ಯೋಗದಿಂದ ಸದೃಢ ಸಮಾಜ ನಿರ್ಮಾಣ ಸಾಧ್ಯ

ಕೆಂಭಾವಿ:ಜೂ.22:ಯೋಗದಿಂದ ಆತ್ಮಬಲ, ಮನೋಬಲ, ದೈಹಿಕ ಬಲ ಹೆಚ್ಚುತ್ತದೆ. ಇದು ಭಾರತವು ಪ್ರಪಂಚಕ್ಕೆ ಕೊಟ್ಟ ಅದ್ಬುತ ಕೊಡುಗೆ ಎಂದು ಮುಖ್ಯಗುರು ರೇವಣಸಿದ್ದಯ್ಯ ಮಠ ಹೇಳಿದರು.
ಪಟ್ಟಣದ ಸ್ಪಂದನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 9 ನೆ ಅಂತರಾಷ್ಟ್ರಿಯ ಯೋಗ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಯೋಗಾಭ್ಯಾಸ ತಿಳಿಸಿಕೊಟ್ಟು ಮಾತನಾಡಿದ ಅವರು, ಶಾಲಾ ಹಂತದಲ್ಲಿಯೇ ಯೋಗ ಶಿಕ್ಷಣ ಕಡ್ಡಾಯ ಮಾಡಬೇಕು. ಆಗ ಮಾತ್ರ ಸದೃಡ ಆರೋಗ್ಯ ಇರುವ ಮುಂದಿನ ಪ್ರಜೆಗಳನ್ನು ದೇಶಕ್ಕೆ ಕೊಡಲು ಸಾಧ್ಯ. ಪ್ರತಿದಿನ ಇಂತಿಷ್ಟು ಸಮಯ ಯೋಗಕ್ಕೆ ಮೀಸಲಿಡಬೇಕು ಎಂದು ಹೇಳಿದರು. ಶಾಲಾ ಶಿಕ್ಷಕ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು.