ಯೋಗಾಥಾನ್ -2022 ಕಾರ್ಯಕ್ರಮ

ಗದಗ, ಜು 27: ನಗರದ ಕಳಸಾಪೂರ ರಸ್ತೆಯ ಒಳಾಂಗಣ ಕ್ರೀಡಾಂಗಣದಲ್ಲಿ ಒತ್ತಡ ನಿವಾರಣೆಗಾಗಿ ಯೋಗ ಎಂಬ ಥೀಮ್‍ನೊಂದಿಗೆ ಯೋಗಾಥಾನ್ -2022 ಕಾರ್ಯಕ್ರಮ ಜರುಗಿತು.
ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಸುಶೀಲಾ ಬಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಬ್ಬರು ಮಾನಸಿಕ ಒತ್ತಡ, ಖಿನ್ನತೆಗೆ ಒಳಗಾಗುತ್ತಿದ್ದು, ಮಾನಸಿಕ ಒತ್ತಡ, ಖಿನ್ನತೆ, ರೋಗ ರುಜಿನುಗಳಿಂದ ದೂರವಿರಲು ಹಾಗೂ ಉತ್ತಮ ಆರೋಗ್ಯ ಹೊಂದಲು ಪ್ರತಿಯೊಬ್ಬರು ಯೋಗ ಅಭ್ಯಾಸ ರೂಡಿಸಿಕೊಳ್ಳುವದು ಅತೀ ಅವಶ್ಯಕವಾಗಿದೆ. ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಯೋಗ ಅಭ್ಯಾಸ ಅಳವಡಿಸಿಕೊಂಡು ಇತರರಿಗೂ ಈ ಕುರಿತು ಪ್ರೇರೆಪಿಸಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವಲಿಂಗಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ್, ವಿವಿಧ ಇಲಾಖೆ ಅಧಿಕಾರಿಗಳು, ವಿವಿಧ ಯೋಗ ಸಂಸ್ಥೆಯ ಯೋಗ ಶಿಕ್ಷಕರು, ಯೋಗಪಟುಗಳು, ಕ್ರೀಡಾಶಾಲೆಯ ಕ್ರೀಡಾಪಟುಗಳು ಹಾಗೂ ತರಬೇತುದಾರರು, ತರಬೇತಿ ಮಾಡುತ್ತಿರುವ ಅಥ್ಲೇಟಿಕ್ ಕ್ರೀಡಾಪಟುಗಳು, ಯೋಗಾಸಕ್ತರು ಭಾಗವಹಿಸಿದ್ದರು.