ಯೋಗ:ಮನಸ್ಸು ಮತ್ತು ದೇಹವನ್ನು ಒಗ್ಗೂಡಿಸುವ ಅತ್ಯದ್ಭುತ ವಿಜ್ಞಾನ-ಪತ್ತಾರ

ಗುರುಗುಂಟ-ಯೋಗ ಅನ್ನೋದು ಕೇವಲ ದೈಹಿಕ ವ್ಯಾಯಾಮ ಅಲ್ಲ,ಅದು ಮನಸ್ಸು ಮತ್ತು ದೇಹವನ್ನು ಒಗ್ಗೂಡಿಸುವ ಅತ್ಯದ್ಭುತ ವಿಜ್ಞಾನ ಎಂದು ಪತಂಜಲಿ ಯೋಗ ಸಮಿತಿ ರಾಯಚೂರು ಜಿಲ್ಲಾ ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಆನಂದ ಪತ್ತಾರ್ ಹೇಳಿದರು.
ಸ್ಥಳೀಯ ರಾಷ್ಟ್ರೀಯ ಹೆದ್ದಾರಿ ೧೫೦(ಂ) ಗೆ ಹೊಂದಿಕೊಂಡ ಶ್ರೀದೇವಿ ಅಯ್ಯಪ್ಪಸ್ವಾಮಿ ಧ್ಯಾನ ಮಂದಿರದಲ್ಲಿ ವಾಸವಿ ಯುವಜನ ಸಂಘ ವಾಸವಿ ಮಹಿಳಾ ಸಂಘ ಹಾಗು ಲಿಂಗಸೂಗೂರು ಪತಂಜಲಿ ಯೋಗ ಸಮಿತಿಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಉಚಿತ ಯೋಗ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.
ಕಾರಣ ನಿತ್ಯ ಜೀವನದಲ್ಲಿ ಯೋಗ ಮತ್ತು ಪ್ರಾಣಾಯಮ ಅಳವಡಿಸಿಕೊಂಡು ರೋಗದಿಂದ ವಿಯೋಗ ಹೊಂದಿ ಎಂದರು.
ಸಭೆಯನ್ನುದ್ದೇಶಿಸಿ ಪತಂಜಲಿ ಯೋಗ ಸಮಿತಿ ತಾಲೂಕು ಅಧ್ಯಕ್ಷ ಈರಣ್ಣ ಗುರುಸ್ವಾಮಿ, ಶ್ರೀದೇವಿ ಅಯ್ಯಪ್ಪಸ್ವಾಮಿ ಧ್ಯಾನ ಮಂದಿರದ ಅಧ್ಯಕ್ಷ ಕೃಷ್ಣಾಶ್ರೇಷ್ಠಿ ಕಿನ್ನಾಳ,ಗೌರವಾಧ್ಯಕ್ಷ ಆನಂದ ತುರ್ವಿಹಾಳ್, ಶಿಕ್ಷಕ ಅಶೋಕ ವಿಜಯಪುರ, ಡಾ?ವಿಕ್ರಂ ಪಾಟೀಲ್, ಶ್ರೀಮತಿ ಆರ್.ವಿಜಯಲಕ್ಷ್ಮಿ ಮಾತನಾಡಿದರು.
ಅನಿಸಿಕೆ: ಯೋಗ ಶಿಬಿರದಿಂದ ದೇಹದ ಅಂಗಾಂಗಗಳಲ್ಲಾದ ಪೂರಕ ಬೆಳವಣಿಗೆಗಳನ್ನು ಶಿಬಿರಾರ್ಥಿಗಳಾದ ಮಾಣಿಕ ಮಿರಿಯಾಳ್, ಶಿಕ್ಷಕ ರಾಘವೇಂದ್ರ ಆಳಂದ್, ಸಿದ್ರಾಮಪ್ಪ ಕೋರಿ, ಆರ್.ಸಂಗೀತ, ಹೇಮಾ ಕಿನ್ನಾಳ, ವೀಣಾ ಕೋರಿ, ಸಭೆಗೆ ತಿಳಿಸಿದರು.
ವೇದಿಕೆಯಲ್ಲಿ ಆರ್.ವಿದ್ಯಾಧರ, ಶರಣಪ್ಪ ಸಜ್ಜನ್, ಡಾ.ನಾಗರಾಜ ಕುಂಬಾರ, ನಾಗರಾಜ ಶಿಂಧ್ಯೆ, ಆರ್. ಪ್ರದೀಪ, ವಾಸವಿ ಮಹಿಳಾ ಸಂಘದ ಕೋಶಾಧ್ಯಕ್ಷೆ ಭಾರತಿ ಕಿನ್ನಾಳ, ಡಾ.ಪ್ರಿಯಾಂಕ ಪಾಟೀಲ್, ಮಸ್ಕಿ, ಉಪಸ್ಥಿತರಿದ್ದರು.