ಯೋಗಾ ವಾಲಿಂಟಿಯರ್ ಸರ್ಟಿಫಿಕೇಷನ್ ಕೋರ್ಸ್ ಆರಂಭ

ಬೀದರ:ಜೂ.4: ಕೇಂದ್ರ ಸರ್ಕಾರದ ಆಯುಷ್ ಇಲಾಖೆ, ಯೋಗಾ ಸರ್ಟಿಫಿಕೇಷನ್ ಬೋರ್ಡ್, ಸೂರ್ಯ ಫೌಂಡೇಶನ್ ಹಾಗೂ ಇಂಟರ್‍ನ್ಯಾಷನಲ್ ನ್ಯಾಚುರೋಪತಿ ಅರ್ಗನೈಸೇಷನ್ ಸಹಯೋಗದಲ್ಲಿ ಯೋಗಾ ವಾಲಿಂಟಿಯರ್ ಸರ್ಟಿಫಿಕೇಷನ್ ಕೋರ್ಸ್‍ಗೆ ಆನ್‍ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.
ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಪ್ರತಿ ಜಿಲ್ಲೆಗೆ ವೆಲ್‍ನೆಸ್ ಸೆಂಟರ್ ಹಾಗೂ ಯೋಗ ಗ್ರಾಮ ಯೋಜನೆಯನ್ನು ಬರುವ ದಿನಗಳಲ್ಲಿ ಜಾರಿಗೊಳಿಸಲಿದ್ದು, ಪ್ರತಿ ಗ್ರಾಮಕ್ಕೆ ಒಬ್ಬರು ಯೋಗ ಶಿಕ್ಷಕರನ್ನು ನಿಯೋಜಿಸಿ, ಪ್ರತಿ ದಿನ ಜನರಿಗೆ ಯೋಗ, ಧ್ಯಾನ ಮತ್ತು ಅಧ್ಯಾತ್ಮದ ಬಗ್ಗೆ ತರಬೇತಿ ನೀಡುವ ಯೋಜನೆಯಿದೆ.
ಹಾಗೆಯೇ ಯೋಗದಲ್ಲಿ ಪರಿಪೂರ್ಣ ತರಬೇತಿ ನೀಡಿ ಪಕ್ವಗೊಳಿಸುವುದು ಮತ್ತು ಉತ್ತಮ ಯೋಗಾ ಪಟುಗಳನ್ನು ತಯಾರಿಸಿ, ಹೆಚ್ಚಿನ ಜನರಿಗೆ ಯೋಗಾ ತರಬೇತಿ ನೀಡುವುದು ಯೋಗಾ ಸರ್ಟಿಫಿಕೇಷನ್ ಬೋರ್ಡ್‍ನ ಉದ್ದೇಶವಾಗಿದೆ. ಯೋಗಾಭ್ಯಾಸವು ದೈಹಿಕ ಮತ್ತು ಮಾನಸಿಕ ಆರೋಗ್ಯ ನೀಡುವ ಜೊತೆಗೆ ಯಾವುದೇ ರೋಗ ರುಜಿನಗಳಿಲ್ಲದೇ ಉಲ್ಲಾಸಮಯ ಜೀವನ ನಡೆಸಲು ಸಹಾಯ ಮಾಡುತ್ತದೆ.
