ ೧೮- ಕಳೆದ ಆರು ವರ್ಷಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರ೧೦ ಸಾವಿರಕ್ಕೂ ಹೆಚ್ಚು ಎನ್ಕೌಂಟರ್ ಮಾಡಿರುವ ಬಗ್ಗೆ ವರದಿಯಾಗಿದೆ.

ಯುಪಿ ಮಡೆದ ಎನ್ಕೌಂಟರ್ಗಳನ್ನು ಪೈಕಿ ಮೀರತ್ವಲಯದಲ್ಲೇ ಹೆಚ್ಚಿನ ಎನ್ಕೌಂಟರ್ಗಳನ್ನ ಮಾಡಲಾಗಿದೆ. ಈ ವಲಯದಲ್ಲಿ ಬರೋಬ್ಬರಿ ೩,೧೫೨ ಎನ್ಕೌಂಟರ್ಗಳನ್ನು ಪೊಲೀಸರು ಮಾಡಿದ್ದಾರೆ ಎಂದು ಹೇಳಲಾಗಿದೆ.

ಉತ್ತರ ಪ್ರದೇಶದ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಈವರೆಗೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ೧೭೮ ಮಂದಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ.
ಅಪರಾಧಿಗಳನ್ನು ಸೆರೆ ಹಿಡಿದು ಕೊಟ್ಟರೆ ೫ ಸಾವಿರದಿಂದ ೭೫ ಸಾವಿರ ರೂಪಾಯಿ ತನಕ ಬಹುಮಾನ ಘೋಷಣೆ ಮಾಡಲಾಗಿತ್ತು. ಉತ್ತರ ಪ್ರದೇಶ ರಾಜ್ಯಾದ್ಯಂತ ಪೊಲೀಸರು ವಿಶೇಷ ಕಾರ್ಯಾಚರಣೆ ವೇಳೆ ೨೦೧೭ರ ಮಾರ್ಚ್ ೨೦ ರಿಂದ ೨೦೨೩ರ ಮಾರ್ಚ್ ೬ ಅವಧಿಯಲ್ಲಿ ಒಟ್ಟು ೨೩,೦೬೯ ದುಷ್ಕರ್ಮಿಗಳನ್ನು ಸೆರೆ ಹಿಡಿದಿದ್ದಾರೆ.
೨೦೧೭ರಿಂದ ಈವರೆಗೆ ಮೀರತ್ ವಲಯದಲ್ಲಿ ೬೩ ಕ್ರಿಮಿನಲ್‌ಗಳು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ. ಇದಲ್ಲದೆ ೧,೭೦೮ ಕ್ರಿಮಿನಲ್ಗಳು ಗಾಯಾಳುಗಳಾಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಸರ್ಕಾರಿ ವಕ್ತಾರರು ಮಾಹಿತಿ ನೀಡಿದ್ಧಾರೆ.
ದುಷ್ಕರ್ಮಿಗಳನ್ನು ಸೆರೆ ಹಿಡಿಯುವಾಗ ನಡೆದ ಗುಂಡಿನ ಚಕಮಕಿ ವೇಳೆ ೪,೯೧೧ ಆರೋಪಿಗಳು ಗಾಯಗೊಂಡಿದ್ದಾರೆ. ಈ ೬ ವರ್ಷಗಳ ಅವಧಿಯಲ್ಲಿ ದುಷ್ಕರ್ಮಿಗಳ ಜೊತೆಗಿನ ಗುಂಡಿನ ಕಾಳಗದಲ್ಲಿ ಒಟ್ಟು ೧೩ ಪೊಲೀಸರು ಹುತಾತ್ಮರಾಗಿದ್ದಾರೆ. ಇದಲ್ಲದೆ ೧,೪೨೪ ಪೊಲೀಸರಿಗೆ ಗುಂಡೇಟು ತಗುಲಿ ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಆಯ್ಕೆ ಯಾದ ಬಳಿಕ ರಾಜ್ಯದಲ್ಲಿ ಎನ್ಕೌಂಟರ್ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ ಎನ್ನಬಹುದು.