ಯೋಗಪ್ಪನವರರಿಗೆ ಅಭಿನಂದನೆ, ಗ್ರಂಥ ಸಮರ್ಪಣೆ

ಬಾದಾಮಿ, ಮಾ30 : ಶ್ರೀ ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆಯ ಬಸವ ಮಂಟಪದಲ್ಲಿ ಎಪ್ರಿಲ್2 2021 ಶುಕ್ರವಾರ ಬೆಳಿಗ್ಗೆ 11ಗಂಟೆಗೆ ಡಾ.ಎಚ್.ಎಫ್.ಯೋಗಪ್ಪನವರ ಅಭಿನಂದನ ಸಮಿತಿ ವತಿಯಿಂದ ಡಾ.ಎಚ್.ಎಫ್.ಯೋಗಪ್ಪನವರ ಅಭಿನಂದನೆ ಹಾಗೂ ಗ್ರಂಥ ಸಮರ್ಪಣೆ ಕಾರ್ಯಕ್ರಮ ಜರುಗುವುದು.
ಅಧ್ಯಕ್ಷತೆ ಶ್ರೀ ವೀರಪುಲಕೇಶಿ ವಿದ್ಯಾವರ್ಧಕ ಸಂಸ್ಥೆಯ ಚೇರಮನ್ ಏ.ಸಿ.ಪಟ್ಟಣದ ವಹಿಸುವರು.
ಕಾರ್ಯಕ್ರಮವನ್ನು ಬಾಗಲಕೋಟೆ ಖ್ಯಾತ ಸರ್ಜನ್‍ರು ಡಾ.ಬಿ.ಎಚ್.ಕೆರೂಡಿ ಉಧ್ಘಾಟಿಸುವರು. ಆಸಯನುಡಿ ವಿಶ್ರಾಂತಿ ಕಮಾಂಡೆಂಟ್ ಅಶ್ವದಳ ಮೈಸೂರು ಎಸ್.ಜಿ.ಮರಿಬಾಳಶೆಟ್ಟಿ ಅಡುವರು ಗ್ರಂಥ ಸಮರ್ಪಣೆ ವಿಶ್ರಾಂತಿ ಕುಲಪತಿಗಳು, ಅಕ್ಕಮಹಾದೇವಿ ಮಹಿಳಾ ವಿ.ವಿ.ವಿಜಯಪುರ ಡಾ.ಮೀನಾ ಚಂದಾವರಕರ ಸಮರ್ಪಣೆ ಮಾಡುವರು. ಗ್ರಂಥ ಪರಿಚಯ ವಿಶ್ರಾಂತಿ ಪ್ರಚಾರ್ಯರು ಜಿ.ಬಿ.ಶಿಲವಂತರ ಮಾಡುವರು.
ಅಭಿನಂದನ ನುಡಿಯನ್ನು ಸಂಸ್ಕ್ರತಿ ಚಿಂತಕರು ಬಾಗಲಕೋಟಯ ಬಸವರಾಜ ಜಿ.ಭಗವತಿ ನುಡಿಯುವರು. ಅಬಿನಂದನರು ಎಚ್.ಎಫ್.ಯೋಗಪ್ಪನವರು ಹಾಗೂ ಮಂಗಲಾ ಎಚ್.ಯೋಗಪ್ಪನವರ ಸ್ವೂಕರಿಸುವರು ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿದಿದ್ದಾರೆ.