ಬೀದರ ಜಿಲ್ಲೆಯವಾದ ಕೇಂದ್ರ ಸರ್ಕಾರದ ಆಯುಷ್ ಇಲಾಖೆಯ ಹಣಕಾಸು ಸಮಿತಿ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ಇಂಟರ್‍ನ್ಯಾಷನಲ್ ನ್ಯಾಚುರೋಪತಿ ಅರ್ಗನೈಸೇಷನ್ ರಾಷ್ಟ್ರೀಯ ಅಧ್ಯಕ್ಷರಾದ ಅನಂತ ಬಿರಾದಾರ ಅವರ ನೇತೃತ್ವದಲ್ಲಿ ದೇಶಾದ್ಯಂತ ಸರ್ಟಿಫಿಕೇಷನ್ ಕೋರ್ಸ್ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಒಂದು ಲಕ್ಷ ಜನರ ನೋಂದಣಿಯ ಗುರಿ ಹೊಂದಲಾಗಿದೆ. ಈ ಕುರಿತಂತೆ ಐಎನ್‍ಓ ರಾಜ್ಯಾಧ್ಯಕ್ಷರಾದ ಯೋಗಾಚಾರ್ಯ ನಿರಂಜನಮೂರ್ತಿ ಹಾಗೂ ರಾಜ್ಯ ಸಂಚಾಲಕ ಮಂಜುನಾಥ ಸ್ವಾಮಿ ಅವರ ನೇತೃತ್ವದಲ್ಲಿ ಇತ್ತೀಚೆಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಸಂಚಾಲಕರೊಂದಿಗೆ ವೆಬಿನಾರ್ ಮೂಲಕ ಪೂರ್ವಭಾವಿ ಸಭೆ ನಡೆದಿದೆ.
ನÉೂೀಂದಣಿ ಶುಲ್ಕ 500 ರೂ. ನಿಗದಿಪಡಿಸಿದ್ದು, 2021ರ ಜೂನ್ 8ರ ವರೆಗೆ ಯೋಗಾ ಸರ್ಟಿಫಿಕೇಷನ್ ಕೋರ್ಸ್‍ಗೆ ನೋಂದಣಿ ಪಡೆಯಬಹುದು. ತರಗತಿಗಳು ಆನ್‍ಲೈನ್ ಮುಖಾಂತರ ನಡೆಯಲಿದ್ದು, ಜೂನ್ 11ರಿಂದ ಆರಂಭಗೊಳ್ಳಲಿವೆ. ಕೋರ್ಸ್ ಪೂರ್ಣಗೊಂಡ ನಂತರ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
ವೆಬ್‍ಸೈಟ್: www.ycb.inosurya.com ಹೆಸರು ನೋಂದಾಯಿಸಿಕೊಳ್ಳಬಹುದು. ಯೋಗಾ ಕ್ಷೇತ್ರದಲ್ಲಿ ಆಸಕ್ತರಿರುವವರು ಕೊನೆಯ ದಿನಾಂಕದೊಳಗಾಗಿ ನೋಂದಣಿಯಾಗಿ ಯೋಜನೆಯ ಲಾಭ ಪಡೆಯಬೇಕು ಎಂದು ಸೂರ್ಯ ಫೌಂಡೇಶನ್‍ನ ಬೀದರ ಜಿಲ್ಲಾ ಸಂಚಾಲಕರಾದ ಗುರುನಾಥ ರಾಜಗೀರಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೋಂದಣಿ ಮತ್ತು ಹೆಚ್ಚಿನ ವಿವರಗಳಿಗೆ ಐಎನ್‍ಓ ಜಿಲ್ಲಾ ಘಟಕದ ಅಧ್ಯಕ್ಷರಾದ ಧೊಂಡಿರಾಮ್ ಚಾಂದಿವಾಲೆ:9972901475, ಸಂಚಾಲಕ ಜಗದೀಶ ಬುಟ್ಟೆ:9008284607, ಔರಾದ ಸಂಚಾಲಕ ಬಸವರಾಜ ಹಳ್ಳೆ:8123979550, ಭಾಲ್ಕಿ ಸಂಚಾಲಕ ಈಶ್ವರ ರುಮ್ಮಾ:9663266837, ಬಸವಕಲ್ಯಾಣ ಸಂಚಾಲಕ ರತಿಕಾಂತ ಕೋಹಿನೂರ್:9686767777, ಹುಮನಾಬಾದ ಸಂಚಾಲಕ ಅನೀಲ ಪಸಾರ್ಗಿ:9902393672, ಬೀದರ ಸಂಚಾಲಕ ರವೀಂದ್ರ ಸೋರಳ್ಳಿ:8123369294 ಇವರನ್ನು ಸಂಪರ್ಕಿಸಬಹುದು.