ಯೋಗಾಸನ  ಚಾಂಪಿಯನ್ ಶಿಪ್ ಸ್ಪರ್ಧೆಗೆ ಚಾಲನೆ

ದಾವಣಗೆರೆ.ಸೆ.೪; ಸ್ವಚ್ಛ ಭಾರತ ಅನುಗುಣವಾಗಿ ಸ್ವಸ್ಥ್ಯ ಆರೋಗ್ಯ ಮಾಡುವುದೇ ನಮ್ಮ ಸಂಸ್ಥೆಯ ಉದ್ದೇಶ ಎಂದು ರಾಜ್ಯ ಕರ್ನಾಟಕ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಶನ್ ಸಂಸ್ಥೆಯ ಅಧ್ಯಕ್ಷರಾದ ಜಿ ಎನ್ ಕೃಷ್ಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ಕರ್ನಾಟಕ ರಾಜ್ಯ ಅಮೆಚೂರ್ ಯೋಗ     ಸ್ಪೋರ್ಟ್ಸ್ ಅಸೋಸಿಯೇಶನ್     ಚಿಕ್ಕಮಗಳೂರು ಜಿಲ್ಲಾ ಯೋಗಾಸನ ಕರಾಟೆ ಅಸೋಸಿಯೇಶನ್ ಶ್ರೀ ರಾಘವೇಂದ್ರ ಯೋಗ ಶಿಕ್ಷಣ ಕೇಂದ್ರ ಕಡೂರು ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಡಿಸ್ಟ್ರಿಕ್ಟ್ 317-ಡಿ .ಚಕ್ರವರ್ತಿ ಪಿಯು ಕಾಲೇಜ್ ಕಡೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ ಹಿರಿಯರಿಗೆ ಕರ್ನಾಟಕ ರಾಜ್ಯ ಯೋಗಾಸನ 2022.ಇದರ ಉದ್ಘಾಟನೆಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು ನಮ್ಮ ಸಂಸ್ಥೆಯಿಂದ ನಿರಂತರವಾಗಿ ಯೋಗಾಸನ ಸ್ಪರ್ಧೆ ಚಾಂಪಿಯನ್ ಶಿಪ್ ಸ್ಪರ್ಧೆಗಳನ್ನು ನಡೆಸುತ್ತಾ ಬರಲಾಗಿದೆ.ಯೋಗದ ಸೇವೆ ನಮ್ಮ ಗುರಿಯಾಗಿದೆ ಈ ಭಾವನೆಯನ್ನು ಇಟ್ಟುಕೊಂಡು ಕೆಲಸದ ಕಾರ್ಯ  ಚಟುವಟಿಗಳನ್ನು ಮಾಡುತ್ತಿದ್ದೇವೆ ಎಂದು ಹೇಳಿದರು. ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಸ್ಪರ್ಧೆಗಳಲ್ಲಿ ಓಪನ್ ಜಡ್ಜ್ ಮೆಂಟ್ ಮಾಡಿರುವುದು  ನಮ್ಮ ಸಂಸ್ಥೆ ಗೆ ತಂದ ಗೌರವ  ನಾವು ಇಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು ಕೊರೋನಾ ಸಮಯದಲ್ಲಿ 3ವರ್ಷಗಳ  ಕಾಲ ಕ್ರೀಡೆಗಳು  ಸ್ತಬ್ಧವಾಗಿದ್ದವು ಅಂತ ಸಮದಯಲ್ಲಿ ಕೂಡ ನಾವು ಆನ್ ಲೈನ್ ಮೂಲಕ ಯೋಗಾಸನ ಚಾಂಪಿಯನ್ ಷಿಪ್ ಸ್ಪರ್ಧೆಗಳು ನಡೆಸಿದ್ದೇವೆ. ಇಂದು ನಡೆಯುತ್ತಿರುವ ಸ್ಪರ್ಧೆಗಳಿಗೆ ಮೂವತ್ತೊಂದು ಜಿಲ್ಲೆಗಳು ಕೂಡ ಯೋಗ ಪಟುಗಳು ಯೋಗ ಸಂಸ್ಥೆಗಳು ಭಾಗವಹಿಸಿದ್ದವು ಪ್ರತಿವರ್ಷ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಗಳು ಹಾಗೂ ಫೆಡರೇಷನ್ ನಡೆಸುವಂಥ ಯೋಗ ಸ್ಪರ್ಧೆಗಳು ಕೂಡ ನಮ್ಮ ಸಂಸ್ಥೆಯು ನಿರಂತರವಾಗಿ ಸೇವೆ ಸಲ್ಲಿಸುತ್ತಾ ಬಂದಿದೆ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಸ್ವಚ್ಛ ಭಾರತ ಎಂಬ     ಅಭಿಯಾನ ವನ್ನು ದೇಶದ ಉದ್ದಗಲಕ್ಕೂ ಪಸರಿಸಿದರು ಈ ಹಿನ್ನೆಲೆಯಲ್ಲಿ ನಾವು ಸ್ವಚ್ಚ ಆರೋಗ್ಯವನ್ನು ಕೂಡ ಯೋಗಾಸನ ಸ್ಪರ್ಧೆಗಳ ಮೂಲಕ ಹಾಗೂ ವಿವಿಧ ಕಾರ್ಯ ಚಟುವಟಿಕೆಗಳ ಮೂಲಕ ಸಾರ್ವಜನಿಕರಿಗೆ ಯೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಿದ್ದೇವೆ ಎಂದರು.   .ಕಾರ್ಯಕ್ರಮದ ಉದ್ಘಾಟನೆ ಮಾಡಿದಂತಹ ಪಿ ಎಮ್ ಜೆ.ಎಫ್ ಲಯನ್ಸ್ ಜಿಲ್ಲಾ ರಾಜ್ಯಪಾಲರೂ ಆದ ಲಯನ್ ಸಂಜಿತ್ ಶೆಟ್ಟಿ ಇವರು ಮಾತನಾಡಿ ಮನುಷ್ಯ ಪ್ರತಿನಿತ್ಯ ಆಹಾರ ವನ್ನು ಸೇವಿಸುತ್ತಾನೆ  ಅದೇರೀತಿ ಆಗಿ ಪ್ರತಿನಿತ್ಯ     ಯೋಗಾಸನ ಕೂಡ ಮನುಷ್ಯನಿಗೆ ಬೇಕಾಗುತ್ತದೆ ಎಂದರು.  ನಾವು ದಿನನಿತ್ಯ  ಯೋಗಾಸನ ಮಾಡುವುದರಿಂದ ನಮ್ಮ ಆರೋಗ್ಯವು ಚೆನ್ನಾಗಿ ಇಟ್ಟುಕೊಳ್ಳಬಹುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಡೂರಿನ ನಗರಸಭೆ ಅಧ್ಯಕ್ಷರಾದ ಭಂಡಾರಿ ಶ್ರೀನಿವಾಸ್, ಜಿಲ್ಲಾ ಯೋಗ ಸಂಸ್ಥೆಯ ಎಚ್ ಎಲ್ ಶೇಖರಪ್ಪ, ಎಂ ಜಿ ಅಮರನಾಥ್, ಸಿಎನ್ ನರೇಂದ್ರನಾಥ, ಅಡಿ ಕೆ ಬೆಳೆಗಾರರಾದ ಅಡಿಕೆ ಚಂದ್ರು, ಜಿಲ್ಲಾ ಆಯುಷ್ ಅಧಿಕಾರಿ ಡಾ .ಗೀತಾ ಹಾಗೂ ರಾಜ್ಯ ಯೋಗ ಸಂಸ್ಥೆಯ ಕಾರ್ಯದರ್ಶಿಯಾದ ಕೆ ಪ್ರಭು, ಲಯನ್ ಜಿ ಎಂ ಗಿರೀಶ್,  ಶ್ರೀಮತಿ ವಿಜಯ ಗಿರೀಶ್, ಪ್ರಕಾಶ್ ಎಂ ಸಿ, ಮಧುಪ್ರಕಾಶ್, ತ್ಯಾಗರಾಜ್ ಕೆಎಸ್, ಡಾ. ಮಂಜುನಾಥ್ ಬಿ ಕೆ ಮುಂತಾದವರು ಉಪಸ್ಥಿತರಿದ್ದರು.