
ವಿಜಯಪುರ:ಎ.12: ಸಾವಿರಾರು ವರ್ಷಗಳಿಂದ ಯೋಗಾಸನವು ದೇಶದ ಎಲ್ಲ ಕಡೆಗೂ ಬೆಳೆಯುತ್ತ ಬಂದಿದೆ. ಯೋಗ ಸಾಧನೆಯಲ್ಲಿ ಹಲವಾರು ದೈಹಿಕ ಮಾನಸಿಕ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದು ಇದು ಆದ್ಯಾತ್ಮಿಕ ಸಂಕಲ್ಪ ಶಕ್ತಿ ವೃದ್ದಿಸುವಲ್ಲಿ ಸಹಕಾರಿ ಎಂದು ಸಾಹಿತಿ ಸಂಗಮೇಶ ಬದಾಮಿ ಹೇಳಿದರು.
ನಗರದ ಗಗನ ಮಹಲ ಉದ್ಯಾನವನ ಆವರಣದಲ್ಲಿ ನಡೆದ ದೆಹಲಿಯ ಭಾರತೀಯ ಯೋಗ ಸಂಸ್ಥಾನದ 57ನೇ ಸ್ಥಾಪನಾ ದಿವಸ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ಯೋಗ ಜೀವನದ ಬಗ್ಗೆ ಅರಿಯಲು ಮಾನವರೆಲ್ಲ ಉತ್ಸುಕರಾಗಿದ್ದಾರೆ. ದೇಹ ಮತ್ತು ಮನಸ್ಸು ಆರೋಗ್ಯವಾಗಿದ್ದರೆ ದೇಹವು ಆರೋಗ್ಯವಾಗಿರುತ್ತದೆ. ಪ್ರಾಪಂಚಿಕ ಸಂಗತಿಯಲ್ಲಿ ಸಿಕ್ಕು ಬಳಲುತ್ತಿರುವ ಜನರಿಗೆ ಇಂದು ಯೋಗ ಅವಶ್ಯಕವಾಗಿದೆ ಇದರಿಂದ ಮಾನಸಿಕ ನೆಮ್ಮದಿ ಮತ್ತು ಅಧ್ಯಾತ್ಮಿಕ ಉನ್ನತಿಯನ್ನು ಸಾಧಿಸಬಹುದು ಎಂದರು.
ಯೋಗ ಶಿಕ್ಷಕರಾದ ಮಡಿವಾಳಪ್ಪ ದೊಡಮನಿ ಮಾತನಾಡಿ ಯೋಗವನ್ನು ತಪ್ಪದೇ ಮಾಡಬೇಕು ಇದಕ್ಕೆ ವಯಸ್ಸು ಮತ್ತು ಲಿಂಗಬೇಧವಿಲ್ಲ ದೇಹದ ಅಂಗ ಕಣಕಣಗಳು ಭೇದಿಸಿ ಪ್ರಾಣಾಯಾಮ, ಬಂಧಕ್ರಿಯೆ, ಮುದ್ರೆಗಳಲ್ಲಿ ಅಡಕವಾಗಿದೆ. ಈ ಸಾಧನೆಗೆ ಮುಖ್ಯವಾಗಿ ಯಮ, ನಿಯಮ, ಆಸನ, ಪ್ರಾಣಾಯಮ, ಪತ್ಯಾಹಾರ, ಧಾರಣ, ಧ್ಯಾನ ಸಮಾಧಿಗಳೆಂದು 8 ಅಷ್ಟಾಂಗ ಯೋಗಗಳು ಇಂತಹ ಯೋಗ ವಿದ್ಯೆಯನ್ನು ನಾವೆಲ್ಲರೂ ಅನುಸರಿಸಿ ದೈವತ್ವವನ್ನು ಪಡೆದು ಜೀವನವನ್ನು ಪಡಿಸಿಕೊಳ್ಳೊಣ ಎಂದರು.
ಯೋಗ ಶಿಕ್ಷಕ ಆನಂದ ಬುತಡಾ ಯೋಗಾಸನದ ಮಹತ್ವ ವಿವರಿಸಿ ಪದ್ಮಾಸನ, ತಾಡಾಸನ, ಅರ್ಧಚಕ್ರಾಸನ, ಯೋಗ ಮುದ್ರಾಸನ, ಕೊನಾಸನ, ಧಮರಾಸ, ಕವಾಸನ, ನಗು, ನೇತ್ರ ರಕ್ಷಣೆ ಕ್ರಿಯೆ, ಧ್ಯಾನ, ಕಪಾಲಬಾತಿ, ಪ್ರಣಾಯಾಮ ಆಸನಗಳ ಮಾರ್ಗದರ್ಶನ ನೀಡುತ್ತ ಭಾರತೀಯ ಯೋಗ ಸಂಸ್ಥಾನದ ಯೋಗ ಸಂಸ್ಥಾನದ ಯೋಗ ಸಾಧನಾ ಕೇಂದ್ರಗಳಾದ ಗಗನ ಮಹಲ ಉದ್ಯಾನವನ, ಡಾ. ನಾಗೂರ ಆಯುರ್ವೇದಿಕ ಕಾಲೇಜ ಕ್ಯಾಂಪಸ್ ಅಡವಿ ಶಂಕರ ಲಿಂಗೇಶ್ವರ ಕಾಲನಿ ಗಾರ್ಡನಲ್ಲಿ ಕಳೆದ 7 ವರ್ಷಗಳಿಂದ ಉಚಿತವಾಗಿ ಯೋಗಾಸನವನ್ನು ನಡೆಸುತ್ತ ಬರುತ್ತಿದೆ ಎಂದರು.
ಶೀತಾರಾ, ರಕ್ಷಿತಾ, ವೈಷ್ಣವಿ, ಶ್ರಾವಣಿ, ಸಾಧನಾ, ಪ್ರೇಕ್ಷಾ ಮಕ್ಕಳ ಯೋಗದ ಆಸನಗಳನ್ನು ಮಾಡಿ ತೋರಿಸಿದರು.
ಯೋಗ ಪಟುಗಳಾದ ಮಹೇಶ ಮೇತ್ರಿ, ರಾಜೇಶ ಪೊಳ, ನಾಗರಾಜ, ಹಾಲಳ್ಳಿ, ವಿದ್ಯಾ, ಪ್ರಭಾ, ಮಹಾದೇವಿ, ಶುಭಾಗಿನಿ, ಪರಮಾನಂದ, ವಿಶ್ವನಾಥ ರಮಾಕಾಂತ, ಮಾಣಿಕ ತೋಶ್ನಿವಾಲ ಇತರರು ಉಪಸ್ಥಿತರಿದ್ದರು. ಶ್ರೀಶೈಲ ಧುಲಂಗೆ ನಿರೂಪಿಸಿ ವಂದಿಸಿದರು. ಯೊಗ ಶಿಬಿರದಲ್ಲಿ ಹಿರಿಯ ನಾಗರಿಕರು ಮಹಿಳೆಯರು ಪಾಲ್ಗೊಂಡಿದ್ದು, ಕಾರ್ಯಕ್ರಮ ಯಶಸ್ವಿಯಾಯಿತು.