ಯೋಗದಿಂದ ಮನಸ್ಸು ಸ್ಥಿರ-ಜ್ಯೋತಿಅಕ್ಕ

ಸಿರವಾರ.ಜೂ.೨೩- ನಿತ್ಯ ಯೋಗ ಮಾಡುವದರಿಂದ ನಮ್ಮ ಮನಸ್ಸು ಸ್ಥಿರವಾಗಿ ಇರುತ್ತದೆ. ಇದರಿಂದ ಆರೋಗ್ಯದ ಸಮಸ್ಯೆಗಳು ಮಾಯಾ ಎಂದು ಪ್ರಜಾಪೀತ ಬ್ರಹ್ಮಕುಮಾರಿ ಜ್ಯೋತಿ ಅಕ್ಕ ಹೇಳಿದರು.
ಪಟ್ಟಣದ ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರಿ ವಿಶ್ವ ವಿದ್ಯಾಲಯ ಓಂಶಾಂತಿ ನಿಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ ಯೋಗಮಾಡಿಸುವ ಮೂಲಕ ಯೋಗದಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಚುಕ್ಕಿ ಸೂಗಪ್ಪ ಸಾಹುಕಾರ್, ಎನ್.ಉದಯಕುಮಾರ್, ಎ.ಬಸವಲಿಂಗಪ್ಪ ಸಾಹುಕಾರ್, ಪ.ಪಂ.ಸದಸ್ಯ ಕೃಷ್ಣನಾಯಕ, ಮಲ್ಲಪ್ಪ, ಶ್ರೀನಿವಾಸ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.