ಯೋಗಾಸನದಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು

ಸಂಜೆವಾಣಿ ವಾರ್ತೆದಾವಣಗೆರೆ.ಜು.೨೬; ಪತಂಜಲಿ ಯೋಗ ಕೇಂದ್ರ  ಮತ್ತು ಡಿವಿಜಿ  ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವೇದಿಕೆ ಬೆಂಗಳೂರು  ಇವರುಗಳ ಸಂಯುಕ್ತಾ‌ಶ್ರಯದಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಚಾಂಪಿಯನ್ಸ್ 2023ರ ಸ್ಪರ್ಧೆಯಲ್ಲಿ ದಾವಣಗೆರೆಯ   ಶ್ರೀ ಹರಿಹರೇಶ್ವರ ಯೋಗ ಶಿಕ್ಷಣ ಕೇಂದ್ರ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿರುತ್ತಾರೆ.ಎಸ್ ಎಸ್ ಏನ್ ಪಿ ಶಾಲೆಯ ವಿದ್ಯಾರ್ಥಿಯಾದ 11 ರಿಂದ 15 ರ ವಿಭಾಗದ ಬಾಲಕ ವಿಭಾಗದಲ್ಲಿ ಸೌರಭ ಎಂ.ಆರ್ .ನಾಲ್ಕನೇ ಸ್ಥಾನವನ್ನು ಮತ್ತು 40 ರಿಂದ 50 ವರ್ಷದ ಮಹಿಳೆಯರ ವಿಭಾಗದಲ್ಲಿ ದೀಪ ಕೆ.ಎ ಇವರು ನಾಲ್ಕನೇ ಸ್ಥಾನವನ್ನು ಗಳಿಸಿದ್ದಾರೆ.  ಹಾಗೂ   ಓಜಸ್ ಎಂ ಜೆ.,  ಅವಿಷ್ಕ, ಶ್ರೇಯ, ಕರ್ಣಂ ,ನಿರಂತ್, ಸಂಜಯ್, ಕರಣಂ  ಇವರು ಕೂಡ ಭಾಗವಹಿಸಿ ಸಮಾಧಾನಕರ ಬಹುಮಾನವನ್ನು ಪಡೆದಿರುತ್ತಾರೆ.ಸಂಸ್ಥೆಯ ಅಧ್ಯಕ್ಷರಾದ ಡಾ. ಸಪ್ನಾ ಇವರು ಹಾಗೂ  ಶಾಲೆಯ ಮುಖ್ಯ ಶಿಕ್ಷಕರು ,ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.