ಯೋಗಪಟು ಡಾ. ಕೆ. ಜೈಮುನಿಗೆ ಇಂಟರ್‌ ನ್ಯಾಷನಲ್ ಯೋಗ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ

ದಾವಣಗೆರೆ.ಜೂ.೨೨ : ಇಂಟರ್‌ನ್ಯಾಷನಲ್ ಯೋಗ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ನ್ಯೂ ಡೆಲ್ಲಿ ವತಿಯಿಂದ ಇತ್ತೀಚಿಗೆ  ಆನ್ಲೈನ್ ಯೋಗ ಕಾರ್ಯಕ್ರಮದಲ್ಲಿ ಒಂದು ನಿಮಿಷಗಳ ಕಾಲ ಭುಜಂಗಾಸನ ಬಂಗಿಯಲ್ಲಿ  ಸ್ಪರ್ಧೆಯನ್ನು ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಯೋಗಪಟು ಡಾ. ಕೆ. ಜೈಮುನಿ ಇವರಿಗೆ ಇಂಟರ್‌ ನ್ಯಾಷನಲ್ ಯೋಗ ಬುಕ್ ಆಫ್ ರೆಕಾರ್ಡ್ ಆಯ್ಕೆಯಾಗಿರುವುದರಿಂದ ಈ ಪ್ರಶಸ್ತಿಯನ್ನು ದಾವಣಗೆರೆಯಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆ  ಕಾರ್ಯಕ್ರಮದಲ್ಲಿ ಆಯುರ್ವೇದ ಪಂಡಿತ, ಯೋಗಚಾರ್ಯ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಪ್ರಶಸ್ತಿ ನೀಡಿ, ಗೌರವಿಸಿದರು.
ಕು. ಅನನ್ಯ , ಕು. ಪ್ರಿಯ ಕೆ. ಆರ್, ಶ್ರೀಮತಿ ಶೈಲಜಾ ಹಾಗೂ ಉಮೇಶ್ ಇವರುಗಳಿಗೂ ಸಹ ಪ್ರಶಸ್ತಿ ಲಭಿಸಿದೆ. ಈ ಸಂದರ್ಭದಲ್ಲಿ ಯೋಗ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಜಿಲ್ಲಾಡಳಿತ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು