ಯೋಗದಿನಕ್ಕಾಗಿ  : ಜೂ20 ರಂದು ಜನ ಜಾಗೃತಿ ಜಾಥಾ.


ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ16: ವಿಶ್ವ ಯೋಗದಿನವನ್ನು ಜಿಲ್ಲಾಡಳಿತ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಿದ್ದು ಇದರಾಂಗವಾಗಿ ಜೂನ್20 ರಂದು ಜಾಗೃತಿ ಜಾಥಾ ಹಮ್ಮಿಕೊಂಡಿದೆ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು  ವಿಶ್ವ ಯೋಗದಿನ ನಮ್ಮ ಭಾರತಕ್ಕೆ ಹೆಮ್ಮೆಯ ವಿಷಯ ಈ ಭಾರಿ 9ನೇ ಯೋಗದಿನವನ್ನು ವಿಜಯನಗರ ಜಿಲ್ಲಾಡಳಿತ ಜಿಲ್ಲಾ ಹಂತದ ಕಾರ್ಯಕ್ರಮವಾಗಿ ಆಚರಿಸಲಿದ್ದು ವಿಜಯನಗರ ಜಿಲ್ಲಾ ಕ್ರೀಡಾಂಗಣದಲ್ಲಿ ಏಕಕಾಲಕ್ಕೆ 2 ಸಾವಿರ ಜನ ಯೋಗಾಭ್ಯಾಸ ಮಾಡುವ ಮೂಲಕ ಆಚರಿಸಲು ತೀರ್ಮಾನಿಸಲಾಗಿದ್ದು ಶಿಷ್ಠಾಚಾರದೊಂದಿಗೆ ಕಾರ್ಯಕ್ರಮ ರೂಪಿಸುವ ಮೂಲಕ ಯೋಗಾಶಕ್ತರಿಗೆ ಆಸನದ ವ್ಯವಸ್ಥೆ, ನೆಲಹಾಸು, ಸ್ವಚ್ಛತೆ, ಮೂಲಸೌಕರ್ಯ ನಗರಸಭೆಯ ನಿರ್ವಹಿಸುವ ಮೂಲಕ ಯಶಸ್ವಿಗೊಳಿಸುವಂತೆ ಸೂಚಿಸಿದರು. ಆಂಬ್ಯೂಲೇನ್ಸ್, ವೈದ್ಯಕೀಯ ಸೇವೆ ಬಂದವರಿಗೆ ಲಘು ಉಪಹಾರ, ಜಿಲ್ಲಾಡಳಿತ ವಿವಿಧ ಇಲಾಖೆಗಳು ಹಾಗೂ ವಿಶ್ವ ಯೋಗದಿನಕ್ಕೆ ಬಂದಿರುವ ಅನುದಾನ ಹಾಗೂ ಪ್ರಾಯೋಜಕರ ನೆರವಿನಿಂದ ಮಾಡಲಾಗುವುದು. 
 ಯೋಗ ದಿನದ ಜಾಗೃತಿಗಾಗಿ ಜಾಥಾ:
ಜೂನ್ 21 ರಂದು ನಡೆಯುವ ವಿಶ್ವ ಯೋಗದಿನದಲ್ಲಿ ಹೆಚ್ಚಿನ ಸಂಖ್ಯೆಯ ಜನ ಯೋಗಸಾಧನೆಯಲ್ಲಿ ತೊಡಗುವಂತೆ ಮಾಡಲು ಜೂನ್ 20 ರಂದು ಬೆಳಿಗ್ಗೆ 7.30ಕ್ಕೆ ಬೈಕ್ ಮೂಲಕ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ.
ಸ್ಥಳೀಯ ಪತಂಜಲಿ ಯೋಗ ಸಮಿತಿಯ ನೂರಾರು ಯೋಗಸಾಧಕರು ನಗರದ ಫ್ರೀಡಂ ಪಾರ್ಕ್ ನಲ್ಲಿ ದೈನಂದಿನ ಯೋಗಸಾಧನೆಯನ್ನು ಪೂರೈಸಿ ಯೋಗದ ಮಹತ್ವ ತಿಳಿಸು ಯೋಗದಿನದ ಜಾಗೃತಿಗಾಗಿ ಜಾಥಾ ಹಮ್ಮಿಕೊಂಡಿದೆ ನಗರದ ಪ್ರಮುಖ ಬೀದಿಗಳಲ್ಲಿ ಬೈಕ್ ಜಾಥಾ ನಡೆಯಲಿದ್ದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧ ಆಯುಷ್ ಇಲಾಖಾಧಿಕಾರಿ ಡಾ.ಸುಜಾತಾ ಪಾಟೀಲ್ ಪಾಲ್ಗೊಳ್ಳುವರು.
ಪತಂಜಲಿ ಯೋಗ ಸಮಿತಿಯ ರಾಜ್ಯ ಯುವ ಪ್ರಭಾರಿ ಕಿರಣ್‍ಕುಮಾರ, ರಾಜೇಶ್ ಕರ್ವಾ, ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ಮಾನಸಾ ಅಕ್ಕ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಿ.ಕೊಟ್ರೇಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸಲೀಂ ಸೇರಿದಂತೆ ಜಿಲ್ಲಾ ಹಂತದ ಅಧಿಕಾರಿಗಳು ಯೋಗ ಸಮಿತಿಗಳ ಸದಸ್ಯರು, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಭೂಪಾಳ ಪ್ರಹ್ಲಾದ್, ಚಂದ್ರಕಾಂತ ಕಾಮತ್ ಪದಾಧಿಕಾರಿಗಳು ಆಯುಷ್ ಇಲಾಖೆಯ ವೈದ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.