ಯೋಗದಿಂದ ರೋಗ ದೂರ ಸದೃಡ ಆರೋಗ್ಯ

ಸಿಂಧನೂರು,ಜೂ.೨೧-
ಯೋಗ ಮಾಡುವದರಿಂದ ಮನಷ್ಯನ ಆರೋಗ್ಯ ಹಾಗೂ ಮನಸ್ಸು ಹತೋಟಿಯಲ್ಲಿರುತ್ತದೆ ಆದ್ದರಿಂದ ಪ್ರತಿ ಯೊಬ್ಬರು ಯೋಗ ಮಾಡುವ ಮೂಲಕ ಆರೋಗ್ಯ ವಾಗಿರಬೇಕು ಎಂದು ತಾಲುಕಾ ಆರೋಗ್ಯ ಅಧಿಕಾರಿ ಡಾ.ಅಯ್ಯನಗೌಡ ಹೇಳಿದರು.
ನಗರದ ಸನ್ ರೈಸ್ ಪ್ಯಾರಮೆಡಿಕಲ್ ಕಾಲೇಜ್‌ನಲ್ಲಿ ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲ್ಲೂಕ ಆರೋಗ್ಯ ಅಧಿಕಾರಿಗಳ ಕಛೇರಿ, ನಗರದ ನಮ್ಮ ಕ್ಲಿನಿಕ್ ಸನ್ ರೈಸ್ ಗ್ರೂಪ್ ಆಫ್ ಇನಸ್ಟಿಟ್ಯೂಟ್ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಯೋಗವು ಮನುಷ್ಯನ ದೇಹ ಮತ್ತು ಆರೋಗ್ಯ ಕ್ಕೆಉತ್ತಮ ಔಷಧಿಯಾಗಿದೆ ಎಂದರು
ದೇಹ ,ಮನಸ್ಸು ಆರೋಗ್ಯವಾಗಿರಲು ಯೋಗಾಭ್ಯಾಸ ಮಾಡಿ. ಯೋಗವು ಮನುಷ್ಯನ ಮನಸ್ಸು ಮತ್ತು ದೇಹವನ್ನು ಸಂಪರ್ಕಿಸುವ ಪ್ರಾಚೀನ ಕಲೆಯಾಗಿದೆ ಇದು ನಮ್ಮ ದೇಹದ ಅಂಶಗಳನ್ನು ಸಮತೋಲನಗೊಳಿಸುವ ಮೂಲಕ ಧ್ಯಾನ ವಿಶ್ರಾಂತಿ ಪಡೆಯಲು ನಮಗೆ ಸಹಾಯ ಮಾಡುತ್ತದೆ ಎಂದರು .
ಯೋಗವು ದೇಹದ, ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಲು ಸಹಾಯ ಮಾಡಿ ಒತ್ತಡ ,ಆತಂಕ ದೂರ ಮಾಡುವ ಜೊತೆಗೆ ಜನರಲ್ಲಿ ಸಾಮರಸ್ಯ ಮತ್ತು ಶಾಂತಿ ಬರುವಂತೆ ಮಾಡಿ ಒಂದುಗೂಡಿಸುತ್ತದೆಎಂದರು.
ವಿದ್ಯಾರ್ಥಿಗಳು ಯೋಗದ ಮಹತ್ವ ತಿಳಿದುಕೊಂಡು ಯೋಗ ಶಿಬಿರದ ಸದುಪಯೋಗ ಪಡೆದುಕೊಂಡು ಸದೃಢ ಆರೋಗ್ಯ ವಂತರಾಗಬೇಕು ಎಂದು ಕಾಲೇಜಿನ ಅಧ್ಯಕ್ಷ ರಾದ. ಇರ್ಪಾನ ವಿದ್ಯಾರ್ಥಿಗಳಿಗೆ ಹೇಳಿದರು.
ಯೋಗ ಶಿಕ್ಷಕರಾದ ಅಂದನಯ್ಯ ವಿದ್ಯಾರ್ಥಿಗಳಿಗೆ ಯೋಗ ಅಭ್ಯಾಸ ಮಾಡಿಸಿದರು ಆರೋಗ್ಯ ಇಲಾಖೆಯ ವತಿಯಿಂದ ಸನ್ ರೈಸ್ ವಿದ್ಯಾಸಂಸ್ಥೆ ಇರ್ಫಾನ್, ಪ್ರಾಚಾರ್ಯ ಸಿರಿಲ್ ಇವರನ್ನು ಸನ್ಮಾನ ಮಾಡಲಾಯಿತು ನಮ್ಮ ಕ್ಲಿನಿಕ್ ವೈದ್ಯಾದಿಕಾರಿಗಳಾದ ಮಣಿ ಶಂಕರ್, ಲಾಬ್ ಟೆಕ್ನನಿಷನ್ ಹಜೀಜ್ ಬಿ.ಹೆಚ್, ಇ.ಓ ಗೀತ ಹೀರೆಮಠ, ಶುಶ್ರೂಷಾಕ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಕಾಲೇಜ್ ಪ್ರಾಂಶುಪಾಲರು, ವಸೀಂ ಹುಷೇನ್, ಚಕ್ರವರ್ತಿ, ಲಾಜರ್ ಸಿರಿಲ್, ಉಪನ್ಯಾಸಕರು, ಆಶುಪಾಷ, ಬಸವಲಿಂಗ, ರಾಜೇಶ್, ಶರೀಪ್, ಭವಾನಿ, ಜ್ಞಾನೇಶ್ವರಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಸಿದ್ದರು.