ಯೋಗದಿಂದ ರೋಗಮುಕ್ತಿ:ಪ್ರಾ.ಬೆನಕಟ್ಟಿ

ತಾಳಿಕೋಟೆ:ಜೂ.22: ದಿನನಿತ್ಯ ಬೆಳಗಿನ ಜಾವ ಸೂರ್ಯ ನಮಸ್ಕಾರಗಳಂತಹ ಆಸನಗಳನ್ನು ಮಾಡುತ್ತಾ ಯೋಗದ ಕೆಲವು ಆಸನಗಳನ್ನು ಅಳವಡಿಸಿಕೊಂಡರೆ ಆರೋಗ್ಯದಿಂದ ಬಾಳಬಹುದಾಗಿದೆ ಎಂದು ಎಸ್.ಕೆ.ಪ್ರೌಢ ಶಾಲೆಯ ಉಪ ಪ್ರಾಚಾರ್ಯರಾದ ಎಸ್.ವ್ಹಿ.ಬೆನಕಟ್ಟಿ ಅವರು ಹೇಳಿದರು.

ಬುಧವಾರರಂದು ಸ್ಥಳೀಯ ಎಸ್.ಕೆ.ಪ್ರೌಢ ಶಾಲೆಯಲ್ಲಿ ಏರ್ಪಡಿಸಲಾದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು ರಕ್ತದೊತ್ತಡ ಅಲ್ಲದೇ ಜಾಯಿಂಟ್ಸ್ ಪೇನಗಳಿಂದ ಜಾಗೃತರಾಗಬೇಕು ಈ ಕುರಿತು ಯೋಗದ ವೈಧ್ಯರೊಂದಿಗೆ ಅದನ್ನು ನಿರ್ಮೂಲನೆಗಾಗಿ ಯೋಗಾಭ್ಯಾಸಕ್ಕೆ ಮುಂದಾಗಬೇಕೆಂದರು.

ಇನ್ನೋರ್ವ ಎಸ್.ಕೆ.ಪ್ರೌಢ ಶಾಲೆಯ ಅಧ್ಯಕ್ಷರಾದ ಎಂ.ಜಿ.ಕತ್ತಿ ಅವರು ಮಾತನಾಡಿ ದೈಹಿಕವಾಗಿ, ಮಾನಸಿಕವಾಗಿ ನೆಮ್ಮದಿ ಮತ್ತು ದೀರ್ಘಾಯುಷ್ಯಕ್ಕೆ ಬೇಕಾದ ನೆಮ್ಮದಿ ಸೂತ್ರಗಳನ್ನು ಅಳವಡಿಸಿಕೊಂಡು ನಡೆಯಬೇಕೆಂದು ವಿಧ್ಯಾರ್ಥಿಗಳಿಗೆ ಸಲಹೆ ನೀಡಿದ ಅವರು ಯೋಗ ಅಂದರೆ ಸಾಮಾನ್ಯವಲ್ಲಾ ಯೋಗದಿಂದ ರೋಗವೆಂಬುದು ಮುಕ್ತಿಯಾಗಲಿದೆ ಯೋಗಾಸನ ಅನ್ನುವದು ನಮ್ಮ ಪೂರ್ವಜರು ನಮಗೆ ಬಿಟ್ಟು ಹೋದ ಹಾಗೂ ಹಾಕಿಕೊಟ್ಟ ಮಾರ್ಗವಾಗಿದೆ ಎಂದು ಹೇಳಿದರೆ ತಪ್ಪಾಗಲಾರದೆಂದು ಹೇಳಿದ ಅವರು ಯೋಗ ಮಾಡತಕ್ಕಂತಹ ವ್ಯಕ್ತಿಗೆ ರೋಗದಿಂದ ದೂರುಳಿಯುತ್ತಾನೆ ಆತನಿಗೆ ರೋಗದ ಭಯವೇ ಇರುವದಿಲ್ಲಾ ಕಾರಣ ವಿದ್ಯಾರ್ಥಿಗಳು ಒಳ್ಳೆಯ ಆಹಾರ ಸೇವನೆ ಮಾಡಬೇಕು ಇಂತಹ ಭಾವನೆ ಹೊಂದಬೇಕು ಹಣ ಆಸ್ತಿ ಅಂತಸ್ಥಿಗೆ ನೀಡುವ ಪ್ರಾದಾನ್ಯತೆಯನ್ನು ಊಟ ಮಾಡುವ ಆಹಾರಕ್ಕೂ ನೀಡುವ ಕಾರ್ಯ ಮಾಡಿದರೆ ಒಳ್ಳೆಯ ಸದೃಡ ದೇಹವನ್ನು ಬೆಳೆಸಿಕೊಳ್ಳಬಹುದಾಗಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶಿಕ್ಷಕರಾದ ಆರ್.ಬಿ.ದಾನಿ ಅವರು ಯೋಗದ ಮಹತ್ವ ಕುರಿತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶಿಕ್ಷಕ ಜೆ.ಎಸ್.ಕಟ್ಟಿಮನಿ ಅವರು ವಿದ್ಯಾರ್ಥಿಗಳಿಗೆ ಯೋಗಾಸನವನ್ನು ಪ್ರದರ್ಶಿಸುವದರೊಂದಿಗೆ ಮನವರಿಕೆ ಮಾಡಿಕೊಟ್ಟರು.

ಶಿಕ್ಷಕ ಆರ್.ಜಿ.ರಾಠೋಡ ಸ್ವಾಗತಿಸಿದರು. ಶಿಕ್ಷಕ ಎಸ್.ಎಂ.ಪಾಟೀಲ ನಿರೂಪಿಸಿ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.